ಬೆಂಗಳೂರು: ಮಂಡ್ಯದ ಹನುಮಧ್ವಜ ವಿವಾದ ನಂತ್ರ ಸೋಷಿಯಲ್ ಮೀಡಿಯಾದಲ್ಲಿ ಆ ಕುರಿತಂತ ಪೋಸ್ಟ್, ವೀಡಿಯೋಗಳಿಗೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿದೆ. ಅಲ್ಲದೇ ಹಾಗೆ ಮಾಡಿದ್ರೇ ಕಾನೂನು ಕ್ರಮ ಕೈಗೊಳ್ಳೋದಾಗಿ ಎಚ್ಚರಿಕೆ ನೀಡಿದೆ. ಇಂತಹ ಮಂಡ್ಯ ಜಿಲ್ಲಾಡಳಿತದ ಕ್ರಮವನ್ನು ಖಡಿಸಿರೋ ವಿಪಕ್ಷ ನಾಯಕ ಆರ್.ಅಶೋಕ್, ಇದು ಪೊಲೀಸರ ಮೂಲಕ ಬಾಯಿ ಮುಚ್ಚಿಸೋ ದುಸ್ಸಾಹಸ ಎಂಬುದಾಗಿ ಕಿಡಿಕಾರಿದ್ದಾರೆ.
ಈ ಬಗ್ಗೆ ಇಂದು ಎಕ್ಸ್ ಮಾಡಿರುವಂತ ಅವರು, ಮಂಡ್ಯದ ಕೆರೆಗೋಡಿನಲ್ಲಿ ಹನುಮ ಧ್ವಜ ಇಳಿಸಿದ ನಂತರ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿರುವ ಕಾಂಗ್ರೆಸ್ ಸರ್ಕಾರ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿರುವ ಜನರಿಗೆ ಕಾನೂನಿನ ಭಯ ತೋರಿಸಿ, ಪೊಲೀಸರ ಮೂಲಕ ಬಾಯಿ ಮುಚ್ಚಿಸುವ ದುಸ್ಸಾಹಸಕ್ಕೆ ಕೈಹಾಕಿದೆ ಎಂಬುದಾಗಿ ವಾಗ್ಧಾಳಿ ನಡೆಸಿದ್ದಾರೆ.
ದಿನ ಬೆಳಗಾದರೆ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ, ವಾಕ್ ಸ್ವಾತಂತ್ರ್ಯ ಹತ್ತಿಕ್ಕಲಾಗಿದೆ, ಪ್ರಜಾತಂತ್ರ ಅಪಾಯದಲ್ಲಿದೆ ಎಂದು ಬಾಯಿ ಬಡಿದುಕೊಳ್ಳುವ ಕಾಂಗ್ರೆಸ್ ನಾಯಕರು, ಈಗ ಕರ್ನಾಟಕದಲ್ಲಿ ಮಾಡುತ್ತಿರುವುದೇನು? ಎಂದು ಪ್ರಶ್ನಿಸಿದ್ದಾರೆ.
ಸಿಎಂ ಸಿದ್ಧರಾಮಯ್ಯನವರೇ, ತಮ್ಮ ಸರ್ಕಾರಕ್ಕೆ ಕೊಂಚವಾದರೂ ಮಾನ ಮರ್ಯಾದೆ ಇದ್ದರೆ ಈ ಆದೇಶವನ್ನು ಕೂಡಲೇ ವಾಪಸ್ ಪಡೆಯಿರಿ. ತಪ್ಪೊಪ್ಪಿಕೊಂಡ ಹಿಂದೂಗಳಲ್ಲಿ ಕ್ಷಮೆ ಯಾಚಿಸಿ. ಅದು ಬಿಟ್ಟು ಜನಸಾಮಾನ್ಯರಿಗೆ ಈ ರೀತಿ ಕಿರುಕುಳ ನೀಡಿದರೆ ನಾವು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂಬುದಾಗಿ ಎಚ್ಚರಿಕೆ ನೀಡಿದ್ದಾರೆ.
ಮಂಡ್ಯದ ಕೆರೆಗೋಡಿನಲ್ಲಿ ಹನುಮ ಧ್ವಜ ಇಳಿಸಿದ ನಂತರ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿರುವ ಕಾಂಗ್ರೆಸ್ ಸರ್ಕಾರ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿರುವ ಜನರಿಗೆ ಕಾನೂನಿನ ಭಯ ತೋರಿಸಿ, ಪೊಲೀಸರ ಮೂಲಕ ಬಾಯಿ ಮುಚ್ಚಿಸುವ ದುಸ್ಸಾಹಸಕ್ಕೆ ಕೈಹಾಕಿದೆ.
ದಿನ ಬೆಳಗಾದರೆ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ, ವಾಕ್… pic.twitter.com/QOP69KwaI3
— R. Ashoka (ಆರ್. ಅಶೋಕ) (@RAshokaBJP) February 2, 2024
ರಾಜ್ಯದ ‘ಜನತೆ’ಗೆ ಗುಡ್ ನ್ಯೂಸ್: ಎಲ್ಲಾ ‘ತಾಲೂಕು ಆಸ್ಪತ್ರೆ’ಗಳಲ್ಲಿ ‘ಟೆಲಿಐಸಿ’ಯು ವ್ಯವಸ್ಥೆ ಕಲ್ಪನೆ