ಅಂಗೈಯಲ್ಲಿ ಪರ್ವತವನ್ನು ಹಿಡಿದಿರುವ ಹನುಮಂತನ ಚಿತ್ರ ಅಥವಾ ರೂಪವು ಹಿಂದೂ ಧರ್ಮದಲ್ಲಿ ಅತ್ಯಂತ ಶಕ್ತಿಶಾಲಿ ಮತ್ತು ಸ್ಪೂರ್ತಿದಾಯಕ ಸಂಕೇತವಾಗಿದೆ. ಇದು ರಾಮಾಯಣದ ‘ಲಂಕಾ ದಹನ’ ಮತ್ತು ಯುದ್ಧದ ಸಂದರ್ಭದಲ್ಲಿ ಬರುವ ದ್ರೋಣಗಿರಿ ಪರ್ವತವನ್ನು ಹೊತ್ತು ತಂದ ಪ್ರಸಂಗವನ್ನು ನೆನಪಿಸುತ್ತದೆ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ಇದರ ಪ್ರಮುಖ ಮಹತ್ವಗಳು ಇಲ್ಲಿವೆ:
1. ಅಸಾಧ್ಯವಾದುದನ್ನು ಸಾಧಿಸುವ ಶಕ್ತಿ
ಲಕ್ಷ್ಮಣನು ಯುದ್ಧದಲ್ಲಿ ಮೂರ್ಛೆ ಹೋದಾಗ, ಆತನನ್ನು ಬದುಕಿಸಲು ಸಂಜೀವಿನಿ ಎಂಬ ಮೂಲಿಕೆಯ ಅಗತ್ಯವಿರುತ್ತದೆ. ಹನುಮಂತನಿಗೆ ಆ ಮೂಲಿಕೆಯನ್ನು ಗುರುತಿಸಲು ಸಾಧ್ಯವಾಗದಿದ್ದಾಗ, ಸಮಯ ವ್ಯರ್ಥ ಮಾಡದೆ ಇಡೀ ಪರ್ವತವನ್ನೇ ಕಿತ್ತುಕೊಂಡು ಬರುತ್ತಾನೆ. ಇದು ಸಮಸ್ಯೆಗೆ ಪರಿಹಾರ ಸಿಗದಿದ್ದಾಗ ಮಾರ್ಗವನ್ನು ಹುಡುಕುವ ದೃಢತೆಯನ್ನು ಪ್ರತಿನಿಧಿಸುತ್ತದೆ.
2. ಅಚಲವಾದ ಭಕ್ತಿ ಮತ್ತು ಸೇವೆ
ಹನುಮಂತನು ಈ ಸಾಹಸವನ್ನು ಮಾಡಿದ್ದು ತನ್ನ ಪ್ರಭು ಶ್ರೀರಾಮನ ಮೇಲಿನ ಭಕ್ತಿಯಿಂದ. ಇದು ಒಬ್ಬ ವ್ಯಕ್ತಿ ತನ್ನ ಗುರಿ ಅಥವಾ ದೈವದ ಮೇಲೆ ಇಟ್ಟಿರುವ ನಿಷ್ಠೆಯು ಎಂತಹ ಕಠಿಣ ಕೆಲಸವನ್ನೂ ಸುಲಭವಾಗಿಸುತ್ತದೆ ಎಂಬುದನ್ನು ತೋರಿಸುತ್ತದೆ.
