Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ವಿಶ್ವದ ನಂಬರ್ 1 ಆಟಗಾರ್ತಿ ‘ಸಬಲೆಂಕಾ’ ಮಣಿಸಿ ಚೊಚ್ಚಲ ‘ಫ್ರೆಂಚ್ ಓಪನ್ ಕಿರೀಟ’ ಗೆದ್ದ ‘ಕೊಕೊ ಗೌಫ್’

07/06/2025 9:58 PM

Good News : ಆಪರೇಷನ್ ಸಿಂಧೂರ್ ರೀಚಾರ್ಜ್ ಆಫರ್ ; ‘ಕ್ಯಾಶ್ ಬ್ಯಾಕ್’ ಜೊತೆಗೆ ‘ರಾಷ್ಟ್ರ ಸೇವೆ’ ಸೌಭಾಗ್ಯ

07/06/2025 9:34 PM

BREAKING: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ ದುರಂತ ಪ್ರಕರಣ: ಪರಿಹಾರದ ಮೊತ್ತ 25 ಲಕ್ಷಕ್ಕೆ ಹೆಚ್ಚಿಸಿದ ರಾಜ್ಯ ಸರ್ಕಾರ

07/06/2025 9:21 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಗ್ಯಾರಂಟಿ ಯೋಜನೆ’ಗಳ ಟೀಕೆ ಮಾಡಿದವರೇ ‘ಗ್ಯಾರಂಟಿ’ ಹೆಸರಲ್ಲಿ ಪ್ರಚಾರ- ಸಂಸದ ಡಿ.ಕೆ. ಸುರೇಶ್
KARNATAKA

‘ಗ್ಯಾರಂಟಿ ಯೋಜನೆ’ಗಳ ಟೀಕೆ ಮಾಡಿದವರೇ ‘ಗ್ಯಾರಂಟಿ’ ಹೆಸರಲ್ಲಿ ಪ್ರಚಾರ- ಸಂಸದ ಡಿ.ಕೆ. ಸುರೇಶ್

By kannadanewsnow0911/01/2024 6:17 PM

ಬೆಂಗಳೂರು : ಜನರ ಸಮಸ್ಯೆಗಳಿಗೆ ಪರಿಹಾರ ಕೊಟ್ಟು ಅವರಿಗೆ ಶಕ್ತಿ ತುಂಬುವ ಉದ್ದೇಶದೊಂದಿಗೆ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಗ್ಯಾರಂಟಿ ಯೋಜನೆಗಳನ್ನು ಟೀಕೆ ಮಾಡಿದವರೇ ಇಂದು ಗ್ಯಾರಂಟಿ ಹೆಸರಲ್ಲಿ ಪ್ರಚಾರ ಪಡೆಯುತ್ತಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್ ಅವರು ತಿಳಿಸಿದರು.

ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಜರಗನಹಳ್ಳಿ ಸರ್ಕಾರಿ ಶಾಲಾ ಮೈದಾನದಲ್ಲಿ ಗುರುವಾರ ನಡೆದ “ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿರೋಧ ಪಕ್ಷದಲ್ಲಿದ್ದಾಗ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಪ್ರವಾಸ ಮಾಡಿ ಜನರ ಸಮಸ್ಯೆಗಳನ್ನು ಅರಿತು ಅವರಿಗೆ ಶಕ್ತಿ ತುಂಬುವ ಉದ್ದೇಶದೊಂದಿಗೆ ಈ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದ್ದರು. ಸರ್ಕಾರ ಬಂದ ನಂತರ ಕೊಟ್ಟ ಮಾತಿನಂತೆ ಈ ಯೋಜನೆಗಳನ್ನು ಜಾರಿ ಮಾಡಲಾಗಿದೆ ಎಂದರು.

ಈ ಯೋಜನೆಗಳು ಯಾವುದೇ ಜಾತಿ, ಧರ್ಮಕ್ಕೆ ಸೇರಿಲ್ಲ. ರಾಜ್ಯದ 224 ಕ್ಷೇತ್ರಗಳಲ್ಲಿ ಎಲ್ಲಾ ವರ್ಗದ ಜನರಿಗೆ ಶಕ್ತಿ ತುಂಬುವ ಉದ್ದೇಶದೊಂದಿಗೆ ಈ ಯೋಜನೆಗಳನ್ನು ಜಾರಿ ತರಲಾಗಿದೆ ಎಂದು ಹೇಳಿದರು.

ಸರ್ಕಾರ ಈ ಗ್ಯಾರಂಟಿ ಯೋಜನೆಗಳಿಗೆ ಪ್ರತಿ ವರ್ಷ 58 ಸಾವಿರ ಕೋಟಿ ಅನುದಾನ ನೀಡುತ್ತಿದೆ. ಅಪಾರ್ಟ್ಮೆಂಟ್ ನಿವಾಸಿಗಳು ಗೃಹಜ್ಯೋತಿ ಯೋಜನೆಗೆ ಅರ್ಜಿ ಹಾಕಿಕೊಂಡಿದ್ದಾರೆ. ಅಂದರೆ ಅಪಾರ್ಟ್ಮೆಂಟ್ ನಿವಾಸಿಗಳು ಕಷ್ಟದ ಪರಿಸ್ಥಿತಿಯಲ್ಲಿದ್ದಾರೆ ಎಂಬುದು ಅರ್ಥವಾಗುತ್ತದೆ ತಿಳಿಸಿದರು.

ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ ಸರ್ಕಾರ ಇಂತಹ ಕಾರ್ಯಕ್ರಮಗಳ ಮೂಲಕ ಜನರ ಸಮಸ್ಯೆಗೆ ಪರಿಹಾರ ನೀಡಲು ಮುಂದಾಗಿದೆ. ಮುಖ್ಯಮಂತ್ರಿ ನೇತೃತ್ವದಲ್ಲಿ ಬೆಂಗಳೂರಿಗೆ ಹೊಸ ಕಾಯಕಲ್ಪ ನೀಡಲು, ಸರ್ಕಾರ ಜನರ ಮನೆ ಬಾಗಿಲಿಗೆ ಬಂದು ಸ್ಥಳದಲ್ಲೇ ಜನರ ಸಮಸ್ಯೆಗೆ ಪರಿಹಾರ ನೀಡಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ನಾನು ಈ ಭಾಗದ ಜನಪ್ರತಿನಿಧಿಯಾಗಿ ನಿಮ್ಮ ಅಹವಾಲುಗಳು ಹಾಗು ಜ್ವಲಂತ ಸಮಸ್ಯೆಗಳನ್ನು ಉಪಮುಖ್ಯಮಂತ್ರಿ ಹಾಗು ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ತರುತ್ತೇನೆ. ಸರ್ಕಾರದ ಉದ್ದೇಶ ಸಫಲವಾಗಬೇಕಾದರೆ ಅಧಿಕಾರಿಗಳು ಶ್ರಮ ವಹಿಸಿ ಸಾರ್ವಜನಿಕರ ಅಹವಾಲುಗಳಿಗೆ ಪರಿಹಾರ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.

ಬೆಂಗಳೂರು ಸಮಸ್ಯೆಗಳ ಸಾಗರವನ್ನು ಇಟ್ಟುಕೊಂಡಿದೆ. ಟ್ರಾಫಿಕ್, ರಸ್ತೆ ಗುಂಡಿ, 110 ಹಳ್ಳಿಗಳ ಮೂಲಸೌಕರ್ಯ, ಕೆರೆಗಳ ಪುನಶ್ಚೇತನ ಸೇರಿದಂತೆ ಅನೇಕ ಸಮಸ್ಯೆ ಇದೆ. ಈ ಅಹವಾಲು ಸ್ವೀಕಾರ ನಂತರ ಉಪಮುಖ್ಯಮಂತ್ರಿ ಗಳು ಸ್ಥಳಕ್ಕೆ ಭೇಟಿ ನೀಡಿ ಕಾನೂನಾತ್ಮಕ ಪರಿಹಾರ ನೀಡಬೇಕು. ಆಗ ಜನರ ಆಶೀರ್ವಾದದಿಂದ ಬಂದಿರುವ ಸರ್ಕಾರ ಯಶಸ್ಸು ಕಾಣಲಿದೆ ಎಂದು ಹೇಳಿದರು.

ಕನಕಪುರ ರಸ್ತೆಯ ಬಳಿ ಅಪಾರ್ಟ್ಮೆಂಟ್ ಗಳು ಹೆಚ್ಚಾಗಿದ್ದು ಸಂಚಾರ ದಟ್ಟಣೆ ಹೆಚ್ಚಾಗಿದೆ. ಬೆಳಗ್ಗೆ ಹಾಗು ಸಂಜೆ ಒಂದೇ ತಾಸಿನಲ್ಲಿ 2 ಸಾವಿರ ಕಾರುಗಳು ಒಂದು ಗಂಟೆ ಅವಧಿಯಲ್ಲಿ ಈ ಅಪಾರ್ಟ್ಮೆಂಟ್ ಗಳಿಂದ ಹೊರಗೆ ಹಾಗು ಒಳಗೆ ಸಂಚಾರ ಮಾಡುತ್ತವೆ ಎಂದರು.

ಕುಡಿಯುವ ನೀರಿನ ಸಮಸ್ಯೆ ಇದೆ. ದಕ್ಷಿಣ ವಿಧಾನಸಭಾ ಕ್ಷೇತ್ರದ ಜನರಿಗೆ ಸರಾಸರಿ 8 ದಿನಕ್ಕೊಮ್ಮೆ ನೀರು ಬಿಡುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕು. ಎಲೆಕ್ಟ್ರಾನಿಕ್ ಸಿಟಿ ಹಾಗೂ ಬೇಗೂರು ಭಾಗದಲ್ಲಿನ ಸಂಚಾರ ದಟ್ಟಣೆಯ ಪರಿಹಾರ ನೀಡಬೇಕು ಎಂದರು.

ಹೀಗಿವೆ ಇಂದಿನ ‘ಡಿಸಿಎಂ ಡಿಕೆಶಿ’ ಜರಗನಹಳ್ಳಿಯಲ್ಲಿ ನಡೆಸಿದ ‘ಜನಸ್ಪಂದನ ಕಾರ್ಯಕ್ರಮ’ದ ಹೈಲೈಟ್ಸ್

ಕರ್ನಾಟಕದ ‘ರಾಮನ ಭಕ್ತ’ರಿಗೆ ಶಾಕ್: ‘ಬೆಂಗಳೂರು-ಅಯೋಧ್ಯೆ’ ವಿಮಾನ ಪ್ರಯಾಣ ದರ ಶೇ.400ರಷ್ಟು ಏರಿಕೆ

Share. Facebook Twitter LinkedIn WhatsApp Email

Related Posts

BREAKING: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ ದುರಂತ ಪ್ರಕರಣ: ಪರಿಹಾರದ ಮೊತ್ತ 25 ಲಕ್ಷಕ್ಕೆ ಹೆಚ್ಚಿಸಿದ ರಾಜ್ಯ ಸರ್ಕಾರ

07/06/2025 9:21 PM1 Min Read

BREAKING: ಬೆಂಗಳೂರು ಕಾಲ್ತುಳಿತ ದುರಂತ: ಮೃತರ ಕುಟುಂಬಕ್ಕೆ ತಲಾ 25 ಲಕ್ಷ ಪರಿಹಾರ- ಸಿಎಂ ಸಿದ್ಧರಾಮಯ್ಯ ಘೋಷಣೆ

