ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ತೆಲಂಗಾಣ ಪ್ರವಾಸ ಮುಗಿಸಿ ಪ್ರಧಾನಿ ನರೇಂದ್ರ ಮೋದಿ ಒಡಿಶಾ ತಲುಪಿದ್ದಾರೆ. ಇಲ್ಲಿ ಅವರು ಚಂಡಿಖೋಲ್’ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು. ಪೂರ್ವ ಭಾಗದ ಜನರು ಬಿಜೆಪಿಯನ್ನ ಈ ಬಾರಿ 400 ಗುರಿ ಮೀರಿ ಕೊಂಡೊಯ್ಯಲು ಮನಸ್ಸು ಮಾಡಿದ್ದಾರೆ ಎಂದು ಪ್ರಧಾನಿ ಹೇಳಿದರು.
ಕಳೆದ 10 ವರ್ಷಗಳಿಂದ ಬಿಜೆಪಿ ಸರ್ಕಾರ ಒಡಿಶಾದಲ್ಲಿ ಅಭೂತಪೂರ್ವ ಹೂಡಿಕೆ ಮಾಡುತ್ತಿದೆ. ಒಡಿಶಾ ಕೂಡ ಅಭಿವೃದ್ಧಿ ಹೊಂದಿದ ಭಾರತದ ಹೆಬ್ಬಾಗಿಲು ಆಗಬೇಕು ಎಂಬುದು ನಮ್ಮ ಪ್ರಯತ್ನ ಎಂದರು.
ದೇಶದಲ್ಲಿ ಆಗುತ್ತಿರುವ ದೊಡ್ಡ ಅಭಿವೃದ್ಧಿ ಕಾರ್ಯಗಳನ್ನು ಈ ಹಿಂದೆಯೂ ಮಾಡಬಹುದಿತ್ತು. ಆದರೆ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳ ಗಮನವು ತಮ್ಮ ಬೊಕ್ಕಸವನ್ನ ತುಂಬುವತ್ತದೆ ಎಂದು ಪ್ರಧಾನಿ ಹೇಳಿದರು. ಕಲ್ಲಿದ್ದಲು ಲೂಟಿ ಮಾಡಿ ತಿನ್ನುವ ಕಾಂಗ್ರೆಸ್ ಸರಕಾರ ಬಡವರಿಗೆ ಅನ್ನ ನೀಡಲು ಸಾಧ್ಯವಿಲ್ಲ. ಹೀಗಾಗಿ ಜನ ಮೋದಿಗೆ ಆಶೀರ್ವಾದ ಮಾಡುತ್ತಾರೆ. ಬಡವರಿಗೆ ಉಚಿತ ಪಡಿತರ ಯೋಜನೆಯನ್ನ ಮುಂದಿನ 5 ವರ್ಷಗಳವರೆಗೆ ವಿಸ್ತರಿಸಲಾಗುವುದು ಎಂದರು.
BREAKING: ‘ವೀರಪ್ಪನ್ ಗ್ಯಾಂಗ್ ಸದಸ್ಯೆ’ಯಾಗಿದ್ದ ‘ಸ್ಟೆಲ್ಲಾ ಮೇರಿ’ಗೆ ಕೋರ್ಟ್ ಕ್ಲೀನ್ ಚಿಟ್
Good News : ಕೇಂದ್ರ ಸರ್ಕಾರಿ ನೌಕರರಿಗೆ ‘ಶೇ.50ರಷ್ಟು ತುಟ್ಟಿಭತ್ಯೆ’ ಹೆಚ್ಚಳ : ‘HRA, ಗ್ರಾಚ್ಯುಟಿ’ ಕೂಡ ಹೈಕ್