ಕೆಎನ್ಎನ್ಡಿಜಿಟಲ್ ಡೆಸ್ಕ್ : ಟಿ20 ವಿಶ್ವಕಪ್ ಫೈನಲ್’ನಲ್ಲಿ ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನದ ಸೋಲಿನ ನಂತರ ಕ್ರಿಕೆಟಿಗ ಮೊಹಮ್ಮದ್ ಶಮಿ, ಶೋಯೆಬ್ ಅಖ್ತರ್ ಅವ್ರ ಹೊಡೆದ ಹೃದಯದ ಟ್ವೀಟ್’ಗೆ ತಿರುಗೇಟು ನೀಡಿದ್ದಾರೆ.
ಭಾರತ ಸೋತಾಗ ಹೊಡೆದ ಹೃದಯದ ಟ್ವಿಟ್ ಮಾಡಿದ್ದ ಶೋಯೆಬ್ ಅಖ್ತರ್’ಗೆ ಇಂದು ಶಮಿ ಸಧ್ಯ ಮುಟ್ಟಿಕೊಳ್ಳುವ ಉತ್ತರ ನೀಡಿದ್ದಾರೆ. “ಕ್ಷಮಿಸಿ ಸಹೋದರ, ಇದನ್ನ ಕರ್ಮ ಎಂದು ಕರೆಯಲಾಗುತ್ತದೆ” ಎಂದು ಹೇಳಿದ್ದಾರೆ.
ಅಂದ್ಹಾಗೆ, ಸೆಮಿಫೈನಲ್’ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಸೋತ ನಂತ್ರ ಸಾಮಾಜಿಕ ಮಾಧ್ಯಮದಲ್ಲಿ ಕೆಲವು ಪಾಕಿಸ್ತಾನಿ ಅಭಿಮಾನಿಗಳು ಮತ್ತು ಮಾಜಿ ಕ್ರಿಕೆಟಿಗರ ಅಗೌರವದ ಚಟುವಟಿಕೆಗಳಿಗೆ ಪ್ರತೀಕಾರದಂತೆ ತೋರಿದವು. ಸಧ್ಯ ಶೋಯೆಬ್ ಕ್ರಿಯೆಗೆ ಶಮಿ ತಕ್ಕ ಪ್ರತಿಕ್ರಿಯೆ ನೀಡಿದ್ದಾರೆ.
Sorry brother
It’s call karma 💔💔💔 https://t.co/DpaIliRYkd
— Mohammad Shami (@MdShami11) November 13, 2022
ಪಂದ್ಯದಲ್ಲಿ ಏನಾಯ್ತು?
ವಿಶ್ವಕಪ್ನ ಅಂತಿಮ ಪಂದ್ಯ ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಇಂಗ್ಲೆಂಡ್ ಐದು ವಿಕೆಟ್ಗಳಿಂದ ಪಾಕಿಸ್ತಾನವನ್ನು ಸೋಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ನಿಗದಿತ 20 ಓವರ್ಗಳಲ್ಲಿ ಎಂಟು ವಿಕೆಟ್ಗೆ 137 ರನ್ ಗಳಿಸಿತು. ಮಸೂದ್ (38) ಮತ್ತು ಬಾಬರ್ ಅಜಮ್ (32) ಹೊರತುಪಡಿಸಿದರೆ ಪಾಕಿಸ್ತಾನದ ಯಾವ ಬ್ಯಾಟ್ಸ್ಮನ್ಗಳು ದೊಡ್ಡ ಇನ್ನಿಂಗ್ಸ್ ಮಾಡಲು ಸಾಧ್ಯವಾಗಲಿಲ್ಲ. ಇಂಗ್ಲೆಂಡ್ ಪರ ಸ್ಯಾಮ್ ಕರ್ರನ್ ಭರ್ಜರಿ ಸ್ಕೋರ್ ಮಾಡಿದ್ದು, ಸ್ಯಾಮ್ ಕರನ್ 12 ರನ್ ನೀಡಿ ಮೂರು ವಿಕೆಟ್ ಪಡೆದರು. ಆದಿಲ್ ರಶೀದ್ ಮತ್ತು ಕ್ರಿಸ್ ಜೋರ್ಡಾನ್ ತಲಾ ಎರಡು ವಿಕೆಟ್ ಕಿತ್ತು ಸ್ಯಾಮ್ ಕರ್ರನ್’ಗೆ ಉತ್ತಮ ಬೆಂಬಲ ನೀಡಿದರು. 19ನೇ ಓವರ್ನಲ್ಲಿ ಪಾಕಿಸ್ತಾನ ನೀಡಿದ 138 ರನ್ಗಳ ಸವಾಲನ್ನ ಇಂಗ್ಲೆಂಡ್ ತಂಡ ಪಾಸ್ ಮಾಡಿತು. ಬೆನ್ ಸ್ಟೋಕ್ಸ್ 52 ರನ್ ಗಳ ಅಜೇಯ ಅರ್ಧಶತಕ ಗಳಿಸಿ ಇಂಗ್ಲೆಂಡ್ ಗೆಲುವಿಗೆ ಕಾರಣರಾದರು. ಇದಲ್ಲದೇ ನಾಯಕ ಜೋಸ್ ಬಟ್ಲರ್ 26 ರನ್ ಗಳಿಸಿದರು.
ನ.18 ಅಥವಾ 20ರಿಂದ ಪಂಚರತ್ನ ರಥಯಾತ್ರೆ ಮತ್ತೆ ಪುನರಾರಂಭ – ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ
ಇದೇ 28 ರಿಂದ ‘ಶುಭ ಮುಹೂರ್ತ’ ಆರಂಭ ; ಯಾವ ತಿಂಗಳಲ್ಲಿ ಎಷ್ಟಿವೆ.? ಇಲ್ಲಿದೆ ಮಾಹಿತಿ