ರಾಮ-ರಾವಣರ ಯುದ್ಧವಾಗುತ್ತಿತ್ತು. ರಾಮನು ರಾವಣನ ಸೇನೆಯಲ್ಲಿದ್ದ ಅಹಿ -ಮಹಿ ರಾಕ್ಷಸರನ್ನು ಸಂಹರಿಸಿದ. ರಾಮನ ಸೇನೆಯಲ್ಲಿದ್ದವರೆಲ್ಲ ಜೈ ಜೈಕಾರ ಮಾಡಿದರು. ಹನುಮ ಸೇರಿದಂತೆ ಎಲ್ಲರೂ ಸಂತೋಷದಿ ಕುಣಿದರು.ಇದರಿಂದ ರಾವಣನಿಗೆ ಕೋಪ ಬಂದು ತನ್ನ ಎಲ್ಲಾ ರಾಕ್ಷಸ ಬಳಗವನ್ನು ಒಂದೆಡೆ ಸೇರಿಸಿದ. ಘೋರ ಕದನ ನಡೆಯುತ್ತಿದೆ. ವೀರಾವೇಶ ದಿಂದ ರಾಮ ಆ ರಾಕ್ಷಸರ ಮೇಲೆ ಬಾಣ ಗಳನ್ನು ಬಿಟ್ಟು ಅವರನ್ನು ಹಿಮ್ಮೆಟ್ಟಿಸಿದನು. ರಾಮನ ಬಾಣಗಳನ್ನು ರಾಕ್ಷಸರು ಎದುರಿಸಲಾರದೆ ಹತರಾದರು. ಇದನ್ನು ನೋಡಿ, ಪರಾಕ್ರಮಿ, ಯುದ್ಧ ನಿಪುಣ ನಾದ, ಸ್ವತಃ ರಾವಣ ರಥವೇರಿ ಯುದ್ಧಕ್ಕೆ ಬಂದನು. ರಾವಣ ಬಿಡುವ ಬಾಣಕ್ಕೆ ಭೂಮ್ಯಾಕಾಶಗಳೇ ಕಂಪಿಸಿದವು. ರಾಮ ನ ಸೈನ್ಯದಲ್ಲಿ ವಾನರರು ಯಾರಿಗೂ ಕಡಿಮೆಯಿಲ್ಲದಂತೆ ಯುದ್ಧ ಮಾಡುತ್ತಿದ್ದ ರು. ಲಕ್ಷ್ಮಣನಂತು ರಾವಣನ ಮುಂದೆ ನಿಂತು ಕೋಪದಿಂದ ಘರ್ಜಿಸುತ್ತಾ ಯುದ್ಧ ಮಾಡಿ, ರಾವಣನನ್ನು ಪ್ರತಿ ಸಲವೂ ಅವಮಾನಿಸಿದ.
ಲಕ್ಷ್ಮಣನ ಆರ್ಭಟ ಕಂಡು, ರಾವಣಗೆ ವಿಪರೀತ ಕೋಪ ಬಂದಿತು. ಸಿಟ್ಟಿನಿಂದ ಏ ಲಕ್ಷ್ಮಣ,ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ನನ್ನನ್ನೇ ಅವಮಾನಿಸುತ್ತೀಯಾ? ಈಗ ನೋಡು, ಎಂದು ಪರಮೇಶ್ವರನನ್ನು ಪ್ರಾರ್ಥಿಸಿ, ಶಿವನಾಮ ಜಪಿಸುತ್ತಾ ಮಹಾ ಶಕ್ತಿಶಾಲಿಯಾದ ಅಸ್ತ್ರವನ್ನು ಲಕ್ಷ್ಮಣನ ಮೇಲೆ ಪ್ರಯೋಗ ಮಾಡಿದ. ಇದರಿಂದ ತತ್ತರಿಸಿದ ಲಕ್ಷ್ಮಣ ಭೂಮಿ ಮೇಲೆ ಉರುಳಿ ಬಿದ್ದು ಪ್ರಜ್ಞೆ ತಪ್ಪಿತು.
ಇತ್ತು ರಾವಣನ ಕಡೆ ಸೇನೆಯವರು ರಾವಣಗೆ ಜಯ ಜಯಕಾರ ಕೂಗಿದರು. ಅಲ್ಲಿಗೆ ಅಂದಿನ ಯುದ್ಧ ಮುಗಿಯಿತು. ಲಕ್ಷ್ಮಣ ಎಚ್ಚರ ತಪ್ಪಿ ಬಿದ್ದ ಸುದ್ದಿ ವಾನರ ಸೇನೆಯಲ್ಲಿ ಹರಡಿ ಗುಲ್ಲೆದ್ದಿತು. ಹನು ಮಂತ ಲಕ್ಷ್ಮಣನನ್ನು ಎತ್ತಿಕೊಂಡು ಪರ್ಣಕುಟೀರಕ್ಕೆ ಬಂದು ಮಲಗಿಸಿದನು.
ತನ್ನ ಪ್ರೀತಿಯ ಸಹೋದರನ ಇಂಥ ಅವಸ್ಥೆಯನ್ನು ಕಂಡು ರಾಮ ಮಮ್ಮುಲ ಮರುಗಿದನು. ಲಕ್ಷ್ಮಣ ಎಚ್ಚರ ತಪ್ಪಿ ಮಲಗಿದ್ದ ಅವನ ದೇಹದಿಂದ ರಕ್ತ ಹೋಗುತ್ತಿ ತ್ತು. ಇದನ್ನು ಕಂಡ ರಾಮ ನೋವಿನಿಂದ ಲಕ್ಷ್ಮಣಾ, ಲಕ್ಷ್ಮಣಾ ನನ್ನ ಪ್ರೀತಿಯ ಸಹೋದರ ಎದ್ದೇಳು ಏಳು ಎಂದು ದುಃಖದಿಂದ ಕೂಗಿದ.
