ಬೆಂಗಳೂರು: ಕೆಲ ದಿನಗಳ ಹಿಂದೆ ಪಾಕಿಸ್ತಾನ್ ಜಿಂದಾಬಾದ್ ಎಂಬುದಾಗಿ ವಿಧಾನಸೌಧದಲ್ಲಿ ಘೋಷಣೆ ಕೂಗಲಾಗಿತ್ತು. ಹೀಗೆ ಘೋಷಣೆ ಕೂಗಿದಂತ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ವಿಧಾನಸೌಧದಲ್ಲಿ ಫೆಬ್ರವರಿ.27ರಂದು ವಿಧಾನಸೌಧದ ಕಾರಿಡಾರಿನಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂಬುದಾಗಿ ಘೋಷಣೆ ಕೂಗಲಾಗಿತ್ತು. ಈ ಘಟನೆ ವಿವಾದಕ್ಕೂ ಕಾರಣವಾಗಿತ್ತು. ಘೋಷಣೆ ಕೂಗಿದ್ದು ಸುಳ್ಳು ಎಂದೇ ಸರ್ಕಾರ ಸಮರ್ಥಿಸಿಕೊಂಡಿತ್ತು. ಆದರೇ ಅದು ನಿಜ ಎಂಬುದಾಗಿ ಎಫ್ಎಸ್ಎಲ್ ತನಿಖೆಯಲ್ಲಿ ಬಹಿರಂಗವಾಗಿತ್ತು.
ಈ ಬೆನ್ನಲ್ಲೆ ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದಂತ ಇಲ್ತಾಜ್, ಮುನಾವರ್ ಹಾಗೂ ಮೊಹಮ್ಮದ್ ನಾಶಿಪುಡಿ ಎಂಬುವರನ್ನು ವಿಧಾನಸೌಧ ಠಾಣೆಯ ಪೊಲೀಸರು ಬಂಧಿಸಿರೋದಾಗಿ ತಿಳಿದು ಬಂದಿದೆ.
ಬಂಧಿತ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಪೊಲೀಸರು ಹಾಜರುಪಡಿಸಲಿದ್ದು, ಈ ಪ್ರಕರಣ ಸಂಬಂಧ ನ್ಯಾಯಾಧೀಶರು ಯಾವ ತೀರ್ಪು ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ಬಿಜೆಪಿ ‘Modi ka Parivar’ ಅಭಿಯಾನ ಆರಂಭ : “ಮೋದಿಗೆ ಕುಟುಂಬವಿಲ್ಲ” ಲಾಲು ಹೇಳಿಕೆಗೆ ತಿರುಗೇಟು