ಬೆಂಗಳೂರು : ಇಂದು ಬೆಂಗಳೂರಿನ ಆರ್ ಆರ್ ನಗರ ಕ್ಷೇತ್ರದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಜನಸ್ಪಂದನಾ ಕಾರ್ಯಕ್ರಮ ನಡೆಯುತ್ತಿದೆ. ಈ ಒಂದು ಕಾರ್ಯಕ್ರಮದಲ್ಲಿ ಬಿಜೆಪಿಯ ಶಾಸಕ ಮುನಿರತ್ನ ಕೂಡ ಭಾಗಿಯಾಗಿದ್ದು ಮುನಿರತ್ನ ವೇದಿಕೆ ಆಗಮಿಸುತ್ತಿದ್ದಂತೆ ಕೈ ಕಾರ್ಯಕರ್ತರು ಡಿಕೆ ಶಿವಕುಮಾರ್ ಗೆ ಜೈ ಎಂದು ಘೋಷಣೆ ಕೂಗಿದರು. ಕಾಂಗ್ರೆಸ್ ಕಾರ್ಯಕರ್ತರು ಘೋಷಣೆ ಕೂಗುತ್ತಿದ್ದಂತೆ ಮುನಿರತ್ನ ಕಿಡಿ ಕಾರಿದರು.
ಜನಸ್ಪಂದನ ಕಾರ್ಯಕ್ರಮದಲ್ಲಿ ಡಿಕೆಗೆ ಮುರತ್ನ ಟಾಂಗ ನೀಡಿದ್ದು ವೇದಿಕೆಗೆ ಬರುತ್ತಿದಂತೆ ಡಿಕೆಶಿಗೆ ಕಾರ್ಯಕರ್ತರು ಜೈಕಾರ ಹಾಕಿದರು. ಇದರಿಂದ ಆಕ್ರೋಶಗೊಂಡ ಮುನಿರತ್ನ ಇದು ಜಿಂದಾಬಾದ್ ಕೂಗುವಂತ ಕಾರ್ಯಕ್ರಮ ಅಲ್ಲ. ಸಾರ್ವಜನಿಕರ ಸಮಸ್ಯೆಗಳಿಗೆ ಏರ್ಪಡಿಸಿರುವಂತಹ ಸರ್ಕಾರದ ಕಾರ್ಯಕ್ರಮ.
ಇದು ಸರ್ಕಾರದ ಕಾರ್ಯಕ್ರಮ ಘೋಷಣೆ ಹಾಕಬೇಡಿ ಎಂದು ಕಾಂಗ್ರೆಸ್ ಕಾರ್ಯಕರ್ತರ ಘೋಷಣೆಗೆ ಮುನಿರತ್ನ ಕಿಡಿ ಕಾರಿದ್ದಾರೆ ನಾವು ಶಾಶ್ವತವಲ್ಲ ಗೊತ್ತಿರಲಿ ಎಂದು ಕಿಡಿ ಕಾರಿದ್ದಾರೆ.ಅಲ್ಲದೆ ಜನರ ಇಂದು ಈ ಕಾರ್ಯಕ್ರಮದಲ್ಲಿ ಅಹವಾಲು ಸ್ವೀಕರಿಸಲಿದ್ದಾರೆ. ಡಿಕೆ ಶಿವಕುಮಾರ್ ಕಾರ್ಯಕ್ರಮದಲ್ಲಿ ಸಂಸದ ಡಿಕೆ ಸುರೇಶ್, ಶಾಸಕ ಮುನಿರತ್ನ, ಎಸ್ ಟಿ ಸೋಮಶೇಖರ್ ಸೇರಿ ಹಲವು ನಾಯಕರು ಭಾಗಿಯಾಗಿದ್ದಾರೆ.
ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗುತ್ತಾರೆ,ಇದರಲ್ಲಿ ಯಾವುದೇ ಅನುಮಾನವಿಲ್ಲ: ‘ಅಮಿತ್ ಶಾ’
BIG BREAKING : ತುಮಕೂರಲ್ಲಿ ಕಾರು ಟ್ರ್ಯಾಕ್ಟರ್ ಮಧ್ಯ ಅಪಘಾತ : ಓರ್ವ ಮಹಿಳೆಯ ಸಾವು, 6 ಜನರಿಗೆ ಗಾಯ
ವಿಮಾನ ತುರ್ತು ಭೂಸ್ಪರ್ಶ :ಕೂದಲೆಳೆಯಲ್ಲಿ ಸಾವಿನಿಂದ ಪಾರಾದ ನಟಿ ‘ರಶ್ಮಿಕಾ ಮಂದಣ್ಣ’