Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪ್ರತಿಭಟನೆ ವೇಳೆ ನೇಪಾಳ ಸಂಸತ್ ನಿಂದ ವೀಲ್ ಚೇರ್ ಸೇರಿ ಹಲವು ವಸ್ತುಗಳ ‘ಲೂಟಿ’ : ವಿಡಿಯೋ ವೈರಲ್ | WATCH VIDEO

10/09/2025 8:33 AM

ನೀವು ಮಲಗುವ ಭಂಗಿಯಿಂದಲೂ ನಿಮ್ಮ ಆರೋಗ್ಯ ಮತ್ತು ವ್ಯಕ್ತಿತ್ವವನ್ನು ತಿಳಿಯಬಹುದು.!

10/09/2025 8:30 AM

ಆತ್ಮಹತ್ಯೆ ತಡೆಗೆ ಹೊಸ ದೃಷ್ಟಿಕೋನ: ಮನಸ್ಸಿನ ಆರೈಕೆ ಮುಖ್ಯ | World Suicide prevention Day 2025

10/09/2025 8:24 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಹಿಟ್ & ರನ್ ಪ್ರಕರಣದಲ್ಲಿ ಮರಣ ಹೊಂದಿದ, ತೀವ್ರ ಗಾಯಗೊಂಡವರಿಗೆ ಸರ್ಕಾರದಿಂದ ಸಿಗಲಿದೆ ಪರಿಹಾರ.!
KARNATAKA

ಹಿಟ್ & ರನ್ ಪ್ರಕರಣದಲ್ಲಿ ಮರಣ ಹೊಂದಿದ, ತೀವ್ರ ಗಾಯಗೊಂಡವರಿಗೆ ಸರ್ಕಾರದಿಂದ ಸಿಗಲಿದೆ ಪರಿಹಾರ.!

By kannadanewsnow5711/07/2025 6:26 AM

ಹಿಟ್ ಅಂಡ್ ರನ್ ಪ್ರಕರಣಗಳಲ್ಲಿ ಮರಣ ಹೊಂದಿದವರಿಗೆ ಮತ್ತು ತೀವ್ರ ಗಾಯಗೊಂಡವರಿಗೆ ಪರಿಹಾರ ನೀಡಲು ಅನುಷ್ಠಾನಗೊಳಿಸಲಾಗಿರುವ ಯೋಜನೆಯ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸುರೇಶ ಬಿ. ಇಟ್ನಾಳ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ ಅವರು ಸೂಚನೆ ನೀಡಿದ್ದಾರೆ.

ಹಿಟ್ ಅಂಡ್ ರನ್ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರದ ಆದೇಶಗಳನ್ವಯ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಮೋಟಾರು ವಾಹನಗಳ ಕಾಯಿದೆಯಡಿ ಅಪರಿಚಿತ ವಾಹನ ಡಿಕ್ಕಿಯಾಗಿ ಅಪಘಾತದಲ್ಲಿ ಮರಣ ಹೊಂದಿದ ವಾರಸುದಾರರಿಗೆ ರೂ.2 ಲಕ್ಷಗಳು ಮತ್ತು ತೀವು ಗಾಯಗೊಂಡವರಿಗೆ ರೂ.50.000 ಗಳನ್ನು ಪರಿಹಾರ ನೀಡಲು ಆದೇಶಿಸಲಾಗಿರುತ್ತದ. ಈ ಯೋಜನೆಯಲ್ಲಿ ಸಂತ್ರಸ್ತರು ಸಲ್ಲಿಸಿದ ಅರ್ಜಿ ಮತ್ತು ದಾಖಲೆಗಳನ್ನು ತಹಶೀಲ್ದಾರ ಅಥವಾ ಉಪವಿಭಾಗಾಧಿಕಾರಿಗಳು 30 ದಿನಗಳ ಒಳಗಾಗಿ ಪರಿಶೀಲಿಸಿ ಶಿಫಾರಸ್ಸು ಮಾಡಿ ಪರಿಹಾರದ ಆದೇಶಕ್ಕಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕಾಗುತ್ತದೆ ನಂತರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಪ್ರಸ್ತಾವನೆಯನ್ನು ಪರಿಶೀಲಿಸಿ 15 ದಿನದೊಳಗೆ ಪರಿಹಾರ ಮಂಜೂರಾತಿ ಆದೇಶವನ್ನು ಜನರಲ್ ಇನ್ಸೂರೆನ್ಸ್ ಕೌನ್ಸಿಲ್ (General Insurance Council) ಇವರಿಗೆ ಸಲ್ಲಿಸಲಾಗುತ್ತದೆ.

