ರಾಮನಗರ : ರಾಜ್ಯದಲ್ಲಿ ಮೂರು ಡಿಸಿಎಂ ಹುದ್ದೆ ಸೃಷ್ಟಿಸಿ ಎಂದು ಕಾಂಗ್ರೆಸ್ ನಾಯಕರ ಕೂಗು ಕೇಳಿ ಬರುತ್ತಿದ್ದು ಇದೇ ವಿಷಯವಾಗಿ ರಾಮನಗರ ಜಿಲ್ಲೆಯಲ್ಲಿ ಮಾಗಡಿ ಶಾಸಕ ಎಚ್ ಸಿ ಬಾಲಕೃಷ್ಣ ಸ್ವಪಕ್ಷ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ್ದು ಲೋಕಸಭೆ ಚುನಾವಣೆಯಲ್ಲಿ ಎರಡೆರಡು ಕ್ಷೇತ್ರಗಳನ್ನು ಗೆಲ್ಲಿಸಿಕೊಟ್ಟವರನ್ನು ಡಿಸಿಎಂ ಮಾಡಿ ಎಂದು ಟಾಂಗ್ ನೀಡಿದರು.
ಈ ವಿಷಯದ ಕುರಿತಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮೂರು ಡಿಸಿಎಂ ಮಾಡಬೇಕೆಂಬ ಬೇಡಿಕೆಯ ವಿಚಾರ ಸ್ವಪಕ್ಷೀಯ ಸಚಿವರ ಹೇಳಿಕೆಗೆ ಶಾಸಕ HC ಬಾಲಕೃಷ್ಣ ಟಾಂಗ ನೀಡಿದ್ದು, ಈ ಹೇಳಿಕೆ ನೀಡುತ್ತಿರುವವರಿಗೆ ಎಂಪಿ ಚುನಾವಣೆ ಟಾಸ್ಕ್ ನೀಡಬೇಕು ಎಂದು ರಾಮನಗರದಲ್ಲಿ ಕಾಂಗ್ರೆಸ್ ಶಾಸಕ ಎಚ್ ಸಿ ಬಾಲಕೃಷ್ಣ ಹೇಳಿಕೆ ನೀಡಿದ್ದಾರೆ.
ಹೆಚ್ಚುವರಿ ಡಿಸಿಎಂ ಬೇಡಿಕೆ ಇಟ್ಟವರು ಎರಡೆರಡು ಕ್ಷೇತ್ರ ಗೆಲ್ಲಿಸಿ ಕೊಡಲಿ.ಎರಡೆರಡು ಕ್ಷೇತ್ರ ಗೆಲ್ಲಿಸಿಕೊಟ್ಟುವವರನ್ನು ಡಿಸಿಎಂ ಮಾಡೋಣ. ಜಾತಿ ಹೆಸರಿನಲ್ಲಿ ಡಿಸಿಎಂ ಮಾಡಿ ಅನ್ನುವುದು ಸರಿಯಲ್ಲ.ಆದರೆ ಕೆಲ ಸಚಿವರು ಅನಾವಶ್ಯಕವಾಗಿ ಹೇಳಿಕೆಯನ್ನು ನೀಡುತ್ತಿದ್ದಾರೆ.ಬೇಕಿದ್ದರೆ ಹೈಕಮಾಂಡ್ ಭೇಟಿಯಾಗಿ ಅವರು ಮನವಿ ಮಾಡಿಕೊಳ್ಳಲಿ ಎಂದು ರಾಮನಗರದಲ್ಲಿ ಮಾಗಡಿ ಶಾಸಕ ಎಫ್ ಸಿ ಬಾಲಕೃಷ್ಣ ಹೇಳಿಕೆ ನೀಡಿದರು.