ಚಿತ್ರದುರ್ಗ: ನಿತ್ಯ ಯೋಗ ಮಾಡುವವರಿಗೆ ಯಾವುದೇ ರೋಗ ಬರುವುದಿಲ್ಲವೆಂದು ಬಸವೇಶ್ವರ ಆಸ್ಪತ್ರೆಯ ವ್ಯವಸ್ಥಾಪಕರಾದ ಸತ್ಯನಾರಾಯಣ್ ಹೇಳಿದರು.
ಚಿತ್ರದುರ್ಗದ ಐಯುಡಿಪಿ ಬಡಾವಣೆಯ ನಿಸರ್ಗ ಯೋಗ,ಕ್ರೀಡಾ ಮತ್ತು ಸಾಂಸ್ಕೃತಿಕ ಕೇಂದ್ರವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದ ಅವರು, ಚಿತ್ರದುರ್ಗ ನಗರದ ಹೊರವಲಯದಲ್ಲಿರುವ ಜಿಸಿಬಿ ಬಸಣ್ಣಅವರ ನರ್ಸರಿಯಲ್ಲಿ ನಡೆದ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಮಾತನಾಡಿದರು.
ಕಳೆದ ಹತ್ತು ವರ್ಷಗಳ ಹಿಂದೆ ತಾವು ಸಹ ದೈತ್ಯ ದೇಹವನ್ನು ಹೊಂದಿದ್ದು,ನಿರಂತರ ವ್ಯಾಯಾಮ, ವಾಕಿಂಗ್ ಹಾಗು ಆಹಾರ ಬಳಕೆಯಲ್ಲಿ ನಿಯಮವನ್ನು ಪಾಲಿಸುವ ಮೂಲಕ ದೇಹದ ತೂಕವನ್ನು ಇಳಿಸಿದ್ದೇನೆ.ಅಂದು ದಡೂತಿ ದೇಹದಿಂದ ತುಂಭಾ ಹಿಂಸೆ ಅನುಭವಿಸಿದ್ದೆನು. ಆಗ ಸ್ವಯಂ ನಿರ್ಧಾರದಿಂದ ವ್ಯಾಯಾಮ ಹಾಗು ಆಹಾರದಲ್ಲಿ ಕಠಿಣ ಪಾಲನೆ ಮಾಡುವ ಮೂಲಕ ತಮ್ಮ ಎತ್ತರಕ್ಕೆ ತಕ್ಕಂತೆ ತೂಕವನ್ನು ಮಿತವಾಗಿಸುವಲ್ಲಿ ಯಶಸ್ವಿಯಾಗಿದ್ದೇನೆ.ಹೀಗಾಗಿ ನನ್ನ ಸಾಧನೆಯ ಬಗ್ಹೆ ನನಗೆ ಹೆಮ್ಮೆ ಇದೆ ಎಂದು ಸಂತಸ ವ್ಯಕ್ತಪಡಿಸಿದರು.
ಇನ್ನು ಇದೇ ವೇಳೆ ಮಾತನಾಡಿದ ಯೋಗ ಕೇಂದ್ರದ ಯೋಗಗುರುಗಳಾದ ಶಿವಲಿಂಗಪ್ಪ ಅವರು,ಸತತ ಹತ್ತುವರ್ಷಗಳ ಪರಿಶ್ರಮದಿಂದ ನಮ್ಮ ಯೋಗ ಕೇಂದ್ರ ಹೆಮ್ಮರವಾಗಿ ಬೆಳದಿದೆ. ಇಂದು ನಿಸರ್ಗದ ಮಡಿಲಲ್ಲಿ ನೈಸರ್ಗಿಕವಾಗಿ ಬೆಳೆದುನಿಂತಿದೆ.ಇದಕ್ಕೆಲ್ಲ ಬೆನ್ನೆಲುಬಾಗಿ ನಿಂತಿದ್ದ ಪತಾಂಜಲಿ ಯೋಗ ಸಂಸ್ಥೆಯ ಮಾಜಿ ಜಿಲ್ಲಾಧ್ಯಕ್ಷ ದಿವಂಗತ ಮಲ್ಲಿಕಾರ್ಜುನಪ್ಪ ಅವರು ಸ್ಪೂರ್ತಿ ಎಂದು ಅವರನ್ನು ಸ್ಮರಿಸಿದರು.