ಆದರೆ, ಈ ಯೋಜನಯು ಕಾಲಮಿತಿಯೊಳಗ ಕಾರ್ಯನಿರ್ವಹಿಸಬೇಕಾಗಿದ್ದರೂ ಸಹ ಸಂಬಂಧಪಟ್ಟ ಪ್ರಾಧಿಕಾರದಲ್ಲಿ ಈ ಯೋಜನ ಅನುಷ್ಠಾನಗೊಂಡ ಮಹತ್ವವನ್ನು ಅರಿಯದೇ ಕಾಲ ವಿಳಂಬದಲ್ಲಿ ಕಾರ್ಯ ನಿರ್ವಹಿಸಲಾಗಿತ್ತಿದ್ದು, ಇದರಿಂದ ಪರಿಹಾರ ಕೋರಿ ಸಲ್ಲಿಸುವ ಅರ್ಜಿಗಳನ್ನು ಆದ್ಯತೆ ಮೇರೆಗೆ ಪರಿಗಣಿಸಿ ನಿರ್ವಹಿಸದೇ ಇರುವ ಪ್ರಯುಕ್ತ ಸಂತ್ರಸ್ತರಿಗೆ ಪರಿಹಾರದ ಅವಶ್ಯಕತವಿರುವ ಸಮಯದಲ್ಲಿ ಸಿಗದೇ ಕಷ್ಟ ಪಡುತ್ತಿರುವುದು ಗಮನಿಸಲಾಗಿದೆ.

ಈ ಪ್ರಯುಕ್ತ ಆ ಯೋಜನೆಯಡಿ ಸಂತ್ರಸ್ಥರು ನಿಗದಿತ ಸಮಯದಲ್ಲಿ ಪರಿಹಾರ ಪಡೆಯಲು ಸರ್ಕಾರದ ಆದೇಶ ಅಥವಾ ಸುತ್ತೋಲೆ ಅಥವಾ ಮಾರ್ಗಸೂಚಿಗಳನ್ನಯ ಕಡ್ಡಾಯವಾಗಿ ಕಾರ್ಯನಿರ್ವಹಿಸಬೇಕಾಗಿರುವುದು ಎಲ್ಲರ ಜವಾಬ್ದಾರಿಯಾಗಿದ್ದು, ಈ ಯೋಜನೆಯಲ್ಲಿ ಪ್ರಮುಖವಾಗಿ ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾ ನಿರೀಕ್ಷಕರು ಬೆಂಗಳೂರು ರವರ ಸುತ್ತೋಲೆಯಲ್ಲಿ ಪೊಲೀಸ್ ಠಾಣಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಹಿಟ್ ಅಂಡ್ ರನ್ ಯೋಜನೆಯಡಿ ಪರಿಹಾರ ಕುರಿತು ಕಾರ್ಯವಿಧಾನ:

ಅವಘಾತ ನಡೆದ ವ್ಯಾಪ್ತಿಯ ಪೊಲೀಸ್ ಠಾಣಾಧಿಕಾರಿಗಳು ಎಫ್.ಐ.ಆರ್ ದಾಖಲಿಸಿ, ಸಂತ್ರಸ್ಥರಿಗೆ ವರಿಹಾರಕ್ಕಾಗಿ ಅರ್ಜಿ ನಮೂನೆ ನೀಡಿ ಮೃತ ಅಥವಾ ತೀವು ಗಾಯಗೊಂಡ ಕಟುಂಬದವರಿಗೆ ಅಗತ್ಯ ದಾಖಲೆಯೊಂದಿಗೆ ಕ್ಲೇಮ್ ಎನ್ಕ್ವೈರಿ ಆಫಿಸರ್ (Claim Enquiry Officer) ಆಗಿರುವ ತಹಶೀಲ್ದಾರ್ ಅಥವಾ ಉಪವಿಭಾಗಾಧಿಕಾರಿಗಳ ರವರಿಗೆ ಅರ್ಜಿಯನ್ನು ಸಲ್ಲಿಸಲು ತಿಳುವಳಿಕೆ ನೀಡಿ ಸಂತ್ರಜ್ಞರಿಗೆ ಪರಿಹಾರ ಪಡೆಯುವಂತೆ ಸಹಕರಿಸಬೇಕು.

