ಬಾಗಲಕೋಟೆ: ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೈತಪ್ಪಲು ಸಚಿವ ಮುರುಗೇಶ್ ನಿರಾಣಿ ಕಾರಣ ಎಂಬ ಆರೋಪಗಳ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
BIGG NEWS: ಬಳ್ಳಾರಿಯಲ್ಲೂ ಕೊರೊನಾ ಹೆಚ್ಚಳ ಭೀತಿ; ಬೂಸ್ಟರ್ ಡೋಸ್ ಲಸಿಕೆ ಚುರುಕು
ಜವಾಬ್ದಾರಿ ಸ್ಥಾನದಲ್ಲಿರುವವರು ಯಾರದೋ ಮಾತು ಕೇಳಿ ಬಾಯಿ ಚಪಲಕ್ಕೆ ಮಾತನಾಡಬಾರದು. ಡಿ 29ಕ್ಕೆ ನಮ್ಮ ಸಮಾಜಕ್ಕೆ 2ಎ ಮೀಸಲಾತಿ ಸಿಕ್ಕರೆ ನಾವೇ ಸನ್ಮಾನ ಮಾಡುತ್ತೇವೆ’ ಎಂದು ಸಚಿವ ಮುರುಗೇಶ್ ನಿರಾಣಿ ಘೋಷಿಸಿದರು
ನಗರದಲ್ಲಿ ಮಾತನಾಡಿದ ಅವರು, ಜಿಲ್ಲೆಯ ನಮ್ಮ ಸಮಾಜದ ಒಬ್ಬ ಸಚಿವರಿಂದ ಪಂಚಮಸಾಲಿ 2ಎ ಮೀಸಲಾತಿ ಘೋಷಣೆ ತಪ್ಪಿತು’ ಎಂಬ ಹೇಳಿಕೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
BIGG NEWS: ಬಳ್ಳಾರಿಯಲ್ಲೂ ಕೊರೊನಾ ಹೆಚ್ಚಳ ಭೀತಿ; ಬೂಸ್ಟರ್ ಡೋಸ್ ಲಸಿಕೆ ಚುರುಕು
ನಾನು ಪಂಚಮಸಾಲಿ ಮೀಸಲಾತಿ ತಪ್ಪಿಸಿದ್ದೇನೆ. ಮೀಸಲಾತಿ ತಪ್ಪಿಸಲೆಂದು ಇಂಥವರ ಜೊತೆಗೆ ಮಾತನಾಡಿದ್ದೇನೆ. ಇಂಥ ಜಾಗದಲ್ಲಿ ಭಾಷಣ ಮಾಡಿದದ್ದೇನೆ ಎಂದು ಸ್ವಾಮೀಜಿ ಸಾಬೀತು ಮಾಡಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಒಂದು ವೇಳೆ ಸಾಕ್ಷಿ ನೀಡಲು, ಸಾಬೀತುಪಡಿಸಲು ಅವರು ವಿಫಲರಾದರೆ ಸನ್ಯಾಸತ್ವ ತ್ಯಜಿಸಿ ರಾಜಕೀಯಕ್ಕೆ ಬರಬೇಕು’ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿಗೆ ಸವಾಲು ಹಾಕಿದರು.