ವಿಜಯಪುರ: ಜನಪ್ರತಿನಿಧಿ ಅಂದ್ರೆ ತಮ್ಮನ್ನು ಅರಸಿ ಬರುವಂತ ಜನರ ಕಷ್ಟವನ್ನು ಕೇಳಿ, ಅದಕ್ಕೆ ಸೂಕ್ತ ರೀತಿಯಲ್ಲಿ ಪ್ರತಿಸ್ಪಂದಿಸೋದು. ಹೀಗೆ ಪ್ರತಿಸ್ಪಂದಿಸಿದಾಗಲೇ ಜನಪ್ರತಿನಿಧಿ ಅಂದ್ರೆ ಹೀಗೆ ಇರಬೇಕು ಎಂಬುದಾಗೇ ಅನೇಕರು ಹೇಳುತ್ತಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ ಸಚಿವ ಎಂ.ಬಿ ಪಾಟೀಲ್ 6 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಎಂಬಿಬಿಎಸ್ ಶಿಕ್ಷಣ ನೆರವೇರಿಸಲು ಲಕ್ಷ ಲಕ್ಷ ಆರ್ಥಿಕ ನೆರವಿನ ಸಹಾಯ ಹಸ್ತ ಚಾಚಿದ್ದಾರೆ.
ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿರುವಂತ ಅವರು, ವಿಜಯಪುರ ಜಿಲ್ಲೆಯ 6 ಪ್ರತಿಭಾವಂತ ವಿದ್ಯಾರ್ಥಿಗಳಿಗೆ MBBS ಶಿಕ್ಷಣಕ್ಕೆ ನೆರವಾಗಿದ್ದೇನೆ. ನೀಟ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಸರ್ಕಾರಿ ಕೋಟಾದಡಿ MBBS ಸೀಟು ಪಡೆದರೂ, ಆರ್ಥಿಕ ಅಡಚಣೆಯಿಂದಾಗಿ ತಮ್ಮ ಕನಸಿನ ಶಿಕ್ಷಣವನ್ನು ಮುಂದುವರಿಸಲಾಗದೆ ಕಷ್ಟಪಡುತ್ತಿದ್ದ 6 ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವು ನೀಡಿದ ಸಂತಸ ನನ್ನದು ಎಂದಿದ್ದಾರೆ.
ಈ ಕೆಳಕಂಡ ವಿದ್ಯಾರ್ಥಿಗಳು ಎಂಬಿಬಿಎಸ್ ವ್ಯಾಸಂಗ ಮುಗಿಸಲು ಸಚಿವ ಎಂ.ಬಿ ಪಾಟೀಲ್ ಆರ್ಥಿಕ ನೆರವು
- ಬಾಬಾನಗರದ ಕೃಷಿ ಕಾರ್ಮಿಕ ಗಣಪತಿ ಶಿಂಧೆ ಅವರ ಪುತ್ರಿ ಪ್ರತೀಕ್ಷಾ ಗಣಪತಿ ಶಿಂಧೆ, ಮಂಗಳೂರಿನ ಎ.ಜೆ. ಮೆಡಿಕಲ್ ಕಾಲೇಜಿನಲ್ಲಿ ದಾಖಲಾಗಲು ₹2,51,571
- ಗೈನಕಾಲಜಿಸ್ಟ್ ಆಗುವ ಕನಸು ಹೊತ್ತಿರುವ ನಾಗಠಾಣದ ಕು. ಭವಾನಿ ಮಲ್ಲಿಕಾರ್ಜುನ ಬಗಲಿ, ಆದಿಚುಂಚನಗಿರಿ ಮೆಡಿಕಲ್ ಕಾಲೇಜಿನಲ್ಲಿ ವ್ಯಾಸಂಗಕ್ಕೆ ₹1,00,000.
- ಬಾಬಾನಗರದ ಕೃಷಿಕ ಭೀಮಣ್ಣ ಮಾಲಿ ಅವರ ಪುತ್ರ ಸಚಿನ್ ಭೀಮಣ್ಣ ಮಾಲಿ, ನಿಜಲಿಂಗಪ್ಪ ಮೆಡಿಕಲ್ ಕಾಲೇಜಿನಲ್ಲಿ ವ್ಯಾಸಂಗಕ್ಕೆ ₹1,56,621.
