ಬೆಂಗಳೂರು: 40% ಕಮಿಷನ್ ಸರ್ಕಾರದ ( BJP Government ) ಸಚಿವರು ಬಾಯಿ ಬಿಟ್ಟರೆ ಸಾಕ್ಷಿ ಕೇಳುತ್ತಾರಲ್ಲ? ಬೊಮ್ಮಾಯಿವರೇ ತಾಕತ್ತಿದ್ದರೆ, ಧಮ್ಮಿದ್ರೆ ಈ ಪ್ರಕರಣವನ್ಮು ನಿಷ್ಪಕ್ಷಪಾತವಾಗಿ ತನಿಖೆಗೊಳಪಡಿಸುತ್ತೀರಾ? ಎಂಬುದಾಗಿ ಜೆಡಿಎಸ್ ಪಕ್ಷವು ( JDS Party ), ಸರಣಿ ಟ್ವಿಟ್ ನಲ್ಲಿ ಪ್ರಶ್ನಿಸಿದೆ.
40% ಕಮಿಷನ್ @BJP4Karnataka ಸಚಿವರು ಬಾಯಿ ಬಿಟ್ಟರೆ ಸಾಕ್ಷಿ ಕೇಳುತ್ತಾರಲ್ಲ? @BSBommai ಅವರೇ ತಾಕತ್ತಿದ್ದರೆ, ಧಮ್ಮಿದ್ರೆ ಈ ಪ್ರಕರಣವನ್ಮು ನಿಷ್ಪಕ್ಷಪಾತವಾಗಿ ತನಿಖೆಗೊಳಪಡಿಸುತ್ತೀರಾ?
2/4— Janata Dal Secular (@JanataDal_S) January 6, 2023
ಈ ಬಗ್ಗೆ ಟ್ವಿಟ್ ಮಾಡಿದ್ದು, ವಿಧಾನಸೌಧದಲ್ಲೇ ಲೋಕೋಪಯೋಗಿ ಇಲಾಖೆಯ ಕಿರಿಯ ಎಂಜಿನಿಯರ್ ಜಗದೀಶ್ ಎಂಬುವರ ಬ್ಯಾಗ್ ನಲ್ಲಿ 10 ಲಕ್ಷ ರೂಪಾಯಿ ಪತ್ತೆಯಾಗಿ ಜಪ್ತಿ ಮಾಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ. ರಾಜ್ಯ ಕಂಡೂ ಕೇಳರಿಯದ ಭ್ರಷ್ಟಾಚಾರದಿಂದ ನರಳುತ್ತಿರುವುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕೆ? ಎಂದು ಕೇಳಿದೆ.
ವಿಧಾನಸೌಧದಲ್ಲೇ ಲೋಕೋಪಯೋಗಿ ಇಲಾಖೆಯ ಕಿರಿಯ ಎಂಜಿನಿಯರ್ ಜಗದೀಶ್ ಎಂಬುವರ ಬ್ಯಾಗ್ ನಲ್ಲಿ 10 ಲಕ್ಷ ರೂಪಾಯಿ ಪತ್ತೆಯಾಗಿ ಜಪ್ತಿ ಮಾಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ. ರಾಜ್ಯ ಕಂಡೂ ಕೇಳರಿಯದ ಭ್ರಷ್ಟಾಚಾರದಿಂದ ನರಳುತ್ತಿರುವುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕೆ?
1/4— Janata Dal Secular (@JanataDal_S) January 6, 2023
ನಿಮ್ಮ ಕಮಿಷನ್ ಕಾಟ ತಾಳಲಾರದೆ ಒಬ್ಬರಾದ ಮೇಲೋಬ್ಬರಂತೆ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆತ್ಮಸಾಕ್ಷಿ ಸತ್ತುಹೋದ ನಿಮ್ಮಂತವರಿಗೆ ಕನ್ನಡಿಗರ ಹಿಡಿಶಾಪ ತಟ್ಟದೆ ಬಿಡದು ಎಂಬುದಾಗಿ ವಾಗ್ಧಾಳಿ ನಡೆಸಿದೆ.
ನಿಮ್ಮ ಕಮಿಷನ್ ಕಾಟ ತಾಳಲಾರದೆ ಒಬ್ಬರಾದ ಮೇಲೋಬ್ಬರಂತೆ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆತ್ಮಸಾಕ್ಷಿ ಸತ್ತುಹೋದ ನಿಮ್ಮಂತವರಿಗೆ ಕನ್ನಡಿಗರ ಹಿಡಿಶಾಪ ತಟ್ಟದೆ ಬಿಡದು.
3/4— Janata Dal Secular (@JanataDal_S) January 6, 2023
ಭ್ರಷ್ಟಾಚಾರದ ಕೊಚ್ಚೆಯಲ್ಲಿ ಬಿದ್ದಿರುವ ಇಡೀ ಆಡಳಿತ ಕನ್ನಡಿಗರ ರಕ್ತ ಹೀರುತ್ತಿದೆ. ಕಣ್ಣೀರಿನಲ್ಲಿ ಕೈತೊಳೆದುಕ್ಕೊಳ್ಳುವ ಸ್ಥಿತಿಗೆ ರಾಜ್ಯ ತಂದಿರುವ ನಿಮಗೆ 2023ರ ಚುನಾವಣೆಯಲ್ಲಿ ಕನ್ನಡಿಗರು ಕಪಾಳಮೋಕ್ಷ ಮಾಡಲಿದ್ದಾರೆ ಎಂದು ಹೇಳಿದೆ.
ಭ್ರಷ್ಟಾಚಾರದ ಕೊಚ್ಚೆಯಲ್ಲಿ ಬಿದ್ದಿರುವ ಇಡೀ ಆಡಳಿತ ಕನ್ನಡಿಗರ ರಕ್ತ ಹೀರುತ್ತಿದೆ. ಕಣ್ಣೀರಿನಲ್ಲಿ ಕೈತೊಳೆದುಕ್ಕೊಳ್ಳುವ ಸ್ಥಿತಿಗೆ ರಾಜ್ಯ ತಂದಿರುವ ನಿಮಗೆ 2023ರ ಚುನಾವಣೆಯಲ್ಲಿ ಕನ್ನಡಿಗರು ಕಪಾಳಮೋಕ್ಷ ಮಾಡಲಿದ್ದಾರೆ.
4/4— Janata Dal Secular (@JanataDal_S) January 6, 2023