ಕೆಎನ್ ಎನ್ ನ್ಯೂಸ್ ಡೆಸ್ಕ್ : ಇತ್ತೀಚೆಗೆ ಮಧುಮೇಹ ಕಾಯಿಲೆ ಅಂದರೆ ಸಾಮಾನ್ಯವಾಗಿ ಬಿಟ್ಟಿದೆ. ಆದರೆ ಈ ಕಾಯಿಲೆ ಒಮ್ಮೆ ಆವರಿಸಿಬಿಟ್ಟರೆ ಅದರಿಂದ ಸಂಪೂರ್ಣವಾಗಿ ಹೊರಬರಲು ಸಾಧ್ಯವಿಲ್ಲ. ಆದರೆ ಈ ಸಮಯದಲ್ಲಿ ಸರಿಯಾದ ಆಹಾರಪದ್ಧತಿ ಹಾಗೂ ಒಳ್ಳೆಯ ಜೀವನಶೈಲಿ ನಡೆಸಿದರೆ, ಮಾತ್ರ ಅಲ್ಪಮಟ್ಟಿಗೆ ಆದರೂ ಇದನ್ನು ನಿಯಂತ್ರಣ ಮಾಡಿಕೊಳ್ಳಬಹುದು.
BIGG NEWS: ಇಂಟ್ರಾನಾಸಲ್ ಕೋವಿಡ್ ಲಸಿಕೆಯ 3ನೇ ಹಂತದ ಪ್ರಯೋಗ ಪೂರ್ಣಗೊಳಿಸಿದ ಭಾರತ್ ಬಯೋಟೆಕ್
ಪ್ರತಿದಿನವೂ ಔಷಧಗಳನ್ನು ತಪ್ಪದೆ ತೆಗೆದುಕೊಳ್ಳಬೇಕು. ಒಂದು ವೇಳೆ ಅಜಾಗರೂಕತೆಯಿಂದ ಇದ್ದರೆ, ನೀವು ಗಂಭೀರವಾದ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕೆಲವರಿಗೆ ಮದ್ಯ ಸೇವನೆ ಮಾಡುವ ಹವ್ಯಾಸವನ್ನು ಬಳಸಿಕೊಂಡು ಬರುತ್ತಿರುತ್ತಾರೆ. ಆದರೆ
ಸಕ್ಕರೆಕಾಯಿಲೆ ಇದ್ದ ಮೇಲೂ ಸಹ ಅದನ್ನ ರೂಢಿಸಿಕೊಳ್ಳುತ್ತಾರೆ. ಒಮ್ಮೊಮ್ಮೆ ಬಿಡಬೇಕು ಅನಿಸಿದರೂ ಅದನ್ನು ಬಿಡುವುದಕ್ಕೆ ಆಗೊಲ್ಲ. ಹಾಗಾಗಿ ಇದರಿಂದ ಜೀವಿತಾವಧಿ ಕಡಿಮೆಯಾಗುವ ಸಂಭವ ಹೆಚ್ಚು. ಇದರಿಂದ ಅಕಾಲಿಕ ಮರಣವೂ ಸಂಭವಿಸಬಹುದು. ಏಕೆಂದರೆ, ಮಧುಮೇಹ ಇರುವವರು ಮದ್ಯಪಾನ ಮಾಡಬಾರದು. ಅದು ಹವ್ಯಾಸವಾಗಿದ್ದರೂ, ಅದನ್ನು ಬಿಡಲೇಬೇಕು. ಇಲ್ಲದಿದ್ದರೆ ಒಂದು ದಿನ ಪರಿಣಾಮ ಎದುರಿಸಬೇಕಾಗುತ್ತದೆ.
BIGG NEWS: ಇಂಟ್ರಾನಾಸಲ್ ಕೋವಿಡ್ ಲಸಿಕೆಯ 3ನೇ ಹಂತದ ಪ್ರಯೋಗ ಪೂರ್ಣಗೊಳಿಸಿದ ಭಾರತ್ ಬಯೋಟೆಕ್
ಆಲ್ಕೋಹಾಲ್ ಸೇವಿಸಿದರೆ, ಆ ಆಲ್ಕೋಹಾಲ್ ನರಗಳಿಗೂ ಹಾನಿ ಮಾಡುತ್ತದೆ. ಅಂದರೆ, ಮಧುಮೇಹ ಇರುವವರು ಮದ್ಯಪಾನ ಮಾಡಿದರೆ ನರಗಳು ಬಲು ಬೇಗನೆ ಹಾನಿಗೊಳಗಾಗುತ್ತವೆ. ಒಂದು ವೇಳೆ ನೀವು ಆಕಸ್ಮಿಕವಾಗಿ ಅಥವಾ ಅನಿವಾರ್ಯವಾಗಿ ಮದ್ಯಪಾನ ಮಾಡಬೇಕಾಗಿ ಬಂದರೆ, ಅದನ್ನು ಬಹಳ ಕಡಿಮೆ ಪ್ರಮಾಣದಲ್ಲಿ ಕುಡಿಯಿರಿ. ಮದ್ಯ ಕುಡಿದ ತಕ್ಷಣವೇ ಆಹಾರ ಸೇವಿಸಿ. ಆಲ್ಕೋಹಾಲ್ ಕುಡಿದ ನಂತರ ನೀವು ತಿನ್ನದಿದ್ದರೆ, ಅದು ದೇಹಕ್ಕೆ ತುಂಬಾ ಸಮಸ್ಯೆ ಮಾಡುತ್ತದೆ.