ಪರಿಹಾರ ಕೋರಿ ಅರ್ಜಿ ಸಲ್ಲಿಸುವ ವಾರಸುದಾರರು ಅಥವಾ ಭಾದಿತ ವ್ಯಕ್ತಿಯು ಸಂಬAಧಿಸಿದ ಠಾಣಾಧಿಕಾರಿಗಳಿಂದ ಅರ್ಜಿ ನಮೂನೆ-1ನ್ನು ಪಡೆದು ಎಫ್.ಐ.ಆರ್. “ಸಿ” ರಿಪೋರ್ಟ್, ಬ್ಯಾಂಕ್ ವಾಸ್ ಬುಕ್ ಪ್ರತಿ, ನಮೂನೆ-4 (Under Taking) ಹಾಗೂ ಮೃತ ಪ್ರಕರಣಗಳಲ್ಲಿ ಪೋಸ್ಟ್ ಮಾರ್ಟಮ್ ವರದಿ ಮರಣ ಪ್ರಮಾಣ ಪತ್ರ ಅಥವಾ ತೀವ್ರ ಗಾಯಗೊಂಡಿದ್ದಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಗ್ಗೆ, ದಾಖಲೆಗಳು ಮತ್ತು ಆಧಾರ ಪ್ರತಿಗಳೊಂದಿಗೆ ಅವಘಾತ ಸಂಭವಿಸಿದ ವ್ಯಾಪ್ತಿಯ ಕ್ಲೇಮ್ ಎನ್ಕ್ವೈರಿ ಆಫಿಸರ್ ಆಗಿರುವ ತಹಶೀಲ್ದಾರ್ ಅಥವಾ ಉಪವಿಭಾಗಾಧಿಕಾರಿಗಳಿಗೆ ಸಲ್ಲಿಸಬೇಕು.

ತದನಂತರ ಸಂಬಂಧಪಟ್ಟ ಉಪವಿಭಾಗಾಧಿಕಾರಿ ಅಥವಾ ತಹಶೀಲ್ದಾರ್ರವರು ಪರಿಹಾರ ಅರ್ಜಿ ಹಾಗೂ ದಾಖಲೆಗಳನ್ನು ಪರಿಶೀಲಿಸಿ ನಮೂನೆ-2ರಲ್ಲಿ ಸದರಿಯವರ ಸೂಕ್ತ ಶಿಫಾರಸಿ ನೊಂದಿಗೆ ಅರ್ಜಿ ದಿನಾಂಕದಿಂದ 30 ದಿನದೊಳಗಾಗಿ ಜಿಲ್ಲಾಧಿಕಾರಿಗಳು ಕ್ಲೇಮ್ ಸೆಟಲ್ಮೆಂಟ್ ಆಫಿಸರ್ (Claim Settlement Officer) ಆಗಿದ್ದು ಇವರಿಗೆ ಸಲ್ಲಿಸಬೇಕು.

ನಂತರ ಜಿಲ್ಲಾಧಿಕಾರಿಗಳು, ಪರಿಹಾರ ಅರ್ಜಿಯನ್ನು ಪರಿಶೀಲಿಸಿ ನಮೂನೆ-3 ರಲ್ಲಿ ಪರಿಹಾರ ಕುರಿತು ಆದೇಶ ಮಂಜೂರು ಮಾಡಿ ಜನರಲ್ ಇನ್ಸೂರೆನ್ಸ್ ಕೌನ್ಸಿಲ್, ಇವರಿಗೆ ಪರಿಹಾರ ಪಾವತಿಸುವಂತೆ ಪ್ರಸ್ತಾವನೆಯೊಂದಿಗೆ ಅದೇಶದ ಪ್ರತಿಯನ್ನು 15 ದಿನದೊಳಗಾಗಿ ಸಲ್ಲಿಸಲಾಗುತ್ತದೆ.