- ನಂದ್ಯಾಳ ಗ್ರಾಮದ ಕೃಷಿಕ ಕುಟುಂಬದ ಸಂದೇಶ್ ಶಿವಾಜಿ ಅವರಿಗೆ ₹1,48,400
- ಹಂಚಿನಾಳ ಗ್ರಾಮದಲ್ಲಿ ಟೀ ಅಂಗಡಿ ನಡೆಸುವ ಸುನೀತಾ ರಾಥೋಡ್ ಅವರ ಪುತ್ರ ರೋಹಿತ್ ರಾಥೋಡ್, ಮಂಗಳೂರಿನ KMC ಮೆಡಿಕಲ್ ಕಾಲೇಜಿನಲ್ಲಿ ದಾಖಲಾಗಲು ₹2,10,638
- ಸ್ವರ್ಣ ಬಸವರಾಜ್ ಬಾವಲತ್ತಿ ಅವರ ಪುತ್ರ ಸುದೀಪ್ ಬಸವರಾಜ್ ಬಾವಲತ್ತಿ ಅವರಿಗೆ ₹1,54,150
- ಒಟ್ಟು ₹10,21,380 ಮೌಲ್ಯದ ಚೆಕ್ಕುಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿದ್ದಾರೆ.
ಎಂ.ಬಿ.ಬಿ.ಎಸ್. ಕೋರ್ಸಿನ ಮೊದಲ ವರ್ಷದ ಬೋಧನಾ ಶುಲ್ಕ, ಹಾಸ್ಟೆಲ್ ಶುಲ್ಕ ಹಾಗೂ ಊಟದ ವೆಚ್ಚಕ್ಕೆ ಅಗತ್ಯವಾಗಿರುವ ಈ ನೆರವು ವಿದ್ಯಾರ್ಥಿಗಳ ಕನಸಿಗೆ ನಿಜವಾದ ರೆಕ್ಕೆ ನೀಡುತ್ತದೆ. ಅವರು ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿ ಆದರ್ಶ ವೈದ್ಯರಾಗಿ ಸಮಾಜಕ್ಕೆ ಸೇವೆ ಸಲ್ಲಿಸಬೇಕು ಎಂದು ಹಾರೈಸಿದ್ದಾರೆ.
ಈ ಸಂದರ್ಭದಲ್ಲಿ BLDE ಸಂಸ್ಥೆಯ ಮುಖ್ಯ ಸಲಹೆಗಾರ ಹಾಗೂ ಡೀಮ್ಡ್ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ. ಆರ್.ವಿ. ಕುಲಕರ್ಣಿ ಹಾಗೂ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳ ಕನಸಿಗೆ ರೆಕ್ಕೆ
ವಿಜಯಪುರ ಜಿಲ್ಲೆಯ 6 ಪ್ರತಿಭಾವಂತ ವಿದ್ಯಾರ್ಥಿಗಳಿಗೆ MBBS ಶಿಕ್ಷಣಕ್ಕೆ ನೆರವುನೀಟ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಸರ್ಕಾರಿ ಕೋಟಾದಡಿ #MBBS ಸೀಟು ಪಡೆದರೂ, ಆರ್ಥಿಕ ಅಡಚಣೆಯಿಂದಾಗಿ ತಮ್ಮ ಕನಸಿನ ಶಿಕ್ಷಣವನ್ನು ಮುಂದುವರಿಸಲಾಗದೆ ಕಷ್ಟಪಡುತ್ತಿದ್ದ 6 ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವು ನೀಡಿದ… pic.twitter.com/2I0Casq8KC
— M B Patil (@MBPatil) November 2, 2025
2028ರ ತನಕ ಸಿದ್ದರಾಮಯ್ಯ, ಆ ಬಳಿಕ ಡಿಕೆ ಶಿವಕುಮಾರ್ ಮುಖ್ಯಮಂತ್ರಿ: ಸಚಿವ ಜಮೀರ್ ಅಹ್ಮದ್
ರಾಜ್ಯದ ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್ : ನ.19 ರಂದು `ಅಕ್ಕ ಪಡೆ’ಗೆ ಚಾಲನೆ.!








