ಬೆಂಗಳೂರು : ಹೋಳಿ ಹುಣ್ಣಿಮೆಯ ಗ್ರಹಣಕ್ಕೂ ಯುದ್ಧಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಗವಿ ಗಂಗಾಧರೇಶ್ವರ ಪ್ರಧಾನ ಅರ್ಚಕ ಸೋಮಸುಂದರ್ ದೀಕ್ಷಿತ್ ಹೇಳಿಕೆ ನೀಡಿದರು.
ಈ ಗ್ರಹಣ ಇರಾನ್ ಇಸ್ರೇಲ್ ಯುದ್ಧಕ್ಕೆ ಪ್ರಭಾವವಾಗಿಲ್ಲ. ಆದರೆ ಇದು ಭಾರತಕ್ಕೆ ಬರಬಾರದು ಎಂದು ಶಾಂತಿ ಹೋಮ ಮಾಡಲಾಗುತ್ತಿದೆ. ಗವಿ ಗಂಗಾಧರೇಶ್ವರ ದೇಗುಲದಲ್ಲಿ ಶಾಂತಿ ಹೋಮ ಮಾಡಲಾಗುತ್ತೆ. ಈ ವರ್ಷ ಜಲಕಂಟಕ ಮತ್ತು ಅಗ್ನಿ ಅವಘಡ ಆಗಲಿದೆ ಉತ್ತರ ಭಾರತದಲ್ಲಿಯೇ ಹೆಚ್ಚು ಸಮಸ್ಯೆ ಆಗಲಿದೆ ಎಂದು ಬೆಂಗಳೂರಿನ ಗವಿಪುರಂ ಗುಟ್ಟಹಳ್ಳಿಯಲ್ಲಿರುವ ಗವಿ ಗಂಗಾಧರೇಶ್ವರ ದೇಗುಲದ ಅರ್ಚಕ ಸೋಮ ಸುಂದರ್ ದೀಕ್ಷಿತ್ ಹೇಳಿಕೆ ನೀಡಿದರು.








