ವಿಜಯಪುರ : ನಿನ್ನೆ ಬೆಂಗಳೂರಿನಲ್ಲಿ ರಾಮೇಶ್ವರಂ ಕೆಫೆಯಲ್ಲಿ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಸರ್ಕಾರದ ವಿರುದ್ಧ ಕಿಡಿ ಕಾರಿದ್ದು, ಈ ಘಟನೆಯನ್ನು ಬಜರಂಗದಳದ ಮೇಲೆ ಹಾಕುವವರು ಅಯೋಗ್ಯ ನನ್ ಮಕ್ಕಳು ಎಂದು ವಾಗ್ದಾಳಿ ನಡೆಸಿದ್ದಾರೆ.
ಬಾಹ್ಯಾಕಾಶದಲ್ಲಿ ‘ಪರಮಾಣು ಶಸ್ತ್ರಾಸ್ತ್ರಗಳನ್ನು’ ನಿಯೋಜಿಸುವುದಿಲ್ಲ: ರಷ್ಯಾ ಅಧ್ಯಕ್ಷ ಪುಟಿನ್ ಸ್ಪಷ್ಟನೆ
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ರ್ಯಾಂಡ್ ಬೆಂಗಳೂರು ಅಲ್ಲ ಬಾಂಬ್ ಬೆಂಗಳೂರು ಆಗಿದೆ. ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟದಲ್ಲೂ ಕಾಂಗ್ರೆಸ್ನವರು ಹೀಗೆ ಹೇಳಿದ್ದರು. ಸಿಎಂ ಸಿದ್ದರಾಮಯ್ಯ ಅವರಿಗೆ ಇವೆಲ್ಲ ನಿಭಾಯಿಸಲು ಆಗದಿದ್ದರೆ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದರು.
ಉದ್ಯೋಗಾಕಾಂಕ್ಷಿಗಳೇ ಗಮನಿಸಿ : ಸೋಮವಾರದಿಂದ 1,000. ʻಗ್ರಾಮ ಆಡಳಿತ ಅಧಿಕಾರಿ’ ನೇಮಕಾತಿಗೆ ಸಲ್ಲಿಕೆ ಆರಂಭ!
ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ವಿಚಾರವಾಗಿ ಮಾತನಾಡಿದ ಅವರು, ಎಫ್ಎಸ್ಎಲ್ ವರದಿಯಲ್ಲಿ ಘೋಷಣೆ ಕೂಗಿದ್ದು ಸಾಬೀತಾಗಿದೆ. ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದು ನಿಜ. ಇದನ್ನು ಎಫ್ಎಸ್ಎಲ್ ಪರೀಕ್ಷೆಗೆ ಒಳಪಡಿಸುವುದು ಬೇಡ, ಪರೀಕ್ಷೆ ಅನವಶ್ಯಕ ಎಂದಿದ್ದೆ. ಆದರೂ ಕೂಡ ಸಚಿವರಾದ ಪ್ರಿಯಾಂಕ್ ಖರ್ಗೆ ಹಾಗೂ ಜಿ. ಪರಮೇಶ್ವರ ಸಮರ್ಥನೆ ಮಾಡಿಕೊಂಡು, ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.
ಮೈದಾನದಲ್ಲಿ ದುರ್ವರ್ತನೆ: ಆಸ್ಟ್ರೇಲಿಯಾದ ಕ್ರಿಕೆಟಿಗ ‘ಕ್ರಿಸ್ ಗ್ರೀನ್’ ಅಮಾನತು
ಭಯೋತ್ಪಾದನಾ ಕೃತ್ಯಗಳಿಗೆ ಕರ್ನಾಟಕ ಸಂರಕ್ಷಿತ ತಾಣವಾದಂತಾಗಿದೆ. ರಾಜ್ಯ ಪ್ರಯೋಗ ಶಾಲೆಯಾಗಿದೆ. ಜನನಿಬಿಡ ಮಾರುಕಟ್ಟೆ, ಚಿತ್ರಮಂದಿರಗಳಲ್ಲಿ ಆಗಿದ್ದರೆ ಅನಾಹುತವಾಗುತ್ತಿತ್ತು. ಇವೆಲ್ಲ ನಿಭಾಯಿಸಲು ಆಗದಿದ್ದರೆ ಮನೆಗೆ ಹೋಗಿ. ರಾಮೇಶ್ವರಂ ಕೆಫೆಯಲ್ಲಿ ಶುಕ್ರವಾರ ದಿನವೇ ಬ್ಲಾಸ್ಟ್ ಮಾಡಿದ್ದಾರೆ. ಉದ್ದೇಶ ಪೂರ್ವಕವಾಗಿ ಮಾಡಿದ್ದಾರೆ. ಅಯೋಧ್ಯಾ ರಾಮ ಮಂದಿರ ನಿರ್ಮಾಣ ಸಹಿಸಲಾಗದೆ ಬ್ಲಾಸ್ಟ್ ಮಾಡಿದ್ದಾರೆ. ಇವರೆಲ್ಲ ನಾಶವಾಗುವ ಕಾಲ ಬಂದಿದೆ ಎಂದರು.
‘ಎಲ್ಲ ರೋಗಿಗಳು ಅರೋಗ್ಯವಾಗಿದ್ದು, ಚಿಕಿತ್ಸಾ ವೆಚ್ಚ ಸರ್ಕಾರವೇ ಭರಿಸಲಿದೆ’ : ಸಿಎಂ ಸಿದ್ದರಾಮಯ್ಯ
ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಾವೆ ಅಧಿಕಾರಕ್ಕೆ ಬರುತ್ತೇವೆ. ಸಮಾನ ನಾಗರಿಕ ಕಾಯ್ದೆ ಜಾರಿ ಮಾಡುತ್ತೇವೆ. ಒಂದು ಕುಟುಂಬಕ್ಕೆ ಎರಡೇ ಮಕ್ಕಳು ಅಂತ ಕಾನೂನು ಜಾರಿ ಮಾಡುತ್ತೇವೆ. ಯಾರಿಗೆ ಪಾಕಿಸ್ತಾನದ ಮೇಲೆ ಪ್ರೀತಿ ಇದೆ ಅವರು ಪಾಕಿಸ್ತಾನಕ್ಕೆ ಹೋಗಲಿ. ಪಾಕಿಸ್ತಾನಕ್ಕೆ ಜಿಂದಾಬಾದ್ ಎನ್ನುವವರು ಅಲ್ಲಿ ಹೋಗಿ. ಮಾಯನ್ಮಾರ್ನಲ್ಲಿ ರೋಹಿಂಗ್ಯಾಗಳನ್ನು ಹೊಡೆದು ಹೊರ ಹಾಕಿದಂತೆ ಇಲ್ಲಿಯೂ ದೇಶ ದ್ರೋಹಿಗಳಿಗೆ ಹೊಡೆದು ಹೊರ ಹಾಕಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.