ಆದರೆ ಲಕ್ಷ್ಮಣ ಏಳಲಿಲ್ಲ. ರಾಮ ಜೋರಾಗಿ ಅಳತೊಡಗಿದ. ಇದನ್ನು ಕಂಡು ವಾನರ ಸೇನೆ ದುಃಖದಲ್ಲಿ ಮುಳುಗಿತು. ಎಲ್ಲಾ ಕಡೆ ಸ್ಮಶಾನ ಮೌನ ಆವರಿಸಿತು. ಅದಾಗಲೆ ಹನುಮಂತನು ಒಳ್ಳೆಯ ವೈದ್ಯರು ಯಾರಿದ್ದಾರೆ ಎಂದು ವಿಭೀಷಣನನ್ನು ವಿಚಾರಿಸಿ ದಾಗ ಲಂಕಾ ಪಟ್ಟಣದಲ್ಲಿ “ಸುಷೇಣ” ನೆಂಬ ಅಪ್ರತಿಮ ವೈದ್ಯನಿದ್ದಾನೆ ಅವನನ್ನು ಹೇಗಾದರೂ ಮಾಡಿ ಕೂಡಲೇ ಕರೆದು ಕೊಂಡು ಬಾ ಎಂದನು. ಹನುಮಂತ ನೇರವಾಗಿ ಲಂಕಾ ನಗರಕ್ಕೆ ಬಂದು, ಸುಷೇಣನ ಮನೆಯನ್ನು ಹುಡುಕಿ, ಕರೆದರೆ, ನಾನು ಶತ್ರು ಪಕ್ಷದವರ ಉಪಚಾರ ಮಾಡುವುದಿಲ್ಲ ಎಂದಾಗ ಸುಷೇಣನ ಮನೆಯಲ್ಲಿರುವ ಅಗತ್ಯ ಔಷಧಿ ವಸ್ತು ಗಳು ತುಂಬಿದ ಪೆಟ್ಟಿಗೆ ಸಮೇತ ಸುಷೇಣ ನನ್ನು ಹೊತ್ತುಕೊಂಡು ಲಕ್ಷ್ಮಣನಿದ್ದಲ್ಲಿಗೆ ಬಂದನು. ಸುಷೇಣ ಬಂದವನೇ, ರಾಮನ ನ್ನು, ವಿಭೀಷಣನನ್ನು ನೋಡಿ ಭಕ್ತಿಯಿಂದ ಕೈ ಮುಗಿದು ಎಲ್ಲರಿಗೂ ಧೈರ್ಯವನ್ನು ಹೇಳಿದನು. ನಂತರ ಲಕ್ಷ್ಮಣನನ್ನು ಪರೀಕ್ಷಿ ಸಿದಾಗ ವೈದ್ಯರ ಮುಖದಲ್ಲಿ ಗೆಲುವಿನ ಗೆರೆ ಮೂಡಿದವು. ರಾಮನ ಕಡೆ ತಿರುಗಿ ಲಕ್ಷ್ಮಣ ಜೀವಂತವಾಗಿದ್ದಾನೆ. ಆದ ಗಾಯಗಳಿಂದ ಎಚ್ಚರ ತಪ್ಪಿದ್ದಾನೆ ಅಷ್ಟೇ ಎಂದಾ ಗ ರಾಮನ ಆತಂಕ ದೂರವಾಗಿ ಪ್ರಸನ್ನ ಗೊಂಡನು. ಖಂಡಿತವಾಗಿಯೂ ನನ್ನ ತಮ್ಮ ಜೀವಂತವಾಗಿದ್ದಾನೆಯೇ, ಹಾಗಾದರೆ ಗುಣವಾಗುತ್ತಾನೆಯೇ ಎಂದು ಕೇಳಿದ. ವೈದ್ಯರು, ಹೌದು ಚೇತರಿಸಿ ಕೊಳ್ಳಬೇಕಾದರೆ ನಾನೊಂದು ಔಷಧಿಯನ್ನು ಹೇಳುತ್ತೇನೆ ಅದನ್ನು ತರಬೇಕು ಎಂದನು.