ನಂತರ ಜನರಲ್ ಇನ್ಸೂರೆನ್ಸ್ ಕೌನ್ಸಿಲ್ ಇವರಿಂದ ಪರಿಶೀಲನೆಗೊಂಡು ಸಂಬಂಧಪಟ್ಟ ವ್ಯಕ್ತಿಗಳ ಬ್ಯಾಂಕ್ ಖಾತೆಗೆ ಜನರಲ್ ಇನ್ಸೂರೆನ್ಸ್ ಕೌನ್ಸಿಲ್ ಇವರಿಂದ ನೇರವಾಗಿ ಪರಿಹಾರದ ಮೊತ್ತವನ್ನು 15 ದಿನದೊಳಗಾಗಿ ಸಂಬಂಧಪಟ್ಟವರಿಗೆ ಜಮೆಯಾಗುತ್ತದೆ.

ಈ ಮೇಲ್ಕಂಡ ಕಾರ್ಯವಿಧಾನವನ್ನು ಸಂಬಂಧಪಟ್ಟ ಇಲಾಖೆಯವರು ಕಾಲಮಿತಿಯಲ್ಲಿ ಕಡ್ಡಾಯವಾಗಿ ನಿರ್ವಹಿಸಬೇಕಾಗಿದ್ದು ಜನ ಸಾಮಾನ್ಯರಲ್ಲಿ ಈ ಕಾರ್ಯವಿಧಾನದ ಮಾಹಿತಿ ಕೊರತೆಯಿಂದ ಸರ್ಕಾರದ ಹಿತಚಿಂತಕ ಯೋಜನೆಯು ಪರಿಣಾಮಕಾರಿಯಾಗಿ ಅನುಷ್ಠಾನವಾಗುತ್ತಿಲ್ಲ. ಸರ್ಕಾರದ ಈ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಸಾವರ್ಜನಿಕರಲ್ಲಿ ಹೆಚ್ಚಿನ ಅರಿವು ಮತ್ತು ಪ್ರಚಾರವನ್ನು ಮೂಡಿಸುವುದು ಅವಶ್ಯಕವಾಗಿದ್ದು, ಈ ಪರಿಹಾರ ಕಾರ್ಯವಿಧಾನವನ್ನು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ತಮ್ಮ ಕಚೇರಿಯಲ್ಲಿ ಹಾಗೂ ತಮ್ಮ ಕಾರ್ಯ ವ್ಯಾಪ್ತಿಯಲ್ಲಿರುವ ಎಲ್ಲಾ ಅಧೀನ ಕಚೇರಿಗಳಲ್ಲಿ ಕಡ್ಡಾಯವಾಗಿ ಕಚೇರಿಯ ಆವರಣದಲ್ಲಿ ಸಾರ್ವಜನಿಕರಿಗೆ ಕಾಣುವ ಸ್ಥಳಗಳಲ್ಲಿ ಫಲಕಗಳನ್ನು ಅಳವಡಿಸುವ ಮೂಲಕ ವ್ಯಾಪಕ ಪ್ರಚಾರ ಅಥವಾ ಅರಿವು ಮೂಡಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಇದರಿಂದ ಸಾರ್ವಜನಿಕರಲ್ಲಿ ಅರಿವು ಮೂಡಿ ಮೃತರ ಕುಟುಂಬಗಳಿಗೆ ಹಾಗೂ ಅವಘಾತದಿಂದ ಭಾದಿತರಾಗುವ ವ್ಯಕ್ತಿಗಳಿಗೆ ಸರ್ಕಾರವು ನೀಡುವ ನೆರವು ಸಕಾಲದಲ್ಲಿ ದೊರಕಿಸುವಂತಾಗುತ್ತದೆ ಎಂದು ಜಿಲ್ಲಾಧಿಕಾರಿ ಸುರೇಶ ಬಿ. ಇಟ್ನಾಳ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ ಅವರು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Those who died or were seriously injured in hit-and-run cases will receive compensation from the government!
Share. Facebook Twitter LinkedIn WhatsApp Email

Related Posts

ನೀವು ಮಲಗುವ ಭಂಗಿಯಿಂದಲೂ ನಿಮ್ಮ ಆರೋಗ್ಯ ಮತ್ತು ವ್ಯಕ್ತಿತ್ವವನ್ನು ತಿಳಿಯಬಹುದು.!

