ಶಿವಮೊಗ್ಗ : ಇತ್ತೀಚಿಗೆ ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ವಿಚಾರಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದಲ್ಲಿ ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಪಾಕಿಸ್ತಾನ ಪರ ಘೋಷಣೆ ಕೂಗುವವರನ್ನು ಶೂಟ್ ಮಾಡಬೇಕು ಎಂದು ವಾಗ್ದಾಳಿ ನಡೆಸಿದರು.
ಶಿವಮೊಗ್ಗದಲ್ಲಿವಮೊಗ್ಗದಲ್ಲಿ ಬಿಜೆಪಿ ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅವಧಿಯಲ್ಲಿ ಪಟಾಕಿ ಹಿಡಿದ ಹಾಗೆ ಬಾಂಬ್ ಸಿಡಿಯುತ್ತಿದ್ದವು. ವಿಧಾನಸೌಧದಲ್ಲಿ ಬಿಕ್ಷುಕರ ರಾಷ್ಟ್ರ ಪಾಕ್ ಪರ ಘೋಷಣೆಯನ್ನು ಕೂಗುತ್ತಾರೆ. ಪಾಕಿಸ್ತಾನ ಜಿಂದಾಬಾದ್ ಎನ್ನುವ ತಾಕತ್ ದೈರ್ಯ ಎಲ್ಲಿಂದ ಬಂತು? ಎಂದು ಪ್ರಶ್ನಿಸಿದರು.
BREAKING : ‘ಮಹಿಳಾ ಏಷ್ಯಾಕಪ್ ಕ್ರಿಕೆಟ್-2024’ ವೇಳಾಪಟ್ಟಿ ಪ್ರಕಟ : ಜು.21ಕ್ಕೆ ‘ಭಾರತ-ಪಾಕ್’ ಹೈವೋಲ್ಟೇಜ್ ಪಂದ್ಯ
ನಮ್ಮ ದೇಶದ ಅನ್ನ ತಿಂದು ಶತ್ರು ರಾಷ್ಟ್ರದ ಪರ ಘೋಷಣೆ ಕೂಗುತ್ತಾರೆ.ಪಾಕಿಸ್ತಾನದ ಪರ ಘೋಷಣೆ ಕೂಗಿಲ್ಲ ಅಂತ ಆಗ ಸಚಿವರು ಹೇಳಿದ್ರು. ಎಫ್ ಎಸ್ ಎಲ್ ವರದಿ ಬಂದ ನಂತರ ಆರೋಪಿಗಳ ಬಂಧನವಾಗುತ್ತದೆ. ಅರೆಸ್ಟ್ ಆದರೂ ವೀಕ್ ಸೆಕ್ಷನ್ ಹಾಕಿ ಹೊರಗೆ ಬರುವ ರೀತಿ ಮಾಡುತ್ತಾರೆ ಎಂದು ಕಿಡಿ ಕಾರಿದರು.
ಪಾಕಿಸ್ತಾನ ಜಿಂದಾಬಾದ್ ಎಂದು ಹೇಳುವವರಿಗೆ ಶೂಟ್ ಮಾಡಬೇಕು.ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬೆ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ಬಿಜಿನೆಸ್ ರೆವಲರಿಗೆ ಬಾಂಬ್ ಸ್ಫೋಟ ಆಗಿದೆ ಅಂತ ಮುಖ್ಯಮಂತ್ರಿ ಹೇಳುತ್ತಾರೆ ಶಿವಮೊಗ್ಗ ನಗರದಲ್ಲಿ ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಏ.15ರಂದು ಗೀತಾ ಶಿವರಾಜ್ ಕುಮಾರ ‘ನಾಮಪತ್ರ’ ಸಲ್ಲಿಕೆ : ಸಚಿವ ಮಧು ಬಂಗಾರಪ್ಪ
ಶಿವಮೊಗ್ಗ ಕ್ಷೇತ್ರಕ್ಕೆ ಬಿವೈ ರಾಘವೇಂದ್ರ ಸಾಕಷ್ಟು ಅನುದಾನ ತಂದಿದ್ದಾರೆ. ಬಿವೈ ರಾಘವೇಂದ್ರ ಎಲ್ಲಿಯೂ ಕೂಡ ತಂದೆ ಹೆಸರು ದುರುಪಯೋಗ ಪಡಿಸಿಕೊಳ್ಳಲಿಲ್ಲ ಕ್ಷೇತ್ರದ ಅಭಿವೃದ್ಧಿಗೋಸ್ಕರ ಸಾಕಷ್ಟು ಹಣವನ್ನು ತಂದಿದ್ದಾರೆ. ಬೇರೆ ಮಾಜಿ ಮುಖ್ಯಮಂತ್ರಿಗಳ ಪುತ್ರರು ಯಾವ ರೀತಿ ಇದ್ದಾರೆಂದು ನೋಡಬಹುದು.ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದು 9 ತಿಂಗಳು ಕಳೆದಿದೆ 9 ತಿಂಗಳಲ್ಲಿ ರಸ್ತೆ ಕಾಮಗಾರಿ ಕುಡಿಯುವ ನೀರಿಗೆ ಒಂಬತ್ತು ಪೈಸೆ ಕೊಟ್ಟಿಲ್ಲ. 9 ತಿಂಗಳಾಯ್ತು ಅನುದಾನವೇ ಕೊಡಲಿಲ್ಲ ಅಂತ ನಾನು ಸಿಎಂ ಗೆ ಕೇಳಿದೆ ಪ್ರತಿಯೊಂದು ಮನೆಗೆ ಎರಡೆರಡು ಸಾವಿರ ಕೊಡ್ತಿದೀವಿ ಅಂತ ಹೇಳಿದರು.
ಎರಡೆರಡು ಸಾವಿರ ತಗೊಂಡು ಜನ ಆರಾಮಾಗಿದ್ದಾರೆ ಅಂತ ಹೇಳಿದರು. ಜನರು ಯಾರು ರಸ್ತೆ ಕೇಳುತ್ತಿಲ್ಲ ಹೋಗು ನೀನು ಅಂತ ಮುಖ್ಯಮಂತ್ರಿ ಹೇಳಿದರು ರಾಘವೇಂದ್ರರನ್ನು ಎರಡು ಲಕ್ಷ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಶಿವಮೊಗ್ಗದಲ್ಲಿ ಬಿಜೆಪಿ ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು.