ಮಡಿಕೇರಿ: ಚೀನಾ ಸೇರಿದಂತೆ ಹಲವು ವಿದೇಶಿಗಳಲ್ಲಿ ಕೊರೊನಾ ಹಾವಳಿ ಹೆಚ್ಚಾಗಿದ್ದು, ಕರ್ನಾಟಕ ಆತಂಕ ಸೃಷ್ಟಿಯಾಗಿದೆ.ಇನ್ನೇನು ಹೊಸ ವರ್ಷ ಹತ್ರ ಬರುತ್ತಿದೆ.
BIGG NEWS: ನನ್ನದು& ಸುಧಾಕರ್ರದ್ದು ತಂದೆ-ಮಗನ ಸಂಬಂಧ; ಡಾ. ಪರಮೇಶ್ವರ್
ಅದರಲ್ಲೂ ಸಾಲು ಸಾಲು ರಜೆಗಳಿದ್ದರಿಂದ ಹೊರಗೆ ಪ್ಲಾನ್ ಮಾಡುವವರ ಸಂಖ್ಯೆ ಹೆಚ್ಚಿರುತ್ತದೆ. ಅದರಲ್ಲೂ ಪ್ರವಾಸಿ ಜಿಲ್ಲೆ ಕೊಡಗಿನ ಕೊಡೆ ಹೋಗುವರು ಹೆಚ್ಚಿದ್ದು, ಹೀಗಾಗಿ ಕೊರೊನಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಮಾಸ್ಕ್ , ಸ್ಯಾನಿಟೈಸೇಶನ್, ದೈಹಿಕ ಅಂತರ ಕಡ್ಡಾಯಗೊಳಿಸಲಾಗಿದೆ. ಆದರೆ ಪ್ರವಾಸಿಗರ ನಿಯಂತ್ರಣಕ್ಕೆ ಯಾವುದೇ ಮಾರ್ಗಸೂಚಿ ಬಂದಿಲ್ಲ. ಹಾಗೂ ಗಡಿಯಲ್ಲಿ ತಪಾಸಣೆಗೆ ಸೂಚನೆ ಬಂದಿಲ್ಲ ಎಂದು ಕೊಡಗು ಜಿಲ್ಲಾ ವೈದ್ಯಾಧಿಕಾರಿ ಡಾ. ವೆಂಕಟೇಶ್ ಹೇಳಿದ್ದಾರೆ.
ಹೋಂಸ್ಟೇ, ರೆಸಾರ್ಟ್ ಮತ್ತು ಪ್ರವಾಸಿ ತಾಣಗಳಲ್ಲಿ ಗರಿಷ್ಟ ಮುನ್ನೆಚ್ಚರಿಕೆಗೆ ಸೂಚಿಲಸಾಗಿದೆ. ಕೊರೊನಾ ನಿಯಮಗಳ ಪಾಲನೆಗೆ ಪ್ರವಾಸೋದ್ಯಮಿಗಳಿಗೆ ಸೂಚಿಸಿದ್ದೇವೆ ಎಂದರು.