ಅಲ್ಲೇ ಇದ್ದ ಹನುಮಂತ ನೀವು ಯಾವು ದೇ ಔಷಧಿ ಹೇಳಿದರೂ ನಾನು ತರುತ್ತೇನೆ ಎಂದನು. ಲಕ್ಷ್ಮಣ ಬೇಗನೆ ಪ್ರಜ್ಞೆ ಬರಲು ಸಂಜೀವಿನಿ ಎಂಬ ಹೆಸರಿನ ವನಸ್ಪತಿ ಔಷಧಿ ಬೇಕು. ಅದು ಇರುವುದು ಉತ್ತರ ದ ದ್ರೋಣಗಿರಿ ಪರ್ವತದಲ್ಲಿ. ಈಗ ಕತ್ತ ಲಾಗಿದೆ ನಾಳೆ ಬೆಳಿಗ್ಗೆ ಸೂರ್ಯೋದಯ ವಾಗುವುದರೊಳಗೆ ಆ ಸಸ್ಯ ಬೇಕು ಆದರೆ ಇದು ಬಹಳ ಕಷ್ಟಕರವಾದ ಕೆಲಸ ಯಾರು ಮಾಡುತ್ತೀರಿ ಎಂದು ಸುಷೇಣ ಕೇಳಿದಾಗ ಥಟ್ಟನೆ ಹನುಮಂತ ನಾನು ಮಾಡುತ್ತೇನೆ ಎಂದನು.
ಸುಷೇಣನಿಗೆ ಖುಷಿಯಾಯಿತು. ಆ ಪರ್ವತಕ್ಕೆ ಹೇಗೆ ಹೋಗಬೇಕು ಮತ್ತು ದಾರಿ ಎಲ್ಲಿದೆ ಎಂಬುದನ್ನು ತಿಳಿಸಿದರು. ಹನುಮನು ಬೀಸುವ ಗಾಳಿಯ ಕಡೆ ಕೈ ಎತ್ತಿ ಆಕಾಶಕ್ಕೆ ನೆಗೆದ. ವೈದ್ಯರು ಹೇಳಿದ ಔಷಧಿಯ ಹೆಸರನ್ನು ಮರೆಯಬಾರ ದೆಂದು ದಾರಿಯಲ್ಲಿ ಹೋಗುವಾಗ, ಸಂಜೀವಿನಿ, ವಿಶಲ್ಯಕರ್ಣ, ಸಾವಳ್ಯ ಕರ್ಣಿ, ದಿವ್ಯ ಔಷಧಿ, ಹೀಗೆ ಬಾಯಲ್ಲಿ ಹೇಳುತ್ತಾ ಆಕಾಶದಲ್ಲಿ ಹಾರುತ್ತಿದ್ದ.
ಬಹಳ ಬೇಗ ಹಿಮಾಲಯ ಪರ್ವತ ತಲುಪಿದ. ವೈದ್ಯರು ಹೇಳಿದ ದ್ರೋಣಗಿರಿ ಪರ್ವತ ಕಂಡಿತು ಅಲ್ಲಿ ಇಳಿದ. ವನಸ್ಪತಿ ಎಲ್ಲಿದೆ ಎಂದು ಹುಡುಕುವ ಭರಾಟೆಯಲ್ಲಿ ವನಸ್ಪತಿ ಹೆಸರುಗಳನ್ನೇ ಮರೆತನು. ಏನು ಮಾಡಿದರೂ, ಎಷ್ಟು ಯೋಚಿಸಿದರೂ ನೆನಪಾಗಲಿಲ್ಲ. ಸಮಯವಾಗುತ್ತಿದೆ ಕೊನೆಗೆ ತಡ ಮಾಡದೆ ದ್ರೋಣಗಿರಿ ಪರ್ವತವನ್ನೆ ಅಂಗೈಲಿ ಹಿಡಿದು ವೇಗವಾ ಗಿ ಹಾರುತ್ತಾ ಸೂರ್ಯೋದವಿರಲಿ, ಅರುಣೋದಯಕ್ಕೆ ಮುಂಚೆಯೇ ಬಂದನು. ಹನುಮಂತನಿಗಾಗಿ ದಾರಿ ಕಾಯುತ್ತಿದ್ದ ಎಲ್ಲರೂ, ಹನುಮಂತ ಹೊತ್ತು ತಂದ ಪರ್ವತವನ್ನು