Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನಿಮ್ಮ ಮನೆಯ `ಅಡುಗೆ ಎಣ್ಣೆ’ ಬಳಕೆಗೆ ಯೋಗ್ಯವಾಗಿದೆಯೇ? ಇಲ್ಲಿದೆ ಪತ್ತೆ ಹಚ್ಚುವ 6 ಸುಲಭ ವಿಧಾನಗಳು!

ಆದಾಯ ತೆರಿಗೆದಾರರೇ ಗಮನಿಸಿ : ITR-1, ITR-2, ITR-3 ಮತ್ತು ITR -4 ನಡುವೆ ಗೊಂದಲವಿದೆಯೇ? ಇಲ್ಲಿದೆ ಸರಳ ಮಾಹಿತಿ

​ಹೌಜ್ ರಾಣಿ ಅಗ್ನಿ ಅವಘಡ: ಚಿಕಿತ್ಸೆ ಫಲಿಸದೆ ಮೃತಪಟ್ಟ ಮತ್ತೊಬ್ಬ ವಿದೇಶಿ ಪ್ರಜೆ, ಸಾವಿನ ಸಂಖ್ಯೆ 22ಕ್ಕೆ ಏರಿಕೆ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಇದು ‘ಕನ್ನಡ ನ್ಯೂಸ್ ನೌ’ ಫಲಶೃತಿ: ಕೊಡೆ ಹಿಡಿದು ಸಾರಿಗೆ ಬಸ್ ಚಲಾಯಿಸಿದ ‘ಡ್ರೈವರ್’ ಬಗ್ಗೆ ಈ ಸ್ಪಷ್ಟನೆ ಕೊಟ್ಟ ‘NWKRTC’
KARNATAKA

ಇದು ‘ಕನ್ನಡ ನ್ಯೂಸ್ ನೌ’ ಫಲಶೃತಿ: ಕೊಡೆ ಹಿಡಿದು ಸಾರಿಗೆ ಬಸ್ ಚಲಾಯಿಸಿದ ‘ಡ್ರೈವರ್’ ಬಗ್ಗೆ ಈ ಸ್ಪಷ್ಟನೆ ಕೊಟ್ಟ ‘NWKRTC’

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ನಿಮ್ಮ ಕನ್ನಡ ನ್ಯೂಸ್ ನೌ ವೆಬ್ ಸೈಟ್ ನಲ್ಲಿ ಇಂದು ಬೆಳಿಗ್ಗೆ WATCH VIDEO: ಬಸ್ ಛಾವಣಿ ಸೋರಿಕೆ; ಛತ್ರಿ ಹಿಡಿದೇ ಬಸ್ ಚಲಾಯಿಸಿದ KSRTC ಚಾಲಕ, ವಿಡಿಯೋ ವೈರಲ್‌ ಎಂಬ ಸುದ್ದಿಯನ್ನು ಪ್ರಕಟಿಸಲಾಗಿತ್ತು. ಈ ಸುದ್ದಿ ವೈರಲ್ ಆಗಿ, ಸಾರಿಗೆ ಇಲಾಖೆಯ ಅಧಿಕಾರಿಗಳ ಬಗ್ಗೆ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದರು. ಈ ಸುದ್ದಿಯ ಬೆನ್ನಲ್ಲೇ ಕನ್ನಡ ನ್ಯೂಸ್ ನೌ ಫಲಶೃತಿ ಎನ್ನುವಂತೆ NWKRTC ಈ ಕೆಳಗಿನಂತೆ ಸ್ಪಷ್ಟನೆ ನೀಡಿದೆ.

ಮಳೆ ಬರುತ್ತಿರುವಾಗ ಸಂಸ್ಥೆಯ ವಾಹನದ ಚಾಲಕರು ಕೊಡೆ ಹಿಡಿದುಕೊಂಡು ವಾಹನ ಚಾಲನೆ ಮಾಡಿದ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಕುರಿತು ಈ ಕೆಳಗಿನಂತೆ ಸ್ಪಷ್ಟೀಕರಣ ಮಾಹಿತಿ ಹಂಚಿಕೊಂಡಿದೆ.

