ಬೆಂಗಳೂರು : SSLC ಹಿಂದಿ ಭಾಷಾ ಪರೀಕ್ಷೆಗೆ ಗ್ರೇಡ್ ಮಾರ್ಕ್ಸ್ ನೀಡುವ ವಿಚಾರಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಹೇಳಿಕೆ ನೀಡಿದ್ದು, ಇದರಿಂದ ಏನು ಪ್ರಯೋಜನ ಅಂತ ಬಿಜೆಪಿಯವರು ಕೇಳುತ್ತಾರೆ. ಹಿಂದಿ ಭಾಷೆ ಹೇರಿಕೆಯಿಂದ ಏನು ಲಾಭ ಆಗುತ್ತೆ ಅಂತ ಬಿಜೆಪಿಯವರು ಹೇಳಲಿ.
ಕೇಂದ್ರ ಸಚಿವ ಅಮಿತ್ ಶಾ ಮನವೊಲಿಸಲು ರಾಜ್ಯ ಬಿಜೆಪಿ ನಾಯಕರು ಮಾತನಾಡುತ್ತಾರೆ ಅಷ್ಟೇ. ಇವರು ಸಂಸ್ಕೃತಕ್ಕೆ ಸಾವಿರಾರು ಕೋಟಿ ಹಣ ಕೊಟ್ಟಿದ್ದಾರೆ. ಕನ್ನಡಕ್ಕೆ 10 ವರ್ಷದಿಂದ 20 ಕೋಟಿ ಕೂಡ ಕೊಟ್ಟಿಲ್ಲ ರಾಜ್ಯದ ಭಾಷೆ ಬೆಳೆಯಬೇಕು. ತುಳು ಭಾಷೆಗೂ ಸ್ನಾನಮಾನ ಸಿಗಬೇಕು ಎಂಬ ಬೇಡಿಕೆ ಇದೆ ಕೇಂದ್ರ ಸರ್ಕಾರಕ್ಕೆ ಈ ವಿಚಾರವಾಗಿ ನಾವು ಪ್ರಸ್ತಾವನೆ ಕಳಿಸಿದ್ದೇವೆ. ಕೇಂದ್ರದವರಿಗೆ ರಾಜ್ಯ ಭಾಷೆಯ ಮೇಲೆ ಜವಾಬ್ದಾರಿ ಇಲ್ವಾ? ನೆಲ ಜಲ ಭಾಷೆಗೆ ಎಂಪಿಗಳು ಹೋರಾಟ ಮಾಡಿದ್ದಾರ? ಎಂದು ಬೆಂಗಳೂರಿನಲ್ಲಿ ಸಚಿವ ಪ್ರಿಯಾಂಕ ಖರ್ಗೆ ಪ್ರಶ್ನಿಸಿದರು.








