ಬೆಂಗಳೂರು: ಏಪ್ರಿಲ್-2026ರ ತಿಂಗಳ ವೇತನವನ್ನು ಏಪ್ರಿಲ್.30ರಂದು ಪಾವತಿ ಮಾಡುವುದಾಗಿ ಕೆ ಎಸ್ ಆರ್ ಟಿ ಸಿ ಮಾಹಿತಿ ನೀಡಿದೆ. ಆ ಮೂಲಕ ಸಾರಿಗೆ ನೌಕರರಿಗೆ ಗುಡ್ ನ್ಯೂಸ್ ಅನ್ನು ನೀಡಲಾಗಿದೆ.
ಈ ಕುರಿತಂತೆ ಕೆ ಎಸ್ ಆರ್ ಟಿ ಸಿಯ ವ್ಯವಸ್ಥಾಪಕ ನಿರ್ದೇಶಕರು ಆದೇಶ ಹೊರಡಿಸಿದ್ದು, ಸಂಸ್ಥೆಯ ಎಲ್ಲಾ ಅಧಿಕಾರಿ/ನೌಕರರ ವೇತನವನ್ನು ಪ್ರತಿ ತಿಂಗಳು ದಿನಾಂಕ 01 ರಂದು ಪಾವತಿಸಲು ಮೇಲಿನ ಉಲ್ಲೇಖದನ್ವಯ ಕ್ರಮಕೈಗೊಳ್ಳಲಾಗುತ್ತಿದೆ. ಆದರೆ ದಿನಾಂಕ 01.05.2026 ರಂದು ಬ್ಯಾಂಕ್ ರಜೆಯಿದ್ದು ಹಾಗೂ ಕಾರ್ಮಿಕ ದಿನಾಚರಣೆ ಪ್ರಯುಕ್ತ ನಿಗಮದ ಎಲ್ಲಾ ಅಧಿಕಾರಿ/ಸಿಬ್ಬಂದಿಗಳಿಗೆ ಏಪ್ರಿಲ್-2026 ರ ಮಾಹೆಯ ವೇತನವನ್ನು ದಿನಾಂಕ 30.04.2026 ರಂದು ಪಾವತಿಸಲು ನಿರ್ಧರಿಸಲಾಗಿದೆ ಎಂದಿದ್ದಾರೆ.
ಸದರಿ ದಿನದಂದು ನೌಕರರ ಬ್ಯಾಂಕ್ ಖಾತೆಗೆ ಜಮೆಗೊಳಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಸೂಚಿಸಿದ್ದಾರೆ. ಆ ಮೂಲಕ ಏಪ್ರಿಲ್.30ರಂದು ಕೆ ಎಸ್ ಆರ್ ಟಿ ಸಿ ನೌಕರರಿಗೆ ವೇತನ ಪಾವತಿಯಾಗಲಿದೆ.

ಬೆಂಗಳೂರಲ್ಲಿ ಜನಗಣತಿಗೆ ಗೈರಾದವರಿಗೆ ಜಿಬಿಎ ಶಾಕ್: ಎಫ್ಐಆರ್ ದಾಖಲಿಸಿ, ಕಾನೂನು ಕ್ರಮದ ಎಚ್ಚರಿಕೆ








