ಅಯೋಧ್ಯಾ : ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಗರ್ಭಗುಡಿಯಲ್ಲಿ ರಾಮಲಲ್ಲ ಮೂರ್ತಿ ಪ್ರತಿಷ್ಠಾಪನೆ ಅತ್ಯಂತ ಸಡುಗರ ಸಂಭ್ರಮದಿಂದ ನೆರವೇರಿದೆ ಈ ಒಂದು ಮೂರ್ತಿಯನ್ನು ನಮ್ಮ ಕರ್ನಾಟಕದ ಮೈಸೂರು ಜಿಲ್ಲೆಯ ಹೆಗ್ಗಡ ದೇವನ ಕೋಟೆಯ ಶಿಲ್ಪಿ ಅರುಣ್ ಯೋಗಿರಾಜ್ ಅವರು ನಿರ್ಮಿಸಿದ್ದಾರೆ. ಹೀಗಾಗಿ ಅಯೋಧ್ಯ ಶ್ರೀರಾಮ ಮಂದಿರ ನಿರ್ಮಾಣದಲ್ಲಿ ಕರುನಾಡಿನ ಕೊಡುಗೆ ಅಪಾರವಾಗಿದೆ.
ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನ ಕಾರ್ಯಕ್ರಮ ಮುಗಿಸಿಕೊಂಡು ಇಂದು ಕರ್ನಾಟಕಕ್ಕೆ ಶಿಲ್ಪಿ ಅರುಣ್ ಯೋಗಿರಾಜ್ ಆಗಮಿಸಲಿದ್ದು, ಈಗಾಗಲೇ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳು ಅವರನ್ನು ಬರಮಾಡಿಕೊಳ್ಳಲು, ಭವ್ಯ ಸ್ವಾಗತಕ್ಕೆ ಭರ್ಜರಿ ತಯಾರಿ ಮಾಡಿಕೊಂಡಿದ್ದಾರೆ. ಎಂದು ಹೇಳಲಾಗುತ್ತಿದೆ.
ಇನ್ನು ಕರ್ನಾಟಕಕ್ಕೆ ಬರುವ ಮುಂಚೆ ಮಾಧ್ಯಮಗಳೊಂದಿಗೆ ಮಾತನಾಡಿದ ಅರುಣ್ ಯೋಗಿರಾಜ್ ಅವರು ನಾನು, ನನ್ನದಲ್ಲ, ಇದು ದೇಶದ ಆಸ್ತಿ. ಭಾರತ ಇತಿಹಾಸದಲ್ಲೇ ಹೆಸರು ಉಳಿಯುವ ವಿಷಯ ಇದಾಗಿದೆ. ದೊಡ್ಡ ಕೆಲಸ ಕೊಟ್ಟ ಮೇಲೆ ನಮ್ಮ ಮೇಲು ಜವಾಬ್ದಾರಿ ಇರುತ್ತದೆ. ಇದಕ್ಕಾಗಿ ರಕ್ತದ ಹೊಳೆಯನ್ನೇ ಹರಿಸಿದ್ದಾರೆ ಎಂದು ಅಯೋಧ್ಯೆಯಲ್ಲಿ ಶಿಲ್ಪಿ ಅರುಣ್ ಯೋಗಿರಾಜ್ ಪ್ರತಿಕ್ರಿಯೆ ನೀಡಿದ್ದಾರೆ.
ಯಂತ್ರ ಬಳಸದೆ ಕೈಗಳಿಂದಲೇ ರಾಮಲಲ್ಲಮೂರ್ತಿ ಕೆತ್ತನೆ ಮಾಡಿದ್ದೇನೆ. ನನ್ನ ಕೆಲಸ ಎಲ್ಲರಿಗೂ ಇಷ್ಟ ಆಗಬೇಕು ಅಂತ ಏನು ಇಲ್ಲ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ ಅವರು ಧನ್ಯವಾದ ಹೇಳಿದ್ದಾರೆ ರಾಮಮಂದಿರ ಟ್ರಸ್ಟ್ ಸದಸ್ಯರು ಹಾಗೂ ಜನತೆ ಕೂಡ ಖುಷಿಯಾಗಿದ್ದಾರೆ ಎಂದು ತಿಳಿಸಿದರು.