ಈ ವಿಷಯವಾಗಿ ಧಾರವಾಡ ಗ್ರಾಮಾಂತರ ವಿಭಾಗದ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಯಿತು. ಅದರನ್ವಯ, ದಿನಾಂಕ: 23-05-2024 ರಂದು ಧಾರವಾಡ ಘಟಕದ ವಾಹನ ಸಂಖ್ಯೆ ಕೆಎ-25 ಎಫ್-1336 ಬೇಟಗೇರಿ-ಧಾರವಾಡ ಮಾರ್ಗದಲ್ಲಿ ಕಾರ್ಯಾಚರಿಸುತ್ತಿರುವಾಗ ವಾಹನದಲ್ಲಿ ಚಾಲಕರಾಗಿ ಹನುಮಂತಪ್ಪ ಅ ಕಿಲ್ಲೇದಾರ, ಬಿ.ಸಂ-1203 D ಹಾಗೂ ನಿರ್ವಾಹಕರಾಗಿ ಅನಿತಾ ಎಚ್. ಬಿ ಸಂ-396 ರವರು ಕರ್ತವ್ಯ ನಿರ್ವಹಿಸುತ್ತಿದ್ದರು. ಮಳೆ ಬರುತ್ತಿದ್ದ ಆ ಸಮಯದಲ್ಲಿ ಅಂದರೆ ಸುಮಾರು 16:30ಕ್ಕೆ ಬಸ್ಸಿನಲ್ಲಿ ಪ್ರಯಾಣಿಕರು ಇಲ್ಲದೇ ಖಾಲಿ ಇದ್ದುದರಿಂದ ಚಾಲಕರು ಮನೋರಂಜನೆಗಾಗಿ ನಿರ್ವಾಹಕರ ಬಳಿ ಇದ್ದ ಕೊಡೆಯನ್ನು ಪಡೆದು, ಹಿಡಿದುಕೊಂಡು ವಾಹನ ಚಾಲನೆ ಮಾಡಿರುತ್ತಾರೆ. ಇದನ್ನು ಸದರಿ ನಿರ್ವಾಹಕಿಯು ವಿಡಿಯೋ ಚಿತ್ರೀಕರಣ ಮಾಡಿರುತ್ತಾರೆ ಎಂದಿದೆ.

ಆ ಸಮಯದಲ್ಲಿ ಚಾಲಕರ ಮೇಲಿನ ಛಾವಣಿಯಾಗಲಿ ಪ್ರಯಾಣಿಕರು ಕುಳಿತುಕೊಳ್ಳುವ ಸ್ಥಳದ ಛಾವಣಿಯಾಗಲಿ ಸೋರಿಕೆ (Roof Leakage) ಇರಲಿಲ್ಲ ಎಂದು ತಿಳಿದುಬಂದಿರುತ್ತದೆ. ವಾಹನದ ಛಾವಣಿ ಸೋರಿಕೆ ಬಗ್ಗೆ ಚಾಲಕ, ನಿರ್ವಾಹಕರ, ಪ್ರಯಾಣಿಕರ ಯಾವುದೇ ದೂರು ಸಹ ದಾಖಲು ಆಗಿರುವುದಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದೆ.

ಸದರಿ ವಾಹನವನ್ನು ವಿಭಾಗದ ತಾಂತ್ರಿಕ ಶಿಲ್ಪಿಗಳಿಂದ ಪರಿಶೀಲನೆ ಮಾಡಲಾಗಿ ಮೇಲ್ಚಾವಣಿಯು ಸೋರದೆ ಇರುವುದನ್ನು ಖಚಿತಪಡಿಸಿಕೊಳ್ಳಲಾಗಿದೆ. ಈ ಕುರಿತು ಸದರಿ ಚಾಲನಾ ಸಿಬ್ಬಂದಿಗಳಿಂದ ಸ್ಪಷ್ಟೀಕರಣ ಪಡೆಯಲಾಗಿ ಇದು ಕೇವಲ ಮನೋರಂಜನೆಗಾಗಿ ಮಾಡಿದ ವಿಡಿಯೋ ಚಿತ್ರೀಕರಣವಾಗಿರುತ್ತದೆ ಎಂದು ಹೇಳಿಕೆ ನೀಡಿದ್ದು, ಈ ಮೂಲಕ ಸ್ಪಷ್ಟೀಕರಣ ನೀಡಲಾಗಿದೆ.

ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್: ಈ ಬೇಸಿಗೆ ವಿಶೇಷ ರೈಲುಗಳ ಸಂಚಾರ

2024-25 ನೇ ಸಾಲಿನ ಶೈಕ್ಷಣಿಕ ಮಾರ್ಗದರ್ಶಿ ಪುಸ್ತಕ : ಶಾಲಾ ಮುಖ್ಯಸ್ತರಿಗೆ ಶಿಕ್ಷಣ ಇಲಾಖೆಯಿಂದ ಮಹತ್ವದ ಸೂಚನೆ

Share. Facebook Twitter LinkedIn WhatsApp Email

Related Posts

ನಿಮ್ಮ ಮನೆಯ `ಅಡುಗೆ ಎಣ್ಣೆ’ ಬಳಕೆಗೆ ಯೋಗ್ಯವಾಗಿದೆಯೇ? ಇಲ್ಲಿದೆ ಪತ್ತೆ ಹಚ್ಚುವ 6 ಸುಲಭ ವಿಧಾನಗಳು!

2 Mins Read

BREAKING : ರಾಜ್ಯಸಭೆ, MLC ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಘೋಷಣೆ : ದೇವೇಗೌಡ, ಸುಮಲತಾಗೆ ನಿರಾಸೆ

1 Min Read

BIG NEWS : ಪೈಪ್ ಲೈನ್ ಅಳವಡಿಕೆಗೆ `ಭೂಸ್ವಾಧೀನ’ ಅಗತ್ಯವಿಲ್ಲ : ಹೈಕೋರ್ಟ್ ಮಹತ್ವದ ಆದೇಶ

1 Min Read
Recent News

ನಿಮ್ಮ ಮನೆಯ `ಅಡುಗೆ ಎಣ್ಣೆ’ ಬಳಕೆಗೆ ಯೋಗ್ಯವಾಗಿದೆಯೇ? ಇಲ್ಲಿದೆ ಪತ್ತೆ ಹಚ್ಚುವ 6 ಸುಲಭ ವಿಧಾನಗಳು!

ಆದಾಯ ತೆರಿಗೆದಾರರೇ ಗಮನಿಸಿ : ITR-1, ITR-2, ITR-3 ಮತ್ತು ITR -4 ನಡುವೆ ಗೊಂದಲವಿದೆಯೇ? ಇಲ್ಲಿದೆ ಸರಳ ಮಾಹಿತಿ

​ಹೌಜ್ ರಾಣಿ ಅಗ್ನಿ ಅವಘಡ: ಚಿಕಿತ್ಸೆ ಫಲಿಸದೆ ಮೃತಪಟ್ಟ ಮತ್ತೊಬ್ಬ ವಿದೇಶಿ ಪ್ರಜೆ, ಸಾವಿನ ಸಂಖ್ಯೆ 22ಕ್ಕೆ ಏರಿಕೆ!

BREAKING : ರಾಜ್ಯಸಭೆ, MLC ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಘೋಷಣೆ : ದೇವೇಗೌಡ, ಸುಮಲತಾಗೆ ನಿರಾಸೆ

State News
KARNATAKA

ನಿಮ್ಮ ಮನೆಯ `ಅಡುಗೆ ಎಣ್ಣೆ’ ಬಳಕೆಗೆ ಯೋಗ್ಯವಾಗಿದೆಯೇ? ಇಲ್ಲಿದೆ ಪತ್ತೆ ಹಚ್ಚುವ 6 ಸುಲಭ ವಿಧಾನಗಳು!

By kannadanewsnow57 KARNATAKA 2 Mins Read

ಬೆಂಗಳೂರು: ಪ್ರತಿ ವರ್ಷ ಜೂನ್ 7 ರಂದು ‘ವಿಶ್ವ ಆಹಾರ ಸುರಕ್ಷತಾ ದಿನ’ವನ್ನು (World Food Safety Day) ಆಚರಿಸಲಾಗುತ್ತದೆ.…

BREAKING : ರಾಜ್ಯಸಭೆ, MLC ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಘೋಷಣೆ : ದೇವೇಗೌಡ, ಸುಮಲತಾಗೆ ನಿರಾಸೆ

BIG NEWS : ಪೈಪ್ ಲೈನ್ ಅಳವಡಿಕೆಗೆ `ಭೂಸ್ವಾಧೀನ’ ಅಗತ್ಯವಿಲ್ಲ : ಹೈಕೋರ್ಟ್ ಮಹತ್ವದ ಆದೇಶ

ಸಾರ್ವಜನಿಕರೇ ನಿಮ್ಮ `ಮೊಬೈಲ್’ ನಲ್ಲಿ ಇಟ್ಟುಕೊಳ್ಳಲೇಬೇಕು ಈ 12 ಸರ್ಕಾರಿ ಆ್ಯಪ್‌ ಗಳು.!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.