ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ದಿನೇ ದಿನೇ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿವೆ. ಈ ನಡುವೆಯೂ ಅವುಗಳನ್ನು ನಿಯಂತ್ರಿಸುವಂತ ಕೆಲಸವನ್ನು ಬೆಂಗಳೂರು ನಗರ ಪೊಲೀಸರು ಮಾಡುತ್ತಿದ್ದಾರೆ. ಹಾಗಾದ್ರೇ 2022ರಲ್ಲಿ ಬೆಂಗಳೂರು ಸಿಟಿಯಲ್ಲಿ ದಾಖಲಾದಂತ ಕ್ರೈಂಗಳ ಸಂಖ್ಯೆ ಎಷ್ಟು? ಅವುಗಳಲ್ಲಿ ಪತ್ತೆ ಹಚ್ಚಿ, ಬಗೆ ಹರಿಸಿದಂತ ಪ್ರಕರಣಗಳು ಎಷ್ಟು ಎನ್ನುವ ಬಗ್ಗೆ ಸಂಪೂರ್ಣ ಕ್ರೈಂ ರಿಪೋರ್ಟ್ ಮುಂದೆ ಓದಿ.
ಈ ಬಗ್ಗೆ ಮಾಹಿತಿ ನೀಡಿರುವಂತ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರು, 2022ರ ವರ್ಷದಲ್ಲಿ ನಗರದಲ್ಲಿ ಡ್ರಗ್ ಸೇವಿಸಿದಂತ ಪ್ರಕರಣಗಳಲ್ಲಿ 3,448 ಜನರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಆರೋಪಿಗಳಿಂದ 3,746 ಕೆಜಿ ಗಾಂಜಾ, 167 ಕೆಜಿ ಡ್ರಗ್ ಸೇರಿದಂತೆ ಒಟ್ಟು 89.53 ಕೋಟಿ ಮೌಲ್ಯದ ಡ್ರಗ್ ವಶ ಪಡೆಸಿಕೊಳ್ಳಲಾಗಿದೆ. ನಗರದಲ್ಲಿ ವಾಹನ ಸವಾರರಿಂದ 179 ಕೋಟಿ ದಂಡ ವಸೂಲಿ ಮಾಡಲಾಗಿದೆ ಎಂದರು.
2022ರ ವರ್ಷದಲ್ಲಿ 34 ವಿದೇಶಿಗರನ್ನು ಬಂಧಿಸಲಾಗಿದೆ. 172 ಕೊಲೆ ಕೇಸ್ ದಾಖಲಾಗಿದ್ದು, ಎಲ್ಲಾ ಕೇಸ್ ಪತ್ತೆ ಹಚ್ಚಿದ್ದೇವೆ. 478 ದರೋಡೆ ಕೇಸ್ ಗಳ ಪೈಕಿ 351 ಕೇಸ್ ಗಳನ್ನು ಪತ್ತೆ ಮಾಡಲಾಗಿದೆ. 151 ಸರಗಳ್ಳತನ ಪ್ರಕರಣಗಳಲ್ಲಿ 134 ಕೇಸ್ ಪತ್ತೆ ಹಚ್ಚಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನೂ 22 ರೌಡಿಗಳನ್ನು ಗೂಂಡಾ ಕಾಯ್ದೆಯಡಿ ಬಂಧಿಸಲಾಗಿದೆ. 179 ಹಗಲು ಮನೆ ಕಳ್ಳತನ ಪ್ರಕರಣಗಳು ದಾಖಲಾಗಿದ್ದರೇ, ಅವುಗಳಲ್ಲಿ 70 ಕೇಸ್ ಗಳನ್ನು ಪತ್ತೆ ಹಚ್ಚಲಾಗಿದೆ. 701 ರಾತ್ರಿ ಮನೆ ಕಳ್ಳತನ ಪ್ರಕರಣಗಳು ದಾಖಲಾಗಿದ್ದವು. ಅವುಗಳಲ್ಲಿ 229 ಕೇಸ್ ಪತ್ತೆ ಹಚ್ಚಲಾಗಿದೆ ಎಂದರು.
ಬೆಂಗಳೂರು ನಗರದಲ್ಲಿ 5066 ವಾಹನ ಕಳ್ಳತನ ಪ್ರಕರಣಗಳಲ್ಲಿ 189 ಕೇಸ್ ಪತ್ತೆ ಹಚ್ಚಲಾಗಿದೆ. ಇತರ ಮಾದರಿಯ 2511 ಕಳ್ಳತನ ಪ್ರಕರಣಗಳು ದಾಖಲಾಗಿದ್ದವು. ಇವುಗಳಲ್ಲಿ 561 ಕೇಸ್ ಪತ್ತೆ ಹಚ್ಚಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಒಟ್ಟು ಬೆಂಗಳೂರಿನಲ್ಲಿ 2022ರಲ್ಲಿ 9,281 ಕ್ರೈಂ ಕೇಸ್ ಗಳು ದಾಖಲಾಗಿದ್ದವು. ಅವುಗಳಲ್ಲಿ 2,782 ಕೇಸ್ ಗಳನ್ನು ಪತ್ತೆ ಹಚ್ಚಲಾಗಿದೆ ಎಂಬುದಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.
BIGG NEWS: ಅಪ್ರಾಪ್ತ ಮಕ್ಕಳನ್ನು ಕಾಪಾಡಿಕೊಳ್ಳಲು ತಂದೆ ಕರ್ತವ್ಯ ಬದ್ಧನಾಗಿರಬೇಕು : ಮದ್ರಾಸ್ ಹೈಕೋರ್ಟ್
2022ರಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಸಾಧನೆ: ನವಜಾತ ಶಿಶುಗಳ ಮರಣ ದರ ಇಳಿಕೆ, ಲಿಂಗಾನುಪಾತ ಹೆಚ್ಚಳ