Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮಾರ್ಗನ್ ಸ್ಟಾನ್ಲಿಯಲ್ಲಿ ಭಾರಿ ಉದ್ಯೋಗ ಕಡಿತ: 2,500 ನೌಕರರ ವಜಾಕ್ಕೆ ಮುಂದಾದ ಜಾಗತಿಕ ಹಣಕಾಸು ಸಂಸ್ಥೆ | Morgan Stanley Layoffs 2026

06/03/2026 7:02 AM

ಮಧ್ಯರಾತ್ರಿ ಇದ್ದಕ್ಕಿದ್ದಂತೆ ನಿದ್ರೆ ಕೆಡುತ್ತಿದೆಯೇ? ತಕ್ಷಣ ನಿದ್ರಿಸಲು ಇಲ್ಲಿವೆ 4 ಪರಿಣಾಮಕಾರಿ ಮಾರ್ಗಗಳು!

06/03/2026 6:58 AM

ಪತ್ನಿ ಸಂಗೀತಾರಿಂದ ಡಿವೋರ್ಸ್ ಕೇಸ್ ಬೆನ್ನಲ್ಲೇ ನಟಿ ತ್ರಿಷಾ ಜೊತೆ ಕಾಣಿಸಿಕೊಂಡ ನಟ ವಿಜಯ್: ವಿಡಿಯೋ ವೈರಲ್!

06/03/2026 6:55 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದಲ್ಲಿ ಯಾರು ಬಾಂಬ್, ಬೆಂಕಿ ಹಾಕ್ತಾರೋ ದೇಶಪ್ರೇಮಿಗಳು: ಛಲವಾಧಿ ನಾರಾಯಣಸ್ವಾಮಿ ಕಿಡಿ
KARNATAKA

ರಾಜ್ಯದಲ್ಲಿ ಯಾರು ಬಾಂಬ್, ಬೆಂಕಿ ಹಾಕ್ತಾರೋ ದೇಶಪ್ರೇಮಿಗಳು: ಛಲವಾಧಿ ನಾರಾಯಣಸ್ವಾಮಿ ಕಿಡಿ

By kannadanewsnow0915/10/2024 5:07 PM

ದಕ್ಷಿಣ ಕನ್ನಡ: ರಾಜ್ಯದಲ್ಲಿ ಯಾರು ಬಾಂಬ್, ಬೆಂಕಿ ಹಾಕ್ತಾರೋ ದೇಶಪ್ರೇಮಿಗಳು. ಪಾಕಿಸ್ತಾನ್ ಜಿಂದಾಬಾದ್ ಅಂದವರು ದೇಶಪ್ರೇಮಿಗಳು, ಭಾರತ್ ಮಾತಕೀ ಜೈ ಎಂದವರು ದೇಶದ್ರೋಹಿಗಳು ಎಂಬುದಾಗಿ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾಧಿ ನಾರಾಯಣಸ್ವಾಮಿ ಕಿಡಿ ಕಾರಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಇಂದು ವಿಧಾನಪರಿಷತ್ ಉಪ ಚುನಾವಣೆ ಸಂಬಂಧ ನಡೆದ ಬಿಜೆಪಿ ಜನಪ್ರತಿನಿಧಿಗಳ ಸಮಾವೇಶದ ಸಂದರ್ಭದಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ ಪಾಕಿಸ್ತಾನ ಜಿಂದಾಬಾದ್ ಎನ್ನುವವರು ದೇಶಪ್ರೇಮಿಗಳು; ಭಾರತ್ ಮಾತಾಕಿ ಜೈ ಎನ್ನುವವರು ದೇಶದ್ರೋಹಿಗಳು ಎಂಬ ಸ್ಥಿತಿ ಇದೆ. ಯಾರು ಬಾಂಬ್ ಹಾಕುತ್ತಾರೋ, ಬೆಂಕಿ ಹಾಕುತ್ತಾರೋ, ಕಾನೂನು ಕೈಗೆ ತೆಗೆದುಕೊಳ್ಳುವವರು ದೇಶಪ್ರೇಮಿಗಳು ಎಂಬಂತಾಗಿದೆ ಎಂದು ಟೀಕಿಸಿದರು.

ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಅವರು ಮಾತನಾಡಿ, ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ತುಷ್ಟೀಕರಣ ನೀತಿ ತುತ್ತತುದಿಗೆ ಮುಟ್ಟಿದೆ. ಭ್ರಷ್ಟಾಚಾರ ಮಿತಿ ಮೀರಿದೆ. ಇಂಥ ಆಡಳಿತದ ವಿರುದ್ಧ ಸೆಟೆದು ನಿಲ್ಲಬೇಕಿದೆ ಎಂದು ತಿಳಿಸಿದರು.

ಸಂಸದ ಬ್ರಿಜೇಶ್ ಚೌಟ ಅವರು ಮಾತನಾಡಿ, ಇದು ಕಾರ್ಯಕರ್ತರಿಗೆ ಹುಮ್ಮಸ್ಸು ಮತ್ತು ಪ್ರೇರಣೆ ಕೊಡುವ ಚುನಾವಣೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲೂ ಉಪ ಚುನಾವಣೆ ನಡೆಯಲಿದೆ. ಕಿಶೋರ್ ಕುಮಾರ್ ಪುತ್ತೂರು ಅವರನ್ನು ಗೆಲ್ಲಿಸಿ ಕಳುಹಿಸೋಣ ಎಂದು ಮನವಿ ಮಾಡಿದರು.

ನಿಕಟಪೂರ್ವ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರು ಮಾತನಾಡಿ, ಗ್ರಾಮ ಪಂಚಾಯಿತಿಗಳಿಗೆ ಹೆಚ್ಚು ಅನುದಾನ, ಜವಾಬ್ದಾರಿ ಕೊಡುವ ಕೆಲಸವನ್ನು ನಮ್ಮ ಕೇಂದ್ರ- ರಾಜ್ಯ ಸರಕಾರಗಳು ಮಾಡಿವೆ. ಕೋಟ ಶ್ರೀನಿವಾಸ ಪೂಜಾರಿ ಅವರು ಪಂಚಾಯಿತಿಯಿಂದ ಬಂದು ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಅನುಭವ ಇದ್ದವರು. ಬಳಿಕ ವಿಧಾನಪರಿಷತ್ತಿನಲ್ಲಿ ಕೆಲಸ ಮಾಡಿದ್ದು, ಅವರು ಅದ್ಭುತವಾದ ಗ್ರಾಮ ಚಿಂತನೆ ಹೊಂದಿದವರು ಎಂದು ವಿವರಿಸಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಶಾಸಕ ವಿ. ಸುನೀಲ್ ಕುಮಾರ್, ಶಾಸಕರಾದ ಉಮಾನಾಥ್ ಕೋಟ್ಯಾನ್, ಕು. ಭಾಗೀರಥಿ ಮುರಳ್ಯ, ವಿಧಾನಪರಿಷತ್ ಉಪಚುನಾವಣೆಯ ಅಭ್ಯರ್ಥಿ ಕಿಶೋರ್ ಕುಮಾರ್ ಪುತ್ತೂರು, ನಿಕಟಪೂರ್ವ ವಿಭಾಗ ಪ್ರಭಾರಿ ಉದಯ್‍ಕುಮಾರ್ ಶೆಟ್ಟಿ, ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

BIG NEWS: ಹುಬ್ಬಳ್ಳಿ ಗಲಭೆ ಕೇಸ್ ಹಿಂಪಡೆದ ವಿಚಾರ: ಛಲವಾದಿ ನಾರಾಯಣಸ್ವಾಮಿಯಿಂದ ಪ್ರಧಾನಿ, ರಾಷ್ಟ್ರಪತಿಗೆ ಪತ್ರ

BIG BREAKING: ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿ ಶಾಸಕ ಮುನಿರತ್ನಗೆ ಜಾಮೀನು ಮಂಜೂರು

Share. Facebook Twitter LinkedIn WhatsApp Email

Related Posts

ನಿಮ್ಮ ದೇಹದ ಮೇಲಿರುವ `ನರುಳ್ಳೆ-ಕೊಬ್ಬಿನ ಗಂಟು’ ಕರಗಲು ಜಸ್ಟ್ ಹೀಗೆ ಮಾಡಿ !

06/03/2026 6:46 AM2 Mins Read

ರಾಜ್ಯದಲ್ಲಿ ಶಾಲಾ ಪಠ್ಯಪುಸ್ತಕಗಳ ಬೆಲೆ ಶೇ. 50ರಷ್ಟು ಏರಿಕೆ : ಪೋಷಕರು, ವಿದ್ಯಾರ್ಥಿಗಳಿಗೆ ಶಾಕ್ !

