ಶಿವಮೊಗ್ಗ: ಸಿಗಂದೂರು ಹೊಸ ಕೇಬಲ್ ಬ್ರಿಡ್ಜ್ ನಿರ್ಮಾಣದ ನಂತ್ರ, ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಅದರ ಜೊತೆ ಜೊತೆಗೆ ಹುಚ್ಚಾಚವು ಜೋರಾಗಿದೆ. ಅದರಲ್ಲೂ ಪ್ರವಾಸಿಗರು ವಾಹನಗಳನ್ನು ಮನಬಂದಂತೆ ಚಲಾಯಿಸೋದು, ಬೈಕ್ ವೀಲ್ಹಿಂಗ್ ಮಾಡೋದು ನಡೆಯುತ್ತಿದೆ. ಒಂದು ವೇಳೆ ನೀವು ಈ ಎಲ್ಲಾ ಹುಚ್ಚಾಟ ಮೆರೆಯೋಕೆ ಸಿಗಂದೂರು ಸೇತುವೆಗೆ ಹೋಗ್ತೀರಿ ಅಂದ್ರೆ ಎಚ್ಚರ.! ಪೊಲೀಸರಿಂದ ದಂಡ ಫಿಕ್ಸ್.
ದಿನಾಂಕ 15-08-2025ರಂದು ಸಿಗಂದೂರು ಸೇತುವೆ ನೋಡೋದಕ್ಕೆ ತೆರಳಿದ್ದಂತ ಜಿಎ8, ಎಎನ್73 ಬೈಕ್ ಸವಾರನೊಬ್ಬ ಸೇತುವೆಯನ್ನು ನೋಡಿಕೊಂಡು ವಾಪಾಸ್ಸಾಗುವ ಬದಲು ವೀಲ್ಹಿಂಗ್ ಮಾಡಿದ್ದಾನೆ. ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ತನಿಖೆ ನಡೆಸಿದಂತ ಸಾಗರ ಗ್ರಾಮಾಂತರ ಠಾಣೆಯ ಪೊಲೀಸರು ಬೈಕ್ ಸೀಜ್ ಮಾಡಿ, ಬರೋಬ್ಬರಿ 5,000 ದಂಡವನ್ನು ವಿಧಿಸಿದ್ದಾರೆ.
ಬೈಕ್ ಸವಾರ ಹೇಳೋದೇನು?
ಈ ಬಗ್ಗೆ ಬೈಕ್ ಸವಾರ ಮಾತನಾಡಿ, ಸಿಗಂದೂರು ಸೇತುವೆ ನೋಡಲು ತೆರಳುವಂತ ಯಾವುದೇ ವಾಹನ ಸವಾರರು ನಾನು ಮಾಡಿದಂತ ತಪ್ಪು ಯಾರು ಮಾಡಬೇಡಿ. ಬೈಕ್ ಚಲಾಯಿಸುವಂತ ಸಂದರ್ಭದಲ್ಲಿ ಹೆಲ್ಮೆಟ್ ಧರಿಸಿ. ನಿಮ್ಮ ಅಜಾಗರೂಕ ಚಾಲನೆಯಿಂದ ಅಪಘಾತವಾದಂತ ಸಂದರ್ಭದಲ್ಲಿ ನಿಮ್ಮ ಕುಟುಂಬಸ್ಥರು ಕಣ್ಣೀರಿಡುವಂತೆ ಮಾಡಬೇಡಿ ಎಂಬುದಾಗಿ ಮನವಿ ಮಾಡಿದ್ದಾರೆ.