ನೋಡಿ ಆಶ್ಚರ್ಯ ಚಿಕಿತ ರಾದರು. ಅವನದು ಎಂತಹ ಶಕ್ತಿ ಎಂದುಕೊಂಡರು. ವೈದ್ಯರು,ಇದೇನು ಹನುಮಂತ ಔಷಧಿ ಸಸ್ಯ ತೆಗೆದು ಕೊಂಡು ಬಾ ಎಂದರೆ ಪರ್ವತವನ್ನೇ ತಂದಿದ್ದೆಯಲ್ಲ ಏಕೆ ಎಂದರು. ನನಗೆ ಔಷಧಿ ಸಸ್ಯದ ಹೆಸರು ಮರೆತು ಹೋಯಿತು ಅದಕ್ಕೆ ಪರ್ವತವನ್ನೆ ತಂದೇ
ಎಂದ. ತಕ್ಷಣ ವೈದ್ಯರು ಪರ್ವತವನ್ನು ಹತ್ತಿ ತಮಗೆ ಬೇಕಾದ ವನಸ್ಪತಿ ತೆಗೆದುಕೊಂಡು ಬಂದು ಲಕ್ಷ್ಮಣನಿಗೆ ಔಷಧಿ ಮಾಡಿದರು. ಗುಣಮುಖನಾದ ಲಕ್ಷ್ಮಣ ಸ್ವಲ್ಪ ಹೊತ್ತಿಗೆ ಕಣ್ಣು ತೆರೆದನು.
ರಾಮನು ಲಕ್ಷ್ಮಣನ ಹತ್ತಿರವೇ ಕುಳಿತಿದ್ದ. ಕಣ್ಣು ಬಿಟ್ಟ ಲಕ್ಷ್ಮಣ ಅಣ್ಣಾ ಎಂದು ಕರೆದಾಗ, ರಾಮನ ಆನಂದಕ್ಕೆ ಪಾರವೇ ಇರಲಿಲ್ಲ. ಸ್ವಲ್ಪ ಹೊತ್ತು ಲಕ್ಷ್ಮಣ ಮೇಲೆದ್ದು ಕೂತನು ರಾಮ ಲಕ್ಷ್ಮಣನನ್ನು ಬಿಗಿದಪ್ಪಿದ. ಇದನ್ನು ಕಂಡ ಹನುಮಂತನಿಗೆ ಆನಂದ ದಿಂದ ಕಣ್ಣಿನಲ್ಲಿ ನೀರು ಬಂದಿತು. ಎಲ್ಲರಿಗೂ ಹರ್ಷವಾಯಿತು. ರಾಮನ ಸೇನೆಗೆ ಬಂದಿದ್ದ ದೊಡ್ಡ ಕಂಠಕ ಕಳೆಯಿತು. ಎಲ್ಲರೂ ಊಟ ಮಾಡಿ ಮಲಗಿ ಮರು ದಿನದ ಯುದ್ಧಕ್ಕೆ ಹೊಸ ಉತ್ಸಾಹ, ಉಲ್ಲಾಸದಿಂದ ತಯಾರಿ ಮಾಡಿದರು.
ಮನೋಜವಂ ಮಾರುತತುಲ್ಯವೇಗಂ
ಜಿತೇಂದ್ರಿಯಂ ಬುದ್ಧಿ ಮತಾಂ ವರಿಷ್ಟಂ
ವಾತಾತ್ಮಜಂ. ವಾನರ ಯೂತ ಮುಖ್ಯಂ
ಶ್ರೀರಾಮ ದೂತಂ ಶರಣಂ ಪ್ರಪದ್ಯೇ !!
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ಖಂಡಿತ, ಹನುಮಂತನು ಪರ್ವತವನ್ನು ಹೊತ್ತು ತಂದ ಸಾಹಸ ಮತ್ತು ಆತನ ಶಕ್ತಿಯನ್ನು ವರ್ಣಿಸುವ ಅತ್ಯಂತ ಪ್ರಸಿದ್ಧವಾದ ಶ್ಲೋಕ ಮತ್ತು ಅದರ ಅರ್ಥ ಇಲ್ಲಿದೆ.
