ಉತ್ತರಕನ್ನಡ : ರಾಜ್ಯದಲ್ಲಿ ಮಂಗನ ಕಾಯಿಲೆ ದಿನದಿಂದ ದಿನಕ್ಕೆ ಆತಂಕ ಸೃಷ್ಟಿಸುತ್ತಿದ್ದು ಇತ್ತೀಚಿಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಇಬ್ಬರು ಸೇರಿ ಇದೀಗ ಮತ್ತೆ ಮೂವರು ವೃದ್ದರು ಈ ಕಾಯಿಲೆಗೆ ಬಲಿಯಾಗಿದ್ದಾರೆ. ಈ ಮೂಲಕ ಮಲೆನಾಡಿನಲ್ಲಿ ಮಂಗನ ಕಾಯಿಲೆ ದಿನದಿಂದ ದಿನಕ್ಕೆ ಉಲ್ಭಣ ಗೋಳ್ಳುತ್ತಿದ್ದು ಜನರಲ್ಲಿ ಆತಂಕ ಸೃಷ್ಟಿಸಿದೆ.
ರಾಜ್ಯದ ‘SSLC ಪರೀಕ್ಷೆ-1’ಕ್ಕೆ ಹಾಜರಾಗುತ್ತಿರುವ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ: ಅಂತಿಮ ‘ಪ್ರವೇಶ ಪತ್ರ’ ವಿತರಣೆ
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕೊರ್ಲಕೈ ಪ್ರಾಥಮಿಕ ಕೇಂದ್ರದ ಆರೋಗ್ಯ ವ್ಯಾಪ್ತಿಯ ಹೆಗ್ಡೆಕೊಪ್ಪದ 80 ವರ್ಷ ಹಾಗೂ ಕಲ್ಲೂರಿನ 65 ವರ್ಷದ ವೃದ್ಧ ಸೋಮವಾರ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಈ ಮೂಲಕ ಕಳೆದ ಮೂರು ತಿಂಗಳಿಂದ ಮಂಗನ ಕಾಯಿಲೆಗೆ ತಾಲೂಕಿನಲ್ಲಿ ನಾಲ್ವರು ಸೇರಿ ಜಿಲ್ಲೆಯ ಐವರು ಬಲಿಯಾದಂತಾಗಿದೆ.
ಬೆಂಗಳೂರು ನೀರಿನ ಸಮಸ್ಯೆ: 556 ಕೋಟಿ ರೂ.ಗಳ ‘ಕ್ರಿಯಾ ಯೋಜನೆ’ ಸಿದ್ಧಪಡಿಸಿದ ರಾಜ್ಯ ಸರ್ಕಾರ
ಬಸವ ಪೂಜಾರಿ ಇನ್ನು ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರು ತಾಲೂಕಿನ ಮೇಲ್ಪಾಲ್ ಗ್ರಾಮದ ಬಸವ ಪೂಜಾರಿ (71) ಭಾನುವಾರ ಸಂಜೆ ಬಲಿಯಾಗಿದ್ದಾರೆ. ಹನ್ನೆರಡು ದಿನಗಳ ಹಿಂದೆ ಇವರಿಗೆ ಜ್ವರ ಕಾಣಿಸಿಕೊಂಡಿದ್ದು, ಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಮನೆಗೆ ಬಂದು, ಬಳಿಕ ತೀರ್ಥಹಳ್ಳಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಮಣಿಪಾಲದ ಕೆಎಂಸಿಗೆ ದಾಖಲು ಮಾಡಲಾಗಿತ್ತು.
‘ಕೆಂಗೇರಿ-ಹೆಜ್ಜಾಲ’ ಕ್ರಾಸಿಂಗ್ ಕಾಮಗಾರಿ ಹಿನ್ನೆಲೆ : ಇಂದಿನಿಂದ ‘ಬೆಂಗಳೂರು-ಮೈಸೂರು’ ಕೆಲ ರೈಲು ರದ್ದು
ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಈ ಮೂಲಕ ಈ ವರ್ಷ ಮಂಗನಕಾಯಿಲೆಗೆ ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ ಮೂರಕ್ಕೇರಿದೆ. ಈಗಾಗಲೇ ಆರೋಗ್ಯ ಇಲಾಖೆಯು ತೀವ್ರ ಕಟ್ಟೇಚ್ಚರ ವಹಿಸುತ್ತಿದ್ದು ಮಂಗಳ ಕಾಯಿಲೆ ತಡೆ ಗಟ್ಟುವಲ್ಲಿ ಹಲವು ಕ್ರಮಗಳನ್ನು ಕೂಡ ಕೈಗೊಂಡಿದೆ ಎಂದು ತಿಳಿದುಬಂದಿದೆ.