07/06/2025 9:13 PM1 Min Read

BREAKING: ಜಮೀನಿನ ವಿಚಾರಕ್ಕೆ ಅಣ್ಣನ ಮಗನನ್ನೇ ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಕೊಲೆಗೈದ ಚಿಕ್ಕಪ್ಪ

07/06/2025 9:08 PM1 Min Read
Recent News

BREAKING : ವಿಶ್ವದ ನಂಬರ್ 1 ಆಟಗಾರ್ತಿ ‘ಸಬಲೆಂಕಾ’ ಮಣಿಸಿ ಚೊಚ್ಚಲ ‘ಫ್ರೆಂಚ್ ಓಪನ್ ಕಿರೀಟ’ ಗೆದ್ದ ‘ಕೊಕೊ ಗೌಫ್’

07/06/2025 9:58 PM

Good News : ಆಪರೇಷನ್ ಸಿಂಧೂರ್ ರೀಚಾರ್ಜ್ ಆಫರ್ ; ‘ಕ್ಯಾಶ್ ಬ್ಯಾಕ್’ ಜೊತೆಗೆ ‘ರಾಷ್ಟ್ರ ಸೇವೆ’ ಸೌಭಾಗ್ಯ

07/06/2025 9:34 PM

BREAKING: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ ದುರಂತ ಪ್ರಕರಣ: ಪರಿಹಾರದ ಮೊತ್ತ 25 ಲಕ್ಷಕ್ಕೆ ಹೆಚ್ಚಿಸಿದ ರಾಜ್ಯ ಸರ್ಕಾರ

07/06/2025 9:21 PM

ಪಹಲ್ಗಾಮ್ ಭಯೋತ್ಪಾದಕ ದಾಳಿ ಖಂಡಿಸಿದ ಜರ್ಮನಿ, ಉಗ್ರರ ವಿರುದ್ಧದ ಹೋರಾಟಕ್ಕೆ ಬೆಂಬಲ

07/06/2025 9:16 PM
State News
KARNATAKA

BREAKING: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ ದುರಂತ ಪ್ರಕರಣ: ಪರಿಹಾರದ ಮೊತ್ತ 25 ಲಕ್ಷಕ್ಕೆ ಹೆಚ್ಚಿಸಿದ ರಾಜ್ಯ ಸರ್ಕಾರ

By kannadanewsnow0907/06/2025 9:21 PM KARNATAKA 1 Min Read

ಬೆಂಗಳೂರು: ಆರ್ ಸಿ ಬಿ ವಿಜಯೋತ್ಸವ ಕಾರ್ಯಕ್ರಮದ ವೇಳೆಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿಯಲ್ಲಿ ಕಾಲ್ತುಳಿತ ಉಂಟಾಗಿ 11 ಮಂದಿ ಅಭಿಮಾನಿಗಳು…

BREAKING: ಬೆಂಗಳೂರು ಕಾಲ್ತುಳಿತ ದುರಂತ: ಮೃತರ ಕುಟುಂಬಕ್ಕೆ ತಲಾ 25 ಲಕ್ಷ ಪರಿಹಾರ- ಸಿಎಂ ಸಿದ್ಧರಾಮಯ್ಯ ಘೋಷಣೆ

07/06/2025 9:13 PM

BREAKING: ಜಮೀನಿನ ವಿಚಾರಕ್ಕೆ ಅಣ್ಣನ ಮಗನನ್ನೇ ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಕೊಲೆಗೈದ ಚಿಕ್ಕಪ್ಪ

07/06/2025 9:08 PM

ರಾಜ್ಯದಲ್ಲಿಂದು 57 ಜನರಿಗೆ ಕೊರೋನಾ ಪಾಸಿಟೀವ್: ಸೋಂಕಿಗೆ ಇಬ್ಬರು ಬಲಿ | Covid19 Update

07/06/2025 9:01 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.