ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವ್ರು ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ನ ಮುಂಬರುವ ಸಂಚಿಕೆಗಾಗಿ ತಮ್ಮ ಆಲೋಚನೆಗಳು ಮತ್ತು ಸಲಹೆಗಳನ್ನ ಹಂಚಿಕೊಳ್ಳಲು ಜನರನ್ನು ಆಹ್ವಾನಿಸಿದ್ದಾರೆ.
“ಪ್ರಧಾನಿ ನರೇಂದ್ರ ಮೋದಿ ಅವ್ರು ನಿಮಗೆ ಮುಖ್ಯವಾದ ವಿಷಯಗಳ ಬಗ್ಗೆ ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲು ಎದುರು ನೋಡುತ್ತಿದ್ದಾರೆ. ಅವ್ರು ಮಾತನಾಡಬೇಕಾದ ವಿಷಯಗಳ ಬಗ್ಗೆ ನಿಮ್ಮ ಆಲೋಚನೆಗಳನ್ನ ಹಂಚಿಕೊಳ್ಳಲು ಪ್ರಧಾನ ಮಂತ್ರಿಗಳು ನಿಮ್ಮನ್ನು ಆಹ್ವಾನಿಸುತ್ತಾರೆ” ಎಂದು ಮೈಗವ್ ಪುಟದಲ್ಲಿ ಪ್ರೇಕ್ಷಕರ ಸಲಹೆಗಳನ್ನು ಆಹ್ವಾನಿಸಲಾಗಿದೆ.
ನಿಮ್ಮ ಸಲಹೆಗಳನ್ನ ಕಳಿಸುವುದು ಹೇಗೆ?
* ಆಲೋಚನೆಗಳನ್ನು MyGov ಮತ್ತು ನಮೋ ಅಪ್ಲಿಕೇಶನ್ʼನಲ್ಲಿ ಹಂಚಿಕೊಳ್ಳಬಹುದು.
* MyGov ಪ್ರಕಾರ, ಪ್ರೇಕ್ಷಕರು ತಮ್ಮ ವೆಬ್ಸೈಟ್ನ ಮುಕ್ತ ವೇದಿಕೆಯಲ್ಲಿ ತಮ್ಮ ಸಲಹೆಗಳನ್ನ ಕಳುಹಿಸಬಹುದು ಅಥವಾ ಟೋಲ್-ಫ್ರೀ ಸಂಖ್ಯೆ 1800-11-7800ಗೆ ಡಯಲ್ ಮಾಡಬಹುದು. ಇನ್ನವ್ರ ಸಂದೇಶವನ್ನ ಹಿಂದಿ ಅಥವಾ ಇಂಗ್ಲಿಷ್ನಲ್ಲಿ ರೆಕಾರ್ಡ್ ಮಾಡಬಹುದು.
* “ರೆಕಾರ್ಡ್ ಮಾಡಲಾದ ಕೆಲವು ಸಂದೇಶಗಳು ಪ್ರಸಾರದ ಭಾಗವಾಗಬಹುದು” ಎಂದು ಅದು ಹೇಳಿದೆ.
* ನೀವು 1922 ಸಂಖ್ಯೆ ಮಿಸ್ಡ್ ಕಾಲ್ ಸಹ ನೀಡಿ, ನಂತ್ರ ನಿಮಗೆ ಎಸ್ಎಂಎಸ್ ಬರುತ್ತೆ. ಅದ್ರಲ್ಲಿರುವ ಲಿಂಕ್ ಅನುಸರಿಸಿ, ನಿಮ್ಮ ಸಲಹೆಗಳನ್ನ ನೇರವಾಗಿ ಪ್ರಧಾನ ಮಂತ್ರಿಗಳಿಗೆ ಕಳಿಸಬೋದು.
ಇದಲ್ಲದೇ, ಪ್ರಧಾನಿ ನರೇಂದ್ರ ಮೋದಿ ತಮ್ಮ ಸಂದೇಶವನ್ನ ಕಳುಹಿಸಲು ಜನರು ತೆಗೆದುಕೊಳ್ಳಬಹುದಾದ ಮಾರ್ಗಗಳನ್ನ ಟ್ವೀಟ್ ಮಾಡಿದ್ದಾರೆ.
“31 ರಂದು ನಡೆಯಲಿರುವ ಈ ತಿಂಗಳ #MannKiBaat ಬಗ್ಗೆ ನಿಮ್ಮ ಬಳಿ ಮಾಹಿತಿಗಳಿವೆಯೇ? ನಾನು ಅವುಗಳನ್ನು ಕೇಳಲು ಎದುರು ನೋಡುತ್ತಿದ್ದೇನೆ.. ಅವುಗಳನ್ನು MyGov ಅಥವಾ ನಮೋ ಆ್ಯಪ್ʼನಲ್ಲಿ ಹಂಚಿಕೊಳ್ಳಿ. 1800-11-7800 ಡಯಲ್ ಮಾಡುವ ಮೂಲಕ ನಿಮ್ಮ ಸಂದೇಶವನ್ನು ರೆಕಾರ್ಡ್ ಮಾಡಿ” ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
Do you have inputs for this month’s #MannKiBaat, which will take place on the 31st? I look forward to hearing them…share them either on MyGov or the NaMo App. Record your message by dialling 1800-11-7800. https://t.co/0HMcBLShLn pic.twitter.com/RO3UDuDjL5
— Narendra Modi (@narendramodi) July 15, 2022