10/09/2025 8:30 AM1 Min Read

ಪೋಷಕರೇ ನಿಮ್ಮ ಮಕ್ಕಳ ಮೊಬೈಲ್ ಚಟ ಬಿಡಿಸಲು ತಪ್ಪದೇ ಈ 7 ಸಲಹೆಗಳನ್ನು ಪಾಲಿಸಿ

10/09/2025 8:00 AM1 Min Read

ರಾಜ್ಯದ 9, 10ನೇ ತರಗತಿ ವಿದ್ಯಾರ್ಥಿಗಳ ಗಮನಕ್ಕೆ: ವಿದ್ಯಾರ್ಥಿ ವೇತನಕ್ಕೆ ‘ಆಧಾರ್’ ಜೋಡಣೆ ಕಡ್ಡಾಯ

10/09/2025 7:55 AM1 Min Read
Recent News

ಪ್ರತಿಭಟನೆ ವೇಳೆ ನೇಪಾಳ ಸಂಸತ್ ನಿಂದ ವೀಲ್ ಚೇರ್ ಸೇರಿ ಹಲವು ವಸ್ತುಗಳ ‘ಲೂಟಿ’ : ವಿಡಿಯೋ ವೈರಲ್ | WATCH VIDEO

10/09/2025 8:33 AM

ನೀವು ಮಲಗುವ ಭಂಗಿಯಿಂದಲೂ ನಿಮ್ಮ ಆರೋಗ್ಯ ಮತ್ತು ವ್ಯಕ್ತಿತ್ವವನ್ನು ತಿಳಿಯಬಹುದು.!

10/09/2025 8:30 AM

ಆತ್ಮಹತ್ಯೆ ತಡೆಗೆ ಹೊಸ ದೃಷ್ಟಿಕೋನ: ಮನಸ್ಸಿನ ಆರೈಕೆ ಮುಖ್ಯ | World Suicide prevention Day 2025

10/09/2025 8:24 AM

ವೇಶ್ಯಾಗೃಹಗಳಲ್ಲಿ ಲೈಂಗಿಕ ಸೇವೆ ಪಡೆಯುವ ಗ್ರಾಹಕರ ಮೇಲೂ ಮೊಕದ್ದಮೆ ಹೂಡಬಹುದು : ಹೈಕೋರ್ಟ್ ಮಹತ್ವದ ತೀರ್ಪು

10/09/2025 8:22 AM
State News
KARNATAKA

ನೀವು ಮಲಗುವ ಭಂಗಿಯಿಂದಲೂ ನಿಮ್ಮ ಆರೋಗ್ಯ ಮತ್ತು ವ್ಯಕ್ತಿತ್ವವನ್ನು ತಿಳಿಯಬಹುದು.!

By kannadanewsnow5710/09/2025 8:30 AM KARNATAKA 1 Min Read

ನಾವೆಲ್ಲರೂ ರಾತ್ರಿಯಲ್ಲಿ ನಿದ್ರಿಸುತ್ತೇವೆ… ಆದರೆ ನಾವು ಮಲಗುವ ಭಂಗಿಯು ನಮ್ಮ ಅಭ್ಯಾಸಗಳು, ಆರೋಗ್ಯ ಮತ್ತು ವ್ಯಕ್ತಿತ್ವದ ಬಗ್ಗೆ ಬಹಳಷ್ಟು ಹೇಳುತ್ತದೆ.…

ಪೋಷಕರೇ ನಿಮ್ಮ ಮಕ್ಕಳ ಮೊಬೈಲ್ ಚಟ ಬಿಡಿಸಲು ತಪ್ಪದೇ ಈ 7 ಸಲಹೆಗಳನ್ನು ಪಾಲಿಸಿ

10/09/2025 8:00 AM

ರಾಜ್ಯದ 9, 10ನೇ ತರಗತಿ ವಿದ್ಯಾರ್ಥಿಗಳ ಗಮನಕ್ಕೆ: ವಿದ್ಯಾರ್ಥಿ ವೇತನಕ್ಕೆ ‘ಆಧಾರ್’ ಜೋಡಣೆ ಕಡ್ಡಾಯ

10/09/2025 7:55 AM

ರಾಜ್ಯ ಸರ್ಕಾರದಿಂದ ಮಕ್ಕಳಲ್ಲಿನ ‘ಅಪೌಷ್ಠಿಕತೆ ನಿರ್ವಾರಣೆ’ಗೆ ಮಹತ್ವದ ಕ್ರಮ: ‘ಚಿಗುರು ಯೋಜನೆ’ಗೆ ಚಾಲನೆ

10/09/2025 7:54 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.