ಕಲಬುರ್ಗಿ: ಜಿಲ್ಲೆಯಲ್ಲಿ ಅತ್ಯಂತ ಪ್ರಾಮಾಣಿಕ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರು ಭೀಕರ ಕಾರು ಅಪಘಾತದಲ್ಲಿ ಸಹೋದರರೊಂದಿಗೆ ದುರ್ಮರಣ ಹೊಂದಿದ್ದಾರೆ. ಆದರೇ ತಮ್ಮ ಅಧಿಕಾರಾವಧಿಯಲ್ಲಿ ಒಂದೇ ಒಂದು ರೂಪಾಯಿಗೂ ಲಂಚಕ್ಕೆ ಬೇಡಿಕೆ ಇಡದಂತ ಪ್ರಾಮಾಣಿಕ ವ್ಯಕ್ತಿಯಾಗಿದ್ದರು ಎಂಬುದು ಅವರನ್ನು ಬಲ್ಲವರ ಮಾತು. ಇದಕ್ಕೊಂದು ಕಾರಣವಿದೆ. ಜೊತೆ ಜೊತೆಗೆ ಅವರು ಐಎಎಸ್ ಅಧಿಕಾರಿಯಾದ ಹಿಂದೆ ಮನಕಲಕುವ ಕತೆ ಇದೆ. ಅದೇನು ಅಂತ ಮುಂದೆ ಓದಿ.
ಇದು ಮಹಾಂತೇಶ್ ಬೀಳಗಿ ಐಎಎಸ್ ಅಧಿಕಾರಿಯಾಗುವುದರ ಹಿಂದಿನ ಮನಕಲಕುವ ಕತೆ
ತನಗೆ 5 ವರ್ಷವಿದ್ದಾಗ ತನ್ನ ತಂದೆಯನ್ನು ಮಹಾಂತೇಶ್ ಬೀಳಗಿ ಕಳೆದುಕೊಂಡರು. ಕಡು ಬಡತನದಲ್ಲಿ ತಾಯಿ ಕೂಲಿ ನಾಲಿ ಮಾಡಿ ಮಗ ಮಹಾಂತೇಶ್ ಬೀಳಗಿ ಸಾಕಿದ್ರು. ತನಗೆ ವಿಧವಾ ವೇತನ ಬರುತ್ತದೆ ಎನ್ನುವ ಮಾಹಿತಿ ಆಕೆಗೆ ಸಿಕ್ಕಿತ್ತು. ಇದಕ್ಕಾಗಿ ಅಧಿಕಾರಿಯ ಬಳಿಗೆ ತೆರಳಿ. ತನ್ನ ಕಡು ಬಡತನದ ಜೀವನದ ಬಗ್ಗೆ ಹೇಳಿಕೊಂಡು ವಿಧವಾ ವೇತನಕ್ಕೆ ಮನವಿ ಮಾಡಿದರು.
ಮಾಸಿಕ 25 ರೂಪಾಯಿ ವಿಧವಾ ವೇತನ ಮಾಡಿಕೊಡಲು ಆ ಅಧಿಕಾರಿ ಮಾತ್ರ ರೂ.100 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ವಿಷಯ ತಿಳಿದಂತ ಮಹಾಂತೇಶ್ ಬೀಳಗಿ ಅವರು, ಅಂದೇ ತಾನು ಲಂಚ ಪಡೆಯದ ಅಧಿಕಾರಿಯಾಗಬೇಕು ಎಂಬುದಾಗಿ ನಿರ್ಧರಿಸಿದರು. ತಾನು ಐಎಎಸ್ ಮಾಡಬೇಕು ಎಂಬುದಾಗಿ ಛಲ ತೊಟ್ಟಂತ ಛಲದಂಕ ಮಲ್ಲರಾದಂತ ಮಹಾಂತೇಶ್ ಬೀಳಗಿ ಅವರು ಕನ್ನಡ ಮಾಧ್ಯಮದಲ್ಲಿ ಓದಿದರೂ, ಎಂ.ಎ ಬಳಿಕ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಗೆ ತಯಾರಿ ನಡೆಸಿದರು.
2012ರಲ್ಲಿ ಐಎಎಸ್ ಪಾಸ್
ಹಗಲು ರಾತ್ರಿ ಎನ್ನದೇ ಕಷ್ಟಪಟ್ಟು ಓದಿದಂತ ಮಹಾಂತೇಶ್ ಬೀಳಗಿ ಅವರು, 2012ರಲ್ಲಿ ಐಎಎಸ್ ಪಾಸ್ ಮಾಡಿದರು. ಆ ಬಳಿಕ ವಿವಿಧ ಹುದ್ದೆಯನ್ನು ನಿರ್ವಹಿಸಿದವರು. ತಮ್ಮ ಸೇವಾವಧಿಯುದ್ದಕ್ಕೂ ಒಂದು ರೂಪಾಯಿ ಲಂಚ ಪಡೆಯದೆ ಜನ ಸೇವೆಯೇ ಜನಾರ್ದನ ಸೇವೆ ಅಂತ ಸೇವೆಯಲ್ಲಿ ತಲ್ಲೀನರಾಗಿದ್ದರು. ಅದ್ರಲ್ಲೂ ಕೊರೊನಾ ಸಮಯದಲ್ಲಿ ಓರ್ವ ಡಿಸಿಯಾಗಿದ್ರೂ ಬೀದಿಗಿಳಿದು ಜನಸಾಮಾನ್ಯರಂತೆ ಕೆಲಸ ಮಾಡಿದರು. ದಾವಣಗೆರೆಯ ಜಿಲ್ಲಾಧಿಕಾರಿಯಾಗಿದ್ದಾಗ ಅವರು ಮಾಡಿದ ಸೇವೆಯಂತೂ ಜನಜನಿತ.
ಇಂಥವರನ್ನ ಕಂಡು ಆ ದೇವರಿಗೂ ಅದೆಂಥಾ ಹೊಟ್ಟಿ ಉರಿಯೋ ಗೊತ್ತಿಲ್ಲ. ಕರಬುರಗಿಯ ಜೀವರ್ಗಿ ಬಳಿ ನಡೆದ ಕಾರು ಅಪಘಾತದಲ್ಲಿ ಇಬ್ಬರು ಸಹೋದರರೊಂದಿಗೆ ಇಂದು ದುರ್ಮರಣ ಹೊಂದಿದ್ದಾರೆ. ಆ ಮೂಲಕ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಇನ್ನಿಲ್ಲವಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಮತ್ತೆ ಹುಟ್ಟಿ ಬನ್ನಿ ಸರ್ ಎಂಬುದು ಅವರ ಅಪಾರ ಅಭಿಮಾನಿಗಳ ನೊಂದ ನುಡಿ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು..
ಡಿಸಿಎಂ ಡಿ.ಕೆ ಶಿವಕುಮಾರ್ ಗೆ ಸಿಎಂ ಸ್ಥಾನ ನೀಡಿ: ಬಹಿರಂಗವಾಗೇ ಒತ್ತಾಯಿಸಿದ ಕಾಂಗ್ರೆಸ್ ಶಾಸಕ