06/03/2026 6:38 AM1 Min Read

ರಾಜ್ಯದ ವಿಕಲಚೇತನರಿಗೆ ಗುಡ್ ನ್ಯೂಸ್ : ಸರ್ಕಾರದಿಂದ ನಿಮಗೆ ಸಿಗಲಿವೆ ಈ ಎಲ್ಲಾ ಸೌಲಭ್ಯಗಳು !

06/03/2026 6:24 AM3 Mins Read
Recent News

ಮಾರ್ಗನ್ ಸ್ಟಾನ್ಲಿಯಲ್ಲಿ ಭಾರಿ ಉದ್ಯೋಗ ಕಡಿತ: 2,500 ನೌಕರರ ವಜಾಕ್ಕೆ ಮುಂದಾದ ಜಾಗತಿಕ ಹಣಕಾಸು ಸಂಸ್ಥೆ | Morgan Stanley Layoffs 2026

06/03/2026 7:02 AM

ಮಧ್ಯರಾತ್ರಿ ಇದ್ದಕ್ಕಿದ್ದಂತೆ ನಿದ್ರೆ ಕೆಡುತ್ತಿದೆಯೇ? ತಕ್ಷಣ ನಿದ್ರಿಸಲು ಇಲ್ಲಿವೆ 4 ಪರಿಣಾಮಕಾರಿ ಮಾರ್ಗಗಳು!

06/03/2026 6:58 AM

ಪತ್ನಿ ಸಂಗೀತಾರಿಂದ ಡಿವೋರ್ಸ್ ಕೇಸ್ ಬೆನ್ನಲ್ಲೇ ನಟಿ ತ್ರಿಷಾ ಜೊತೆ ಕಾಣಿಸಿಕೊಂಡ ನಟ ವಿಜಯ್: ವಿಡಿಯೋ ವೈರಲ್!

06/03/2026 6:55 AM
Israeli Prime Minister said Khamenei's compound had been destroyed.

ಖಮೇನಿ ಹತ್ಯೆ ಬೆನ್ನಲ್ಲೇ ‘X’ ಖಾತೆಯಲ್ಲಿ ಗೂಢ ಸಂದೇಶ: ಏನಿದು ‘ಖೋರಂಶಹರ್ ಕ್ಷಣಗಳ’ ಎಚ್ಚರಿಕೆ?

06/03/2026 6:46 AM
State News
KARNATAKA

ನಿಮ್ಮ ದೇಹದ ಮೇಲಿರುವ `ನರುಳ್ಳೆ-ಕೊಬ್ಬಿನ ಗಂಟು’ ಕರಗಲು ಜಸ್ಟ್ ಹೀಗೆ ಮಾಡಿ !

By kannadanewsnow5706/03/2026 6:46 AM KARNATAKA 2 Mins Read

ಬೆಂಗಳೂರು: ಇಂದಿನ ದಿನಗಳಲ್ಲಿ ಬದಲಾದ ಜೀವನಶೈಲಿ ಮತ್ತು ಹೊರಗಿನ ಮಾಲಿನ್ಯದಿಂದಾಗಿ ಅನೇಕರಲ್ಲಿ ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಅದರಲ್ಲಿಯೂ ಮುಖದ ಮೇಲೆ…

ರಾಜ್ಯದಲ್ಲಿ ಶಾಲಾ ಪಠ್ಯಪುಸ್ತಕಗಳ ಬೆಲೆ ಶೇ. 50ರಷ್ಟು ಏರಿಕೆ : ಪೋಷಕರು, ವಿದ್ಯಾರ್ಥಿಗಳಿಗೆ ಶಾಕ್ !

06/03/2026 6:38 AM

ರಾಜ್ಯದ ವಿಕಲಚೇತನರಿಗೆ ಗುಡ್ ನ್ಯೂಸ್ : ಸರ್ಕಾರದಿಂದ ನಿಮಗೆ ಸಿಗಲಿವೆ ಈ ಎಲ್ಲಾ ಸೌಲಭ್ಯಗಳು !

06/03/2026 6:24 AM

ರಾಜ್ಯದ ‘ಸರ್ಕಾರಿ PU ಕಾಲೇಜು ವಿದ್ಯಾರ್ಥಿ’ಗಳಿಗೆ ಸಿಹಿಸುದ್ದಿ: ಮುಂದಿನ ವರ್ಷದಿಂದ ಉಚಿತವಾಗಿ ‘ಪಠ್ಯಪುಸ್ತಕ’ ವಿತರಣೆ

06/03/2026 6:20 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.