ಬೆಂಗಳೂರು : ಲೈಂಗಿಕ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಪ್ರಜ್ವಲ್ ರೇವಣ್ಣ ಅವರ ವಿಡಿಯೋ ಬಹಿರಂಗ ಮಾಡಿದ ವಿಚಾರ 1 ವಾರದಲ್ಲಿ ಹೊರಬರಲಿದೆ ಎಂದು ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ ತಿಳಿಸಿದರು.
ಬೆಂಗಳೂರಿನಲ್ಲಿ ಇಂದು SIT ವಿಚಾರಣೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ವಿಡಿಯೋ ಬಹಿರಂಗ ಮಾಡಿದ ವ್ಯಕ್ತಿಯ ಹೆಸರು 1 ವಾರದಲ್ಲಿ ಬಹಿರಂಗವಾಗಲಿದೆ. ಒಂದು ವಾರದಲ್ಲಿ ಎಚ್ ಡಿ ಕುಮಾರಸ್ವಾಮಿ ಈ ವಿಚಾರ ತಿಳಿಸಲಿದ್ದಾರೆ ಯಾರು ವಿಡಿಯೋ ಬಿಡುಗಡೆ ಮಾಡಿದ್ದರು ಅನ್ನುವುದು ಹೊರಗಡೆ ಬರುತ್ತದೆ ಎಂದು ಬೆಂಗಳೂರಿನಲ್ಲಿ ಬಿಜೆಪಿ ಮುಖಂಡ ವಕೀಲ ದೇವರಾಜ ಗೌಡ ತಿಳಿಸಿದರು.
ನಿನ್ನೆ ಎಸ್ಐಟಿ ವಿಚಾರಣೆಗೆ ಕರೆದಿದ್ದರು.ಇಂದು ಕೂಡ ವಿತರಣೆಗೆ ಬಂದಿದ್ದೆ ವಿಡಿಯೋ ವೈರಲ್ ಮಾಡಿದವರ ಬಗ್ಗೆ ಇದ್ದ ಮಾಹಿತಿಯನ್ನು ನೀಡಿದ್ದೇನೆ. ಯಾರು ಎಂದು ಈಗ ಇಲ್ಲಿ ಹೇಳುವುದಕ್ಕೆ ಸಾಧ್ಯವಿಲ್ಲ. ಹಾಸನದಲ್ಲಿ ಒಕ್ಕಲಿಗ ನಾಯಕತ್ವಕ್ಕಾಗಿ ಇಷ್ಟೆಲ್ಲ ನಡೆಯುತ್ತಿದೆ ಎಂದು ವಕೀಲಾದೇವರಾಜೇಗೌಡ ಹೇಳಿಕೆ ನೀಡಿದರು.