ಬಳಿಕ ಮಾತನಾಡಿದ ಯೋಗ ಕೇಂದ್ರದ ಅಧ್ಯಕ್ಷ ರಾಮಪ್ಪ ಅವರು, ಈ ನಿಸರ್ಗ ಯೋಗ ಕೇಂದ್ರವೊಂದು ಕುಟುಂಬದಂತೆ.ಎಲ್ಲರು ತಮ್ಮ ಆರೋಗ್ಯ ರಕ್ಷಣೆಗಾಗಿ ನಿತ್ಯ ಯೋಗಾಭ್ಯಾಸ ಮಾಡುತ್ತೇವೆ.ಅಲ್ಲದೇ ನಮ್ಮ ಯೋಗ ಕೇಂದ್ರದಲ್ಲಿನ ಎಲ್ಲಾಸದಸ್ಯರ ಕಷ್ಟ ಸುಖದಲ್ಲಿ ಭಾಗಿಯಾಗುತ್ತೇವೆ.ನಮ್ಮಸದಸ್ಯರು ಯಾರಾದರೂ ಒಂದು ದಿನ ಯೋಗಾಭ್ಯಾಸಕ್ಕೆ ಗೈರಾದರೆ ಅವರ ಬಗ್ಗೆ ವಿಚಾರಿಸುತ್ತೇವೆ.ಆಗ ಅವರಿಗೆ ಏನಾದರು ಸಾಮಾಜಿಕವಾಗಿ,ಕೌಟಂಬಿಕವಾಗಿ ಅಥವಾ ಆರೋಗ್ಯದ ವಿಚಾರದಲ್ಲಿ ಸಮಸ್ಯೆ ಆಗಿದ್ದರೆ ತಕ್ಷಣ ಅವರ ಸಮಸ್ಯೆ ನಿವಾರಿಸಲು ಮುಂದಾಗುತ್ತೇವೆ.
ನಮ್ಮ ಯೋಗ ಬಂಧುಗಳಲ್ಲಿ ಯಾವುದೇ ತಾರತಮ್ಯ ಇಲ್ಲ.ಜಾತಿಭೇಧವಿಲ್ಲ.ಪರಸ್ಪರ ಎಲ್ಲರಲ್ಲೂ ಅನ್ಯೋನ್ಯತೆ ಮನೆ ಮಾಡಿದೆ ಎಂದರು.ಇದೇ ವೇಳೆ ಯೋಗ ಕೇಂದ್ರದ ಬಗ್ಹೆ ತಮ್ಮ ಅಭಿಪ್ರಾಯ ತಿಳಿಸಿದ ಯೋಗ ಪಟುಗಳಾದ ರವಿಶಂಕರ್,ಪುಷ್ಪ ಹಾಗು ದಿವ್ಯ ಅವರು, ನಿಸರ್ಗ ಯೋಗ ಕೇಂದ್ರದಿಂದ ನಮ್ಮಲ್ಲಿನ ಸೋಮಾರಿತನ ನಿರ್ಮೂಲನೆ ಆಗಿದೆ.ಇಲ್ಲಿನ ಸದಸ್ಯರೆಲ್ಲರು ಒಂದೇ ಕುಟುಂಬದಂತೆ ಪ್ರೀತಿ,ಬಾಂದವ್ಯದಿಂದ ಇರುತ್ತೇವೆ.ಹೀಗಾಗಿ ಒಂದುದಿನ ತಪ್ಪದೇಯೋಗಾಭ್ಯಾಸ ಮಾಡುತ್ತೇವೆ.
