ಚಿಕ್ಕಬಳ್ಳಾಪುರ : ಎಎಸ್ಐ ಮನೆಗೆ ನುಗ್ಗಿದ ದುಷ್ಕರ್ಮಿಗಳು ಗುಂಡು ಹಾರಿಸಿ ದರೋಡೆ ಮಾಡಿದ ಘಟನೆ ತಾಲೂಕಿನ ಪೆರೇಸೆಂದ್ರ ಗ್ರಾಮದಲ್ಲಿ ನಡೆದಿತ್ತು. ಪ್ರಕರಣ ಸಂಬಂಧ ಮೂವರು ಅಂತರರಾಜ್ಯ ದರೋಡೆಕೋರರ ಬಂಧನವಾಗಿದೆ.
ನಾಲ್ವರು ದುಷ್ಕರ್ಮಿಗಳು ಬಾಗೇಪಲ್ಲಿ ಠಾಣೆ ಎಎಸ್ಐ ನಾರಾಯಣ ಸ್ವಾಮಿ ಮನೆಗೆ ನುಗ್ಗಿ, ನಾರಾಯಣ ಸ್ವಾಮಿ ಅವರ ಮಗ ಶರತ್ ಮೇಲೆ ಗುಂಡು ಹಾರಿಸಿ ದರೋಡೆ ಮಾಡಿ ಎಸ್ಕೇಪ್ ಆಗಿದ್ದರು.
ಬಂಧಿತರನ್ನು ಉತ್ತರಪ್ರದೇಶದ ರಾಜ್ಯದ ಬಿಜ್ನೂರು ಜಿಲ್ಲೆಯ ಬಹಿರಂ ನಗರದ ಆರೀಫ್ ಅಲಿಯಾಸ್ ಮಹಮದ್ ಆರೀಫ್ ಅನ್ಸಾರಿ (35), ಉತ್ತರಪ್ರದೇಶ ರಾಜ್ಯ ರಾಮ್ಪುರ ಜಿಲ್ಲೆಯ ಮಿಲಕ್ ತಾಲೂಕಿನ ಚಿಂತಮಾನ್ ಖಾತೆ ಗ್ರಾಮದ ಜಮಷೇದ್ ಖಾನ್ ಅಲಿಯಾಸ್ ಚೋಟು(27), ಹಾಗೂ ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ಕದಿರಿ ನಗರದ ನಿಝಾಮ ಅಲೀ ಕಾಲೋನಿಯ ನಿವಾಸಿ ಪಠಾನ್ ಮೊಹ್ಮದ್ ಹ್ಯಾರೀಸ್ ಖಾನ್(30 ) ಎಂದು ಗುರುತಿಸಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್ ಅವರ ಮಾರ್ಗದರ್ಶನದಲ್ಲಿ 5 ತನಿಖಾ ತಂಡಗಳನ್ನು ರಚಿಸಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ 03 ನಾಡ ಪಿಸ್ತೂಲ್, 46 ಬುಲೆಟ್ಗಳು, ಒಟ್ಟು 3 ಲಕ್ಷ 41 ಸಾವಿರ ರೂ. ನಗದು, ಕೃತ್ಯಕ್ಕೆ ಬಳಸಿದ್ದ ಕಾರು , 71.702 ಗ್ರಾಂ ತೂಕದ ಮಾಂಗಲ್ಯ ಸರ, ಮತ್ತು ಬೆಳ್ಳಿಯ 21 ಪೂಜೆ ಸಾಮಾನುಗಳನ್ನು ವಶಪಡಿಸಿಕೊಳ್ಳಲಾಗಿದೆ. ಎಎಸ್ಐ ಮನೆಗೆ ನುಗ್ಗಿದ ದುಷ್ಕರ್ಮಿಗಳು ಗುಂಡು ಹಾರಿಸಿ ದರೋಡೆ ಮಾಡಿದ ಘಟನೆ ತಾಲೂಕಿನ ಪೆರೇಸೆಂದ್ರ ಗ್ರಾಮದಲ್ಲಿ ನಡೆದಿತ್ತು. ಘಟನೆಯಲ್ಲಿ ಶರತ್ ಗೆ ಮೂರ್ನಾಲ್ಕು ಗುಂಡು ತಗುಲಿದ್ದು, ಅವರನ್ನು ಚಿಕ್ಕಬಳ್ಳಾಪುರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.
BIGG NEWS : ಓಲಾ, ಊಬರ್ ದರ ನಿಗದಿ : ಇನ್ನೂ ಆಗದ ನಿರ್ಧಾರ ; ನಾಳಿನ ಸಭೆ ಬಳಿಕ ಹೈಕೋರ್ಟ್ ಗೆ ವರದಿ ಸಲ್ಲಿಕೆ