ಬೆಂಗಳೂರು: ಕಳೆದ ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ಭಾರೀ ಪ್ರಮಾಣದಲ್ಲಿ ಸುರಿದ ಮಳೆ ಅವಾಂತರವನ್ನೇ ಸೃಷ್ಟಿಸಿದೆ. ವರುಣನ ಅಬ್ಬರಕ್ಕೆ ಜರು ತತ್ತರಿಸಿದ್ದರು. ಈ ಎಫೆಕ್ಟ್ ವಾಹನಗಳಿಗೂ ತಟ್ಟಿದೆ.
ಭಾರೀ ಮಳೆಯಿಂದ ಹಾನಿಯಾದ 11 ಲಕ್ಷ ರೂ. ಮೌಲ್ಯದ ಫೋಕ್ಸ್ವ್ಯಾಗನ್ ಕಾರೊಂದು ಕೆಟ್ಟಿದೆ. ಹೀಗಾಗಿ ಕಾರಿನ ಮಾಲೀಕ ಅನಿರುದ್ಧ ಗಣೇಶ್ ಅದನ್ನು ರಿಪೇರಿಗೆಂದು ಕಾರು ಸರ್ವೀಸ್ ಕೇಂದ್ರಕ್ಕೆ ಬಿಟ್ಟದ್ದಾರೆ. ಸುಮಾರು 20 ದಿನಗಳ ನಂತರ ಕಾರು ಸರ್ವೀಸ್ ಕೇಂದ್ರವು ಬಿಲ್ ಕಳುಹಿಸಿದೆ. ಇದನ್ನು ನೋಡಿದ ಕಾರು ಕಾಲೀಕನಿಗೆ ಶಾಕ್ ಅಗಿದೆ. ಕಾರಣ ಅದರ ಬಿಲ್ 22 ಲಕ್ಷ ರೂ. ಆಗಿತ್ತು.
ಅನಿರುದ್ಧ ಅವರು ತಮ್ಮ ಬಿಲ್ನ ಇನ್ವಾಯ್ಸ್ಅನ್ನು ತಮ್ಮ ಲಿಂಕ್ಡಿನ್ ಪ್ರೊಫೈಲ್ನಲ್ಲಿ ಶೇರ್ ಮಾಡಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಕಾರಿನ ವಿಮಾ ಕಂಪನಿಯು ಒಟ್ಟು ನಷ್ಟವೆಂದು ಬರೆದು ಹಣವನ್ನು ಂಗ್ರಹಿಸುವುದಾಗಿ ಭರವಸೆ ನೀಡಿದ್ದರೂ, ಸರ್ವೀಸ್ ಕೇಂದ್ರವು ಕಾರನ್ನು ವಾಪಸ್ ಪಡೆಯಲು ₹ 44,840 ಪಾವತಿಸುವಂತೆ ಕೇಳಿತು. ಅಷ್ಟೇ ಅಲ್ಲದೇ, ಕಾರಿನ ಹಾನಿಯ ಬಗ್ಗೆ ದಾಖಲೆಗಳನ್ನು ನೀಡಲು ಸೂಚಿಸಿತ್ತು. ಈ ಬಗ್ಗೆ ಫೋಕ್ಸ್ವ್ಯಾಗನ್ ಇಂಡಿಯಾಗೆ ಅನಿರುದ್ಧ ಮೇಲ್ ಮಾಡಿ ದೂರು ಸಲ್ಲಿಸಿದ್ದಾರೆ. ಅದೃಷ್ಟವಶಾತ್, ಗಣೇಶ್ ಅವರು ಕಳುಹಿಸಿದ ಇಮೇಲ್ ನಂತರ ಫೋಕ್ಸ್ವ್ಯಾಗನ್ ಸಮಸ್ಯೆಯನ್ನು ಪರಿಹರಿಸಿದೆ. ಕಂಪನಿಯು ರಿಪೇರಿ ವೆಚ್ಚ 5,000 ರೂ ನೀಡುವಂತೆ ತಿಳಿಸಿದೆ.
ಏತನ್ಮಧ್ಯೆ, ಅವರ ಪೋಸ್ಟ್ಗೆ ಪ್ರತಿಕ್ರಿಯಿಸಿದ ಹಲವಾರು ಇಂಟರ್ನೆಟ್ ಬಳಕೆದಾರರು, ಗ್ರಾಹಕರನ್ನು ಶೋಷಣೆ ಮಾಡುತ್ತಿದೆ ಎಂದು ಸೇವಾ ಕೇಂದ್ರವನ್ನು ಟೀಕಿಸಿದ್ದಾರೆ.
Watch Video: ಟ್ರಾಫಿಕ್ ಜಾಮ್ಗೆ ಕಾರಣವಾಗಿದ್ದ ಪುಣೆಯ ʻಚಾಂದನಿ ಚೌಕ್ʼನಲ್ಲಿರುವ ಹಳೆಯ ಸೇತುವೆ ನೆಲಸಮ
BREAKING NEWS : ಸೋನಿಯಾಗಾಂಧಿ ಕರ್ನಾಟಕಕ್ಕೆ ಭೇಟಿ ನೀಡುವುದು ಪಕ್ಕಾ : ಡಿ.ಕೆ.ಶಿವಕುಮಾರ್ ಹೇಳಿಕೆ
BIGG NEWS : ವರುಣಾ ಕ್ಷೇತ್ರದಿಂದ ಸ್ಪರ್ಧೆ ವಿಚಾರ ; ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?