ಇದರಿಂದಾಗಿ ನಮ್ಮಲ್ಲಿನ ಆರೋಗ್ಯದ ಸಮಸ್ಯೆ ನಿವಾರಣೆ ಆಗಿದೆ.ಮನಸಿಗೆ ಸಂತೋಷವಿದೆ.ದೇಹಕ್ಕೆ ಉಲ್ಲಾಸವಿದ್ದು,ಈ ಯೋಗಕೇಂದ್ರ ಬಾಂದವ್ಯದ ಬೆಸುಗೆ ಎನಿಸಿದೆ ಎಂದರು.ಈ ವೇಳೆ ಕೇಂದ್ರವನ್ನು ಉದ್ಗಾಟಿಸಿದ ಸತ್ಯನಾರಾಯಣ,ಯೋಗಗುರು ಶಿವಲಿಂಗಪ್ಪ,ಅಧ್ಯಕ್ಷ ರಾಮಪ್ಪಹಾಗು ಹಿರಿಯ ಯೋಗಪಟು ರವಿಶಂಕರ್ ಅವರನ್ನು ಯೋಗಪಟುಗಳು ಗೌರವಿಸಿ,ಅಭಿನಂದಿಸಿದರು.
ಯೋಗ ಕೇಂದ್ರದ ಉದ್ಘಾಟನೆ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದ್ದು,ಕೋಟೆನಾಡಿನ ಜೂನಿಯರ್ ವಿಜಯ್ ಪ್ರಕಾಶ್ ಖ್ಯಾತಿಯ ಸತ್ಯನಾರಾಯಣ ಅವರು ಗೀತ ಗಾಯನದ ಮೂಲಕ ಎಲ್ಲರ ಗಮನ ಸೆಳೆದರು.ಈ ವೇಳೆ ಯೋಗ ಬಂಧುಗಳು ಸಹ ಗೀತೆಗಳ ರಸದೌತಣ ಸವಿಯುತ್ತಾ,ಹಾಡುತ್ತಾ ಕುಣಿದು ಕುಪ್ಪಳಿಸಿದರು.ನಿಸರ್ಗದಮಡಿಲಲ್ಲಿ ಸಮಯದ ಅರಿವಿಲ್ಲದಂತೆ ನಡೆದ ಗೀತಗಾಯನವನ್ನು ಮೈಮರೆತು ಎಂಜಾಯ್ ಮಾಡಿದರು.
ಈ ಕಾರ್ಯಕ್ರಮದಲ್ಲಿ ನಿಸರ್ಗ ಯೋಗ,ಕ್ರೀಡಾ ಮತ್ತು ಸಾಂಸ್ಕೃತಿಕ ಕೇಂದ್ರದ ಪ್ರಧಾನ ಕಾರ್ಯದರ್ಶಿ ಎಸ್.ಸಿದ್ದರಾಜು ಸ್ವಾಗತಿಸಿದರು.ಯೋಗಪಟು ಶಬರಿ ಪ್ರಾರ್ಥಿಸಿದರು.ಗೌರವ ಸಲಹೆಗಾರರಾದ ಮಹಲಿಂಗಪ್ಪ ನಿರೂಪಿಸಿದರು.ಖಜಾಂಚಿಯಾದ ಜಯ್ಯಣ್ಣ ವಂದಿಸಿದ್ದು,ಕಾರ್ಯಕ್ರಮದಲ್ಲಿ ಹಿರಿಯ ಯೋಗಬಂಧುಗಳಾದ ಚಿದಾನಂದ ಮೂರ್ತಿ, ನಳಿನಾ,ಹನುಮಂತಪ್ಪ,ಗೀತಮ್ಮ,ಪುಷ್ಪವತಿ,ಕೌಸಲ್ಯ ಮತ್ತು ಯುವ ಯೋಗಪಟುಗಳಾದ ಶಬರಿ,ಸಂಯುಕ್ತ,ದಿವ್ಯ,ಮಧುಸೂದನ್,ಅಣ್ಣೇಶ್ ಭಾಗವಹಿಸಿದ್ದರು.
20 ದಿನಗಳ ಬಳಿಕ ಹಾಸನ ಜಿಲ್ಲೆಗೆ ಎಂಟ್ರಿ ಕೊಟ್ಟ HD ರೇವಣ್ಣ: ದಾರಿಯುದ್ಧಕ್ಕೂ ಅದ್ಧೂರಿ ಸ್ವಾಗತ
ಪೆನ್ ಡ್ರೈವ್ ಮೊದಲು ತಲುಪಿದ್ದೇ ಡಿಕೆಶಿಗೆ, ತಂದುಕೊಟ್ಟಿದ್ದೇ ಚಾಲಕ ಕಾರ್ತಿಕ್: HDK ಸ್ಪೋಟಕ ಬಾಂಬ್