ಸಾಮಾನ್ಯವಾಗಿ ಹನುಮಂತನನ್ನು ಸ್ಮರಿಸುವಾಗ ಈ ಕೆಳಗಿನ ಶ್ಲೋಕವನ್ನು ಪಠಿಸಲಾಗುತ್ತದೆ:
ಹನುಮದ್ ಸ್ತೋತ್ರ
> ಮನೋಜವಂ ಮಾರುತತುಲ್ಯವೇಗಂ
> ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಮ್ |
> ವಾತಾತ್ಮಜಂ ವಾನರಯೂಥಮುಖ್ಯಂ
> ಶ್ರೀರಾಮದೂತಂ ಶರಣಂ ಪ್ರಪದ್ಯೇ ||
ಶ್ಲೋಕದ ಭಾವಾರ್ಥ:
* ಮನೋಜವಂ: ಮನಸ್ಸಿನಷ್ಟೇ ವೇಗವಾಗಿ ಚಲಿಸುವವನು.
* ಮಾರುತತುಲ್ಯವೇಗಂ: ಗಾಳಿಯಷ್ಟೇ ಸಮಾನವಾದ ವೇಗವನ್ನು ಹೊಂದಿರುವವನು (ಪರ್ವತವನ್ನು ಹೊತ್ತು ವಾಯುವೇಗದಲ್ಲಿ ಬಂದವನು).
* ಜಿತೇಂದ್ರಿಯಂ: ತನ್ನ ಇಂದ್ರಿಯಗಳನ್ನು ಗೆದ್ದವನು (ಸಂಪೂರ್ಣ ಸಂಯಮವುಳ್ಳವನು).
* ಬುದ್ಧಿಮತಾಂ ವರಿಷ್ಠಮ್: ಬುದ್ಧಿವಂತರಲ್ಲಿಯೇ ಶ್ರೇಷ್ಠನಾದವನು (ಸಂಜೀವಿನಿ ಗಿಡ ತಿಳಿಯದಿದ್ದಾಗ ಇಡೀ ಪರ್ವತವನ್ನೇ ತಂದ ಚತುರ).
* ವಾತಾತ್ಮಜಂ: ವಾಯುದೇವನ ಪುತ್ರ.
* ವಾನರಯೂಥಮುಖ್ಯಂ: ವಾನರ ಸೈನ್ಯದ ನಾಯಕ.
* ಶ್ರೀರಾಮದೂತಂ ಶರಣಂ ಪ್ರಪದ್ಯೇ: ಅಂತಹ ಶ್ರೀರಾಮನ ದೂತನಾದ ಹನುಮಂತನಿಗೆ ನಾನು ಶರಣಾಗುತ್ತೇನೆ.
ಪರ್ವತ ಎತ್ತಿದ ಸಂದರ್ಭದ ವಿಶೇಷತೆ:
ಹನುಮಂತನು ದ್ರೋಣಗಿರಿ ಪರ್ವತವನ್ನು ಎತ್ತಿದಾಗ ಆತನನ್ನು “ವೀರ ಹನುಮಂತ” ಎಂದು ಕರೆಯಲಾಗುತ್ತದೆ. ಈ ಸಂದರ್ಭದಲ್ಲಿ ಭಕ್ತರು ಹೆಚ್ಚಾಗಿ **”ಹನುಮಾನ್ ಚಾಲೀಸಾ”**ದ ಈ ಸಾಲನ್ನು ನೆನಪಿಸಿಕೊಳ್ಳುತ್ತಾರೆ:
“ಲಾಯ ಸಂಜೀವನ ಲಖನ ಜಿಯಾಯೇ |
> ಶ್ರೀ ರಘುಬೀರ ಹರಷಿ ಉರ ಲಾಯೇ ||”
ಅರ್ಥ: ನೀನು ಸಂಜೀವಿನಿ ಮೂಲಿಕೆಯನ್ನು ತಂದು ಲಕ್ಷ್ಮಣನನ್ನು ಬದುಕಿಸಿದೆ, ಇದರಿಂದ ಸಂತೋಷಗೊಂಡ ಶ್ರೀರಾಮನು ನಿನ್ನನ್ನು ಪ್ರೇಮದಿಂದ ಅಪ್ಪಿಕೊಂಡನು.
ಈ ಶ್ಲೋಕಗಳು ನಮಗೆ ಸಂಕಷ್ಟದ ಸಮಯದಲ್ಲಿ ಧೈರ್ಯ ಮತ್ತು ಬುದ್ಧಿವಂತಿಕೆಯನ್ನು ನೀಡುತ್ತವೆ.









