ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರಕ್ಕೆ ಮೂರು ವರ್ಷ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರದ ರಘುನಾಥಪುರದಲ್ಲಿ ನಡೆಯಲಿರುವ ಬಿಜೆಪಿ ಅದ್ಧೂರಿ ಜನಸ್ಪಂದನ ಸಮಾವೇಶಕ್ಕೆ ಚಾಲನೆ ಸಿಕ್ಕಿದೆ.
BIGG NEWS : ಜನ ಸ್ಪಂದನ ಕಾರ್ಯಕ್ರಮದಿಂದ ʻಪಕ್ಷ ಸಂಘಟನೆಗೆ ಅನುಕೂಲ ಆಗುತ್ತೆʼ : ಬಿ. ವೈ ವಿಜಯೇಂದ್ರ ಪ್ರತಿಕ್ರಿಯೆ
ಈ ವೇಳೆ ಮಾತನಾಡಿದ ಆರೋಗ್ಯ ಸಚಿವ ಸುಧಾಕರ್ ಮಾತನಾಡಿದ್ದಾರೆ. ಜನಸ್ಪಂದನ ಸಮಾವೇಶದ ಬಗ್ಗೆ ಕಾಂಗ್ರೆಸ್ ಟೀಕೆ ಮಾಡಿದೆ. ಅದಕ್ಕೆ ವಿಪಕ್ಷದವರಿಗೆ ಸಮಾವೇಶದಿಂದ ಉತ್ತರಿಸಿದ್ದೇವೆ. ಕೆಂಪೇಗೌಡರಿಗೆ ಜನ್ಮ ನೀಡಿದ ಪುಣ್ಯಭೂಮಿ ಇದು. ಇತಿಹಾಸದಲ್ಲಿ ಇಂತಹ ಸಮಾವೇಶ ನಡೆದಿರಲಿಲ್ಲ ಎಂದು ಹೇಳಿದ್ದಾರೆ. ೩ ವರ್ಷ ಜನರಿಗೆ ಸ್ಪಂದಿಸಿಲ್ಲವೆಂದು ಈ ಸಮಾವೇಶ ನಡೆಸಲಾಗಿದೆ. ಇದು ಯಾವುದೇ ವೈಯಕ್ತಿಕ ಉತ್ಸವ ಅಲ್ಲ, ಯಾವ ವ್ಯಕ್ತಿಯ ವೈಭವೀಕರಣ ಮಾಡುವ ಕಾರ್ಯಕ್ರವಲ್ಲ ಎಂದು ಹೇಳಿದ್ದಾರೆ.