ಸಾರ್ವಜನಿಕರಿಗೆ ಸಾಗರ ಗ್ರಾಮಾಂತರ ಠಾಣೆ ಪಿಐ ಮಹಾಬಲೇಶ್ವರ ಈ ಎಚ್ಚರಿಕೆ, ಮನವಿ
ಸಾಗರ ಗ್ರಾಮಾಂತರ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಮಹಾಬಲೇಶ್ವರ್ ಮಾತನಾಡಿ ಪೋಷಕರೇ ನಿಮ್ಮ ಮಕ್ಕಳಿಗೆ ಬೈಕ್ ಗಳನ್ನು 21 ವರ್ಷದೊಳಗಿದ್ದರೇ ಕೊಡಬೇಡಿ. ಡಿಎಲ್, ವಾಹನದ ಆರ್ ಸಿ, ವಿಮೆ ತಪ್ಪದೇ ಇರುವಂತೆ ನೋಡಿಕೊಳ್ಳಿ. ಐಎಸ್ಐ ಮಾರ್ಕ್ ಇರುವಂತ ಹೆಲ್ಮೆಟ್ ಗಳನ್ನು ಬೈಕ್ ಸವಾರರು ಧರಿಸಿ ವಾಹನ ಚಲಾಯಿಸಿ. ನಿಮ್ಮ ಮಕ್ಕಳಿಗೆ ಹೆಲ್ಮೆಟ್ ಇಲ್ಲದೇ ಬೈಕ್ ಚಲಾಯಿಸದಂತೆ ನೋಡಿಕೊಳ್ಳಿ, ಜೊತೆಗೆ ಬುದ್ಧಿ ಹೇಳಿ ಎಂದು ತಿಳಿಸಿದರು.
ಮೊದಲು 5,000 ಆಮೇಲೆ 25,000 ಜೊತೆಗೆ ವಾಹನ ಮುಟ್ಟುಗೋಲು ಎಚ್ಚರ
ವಾಹನ ಚಲಾಯಿಸುವ ಸಂದರ್ಭದಲ್ಲಿ ಮೊಬೈಲ್ ಬಳಕೆ ಮಾಡಬೇಡಿ. ರಸ್ತೆ ಫ್ರೀ ಇದೆ ಎಂದು ವೀಲ್ಹಿಂಗ್ ಮಾಡುವುದು ತಪ್ಪು. ಇದೊಂದು ದೊಡ್ಡ ಅಪರಾಧವಾಗಿದೆ. ಒಂದನೇ ಬಾರಿ ತಪ್ಪು ಮಾಡಿ ಸಿಕ್ಕಿ ಬಿದ್ದಾಗ 5,000 ದಂಡವಿದೆ. ಎರಡನೇ ಬಾರಿ ವೀಲ್ಹಿಂಗ್ ಮಾಡುವಾಗ ಸಿಕ್ಕಿ ಬಿದ್ದರೇ 25,000 ದಂಡ ಜೊತೆಗೆ ಸರ್ಕಾರ ಬೈಕ್ ಮುಟ್ಟುಗೋಲು ಹಾಕಿಕೊಳ್ಳಲಿದೆ ಎಂಬುದಾಗಿ ಎಚ್ಚರಿಕೆ ನೀಡಿದರು.
ಪೋಷಕರು ನಿಮ್ಮ ಮಕ್ಕಳಿಗೆ ತಿಳಿ ಹೇಳಿ. ಸಂಚಾರ ನಿಯಮಗಳನ್ನು ಪಾಲಿಸುವಂತೆ ಎಚ್ಚರಿಕೆ ವಹಿಸಿ. ಮಕ್ಕಳಿಗೆ ಬೈಕ್ ನೀಡುವಾಗ ವೀಲ್ಹಿಂಗ್ ಮಾಡುವುದಿರಬಹುದು. ತ್ರಿಬಲ್ ರೈಡಿಂಗ್ ಇರಬಹುದು ಮಾಡುವುದು ತಪ್ಪು. ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸಬೇಡಿ. ಚಲಾಯಿಸುವವರು ಅಲ್ಲದೇ, ರಸ್ತೆಯಲ್ಲಿ ಸಾಗುವವರು ಸುರಕ್ಷಿತರಾಗಿ ಸಾಗಲು ಪಣ ತೊಡೋಣ. ನೀವು ಸುರಕ್ಷಿತರಾಗಿರಿ. ನಿಮ್ಮ ಪರಿವಾರವನ್ನು ಸುರಕ್ಷಿತವಾಗಿ ಇರಿಸಿ. ಅಪರಾಧ ಮುಕ್ತ ಸಮಾಜವನ್ನು ನಿಮ್ಮಿಸಲು ನೀವು, ನಾವೆಲ್ಲರೂ ಕೈಜೋಡಿಸುವಂತೆ ಮನವಿ ಮಾಡಿದರು.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
ರಾಜ್ಯ ಸರ್ಕಾರದಿಂದ ‘ಟ್ರಾಫಿಕ್ ದಂಡ ಬಾಕಿ’ ಉಳಿಸಿಕೊಂಡಿರೋ ‘ವಾಹನ ಸವಾರ’ರಿಗೆ ಗುಡ್ ನ್ಯೂಸ್