Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಭಾರತ-ಪಾಕ್ ಯುದ್ಧ: ಅಂತರರಾಷ್ಟ್ರೀಯ ಪಾಲುದಾರರಲ್ಲಿ ‘ಹೆಚ್ಚಿನ ಸಾಲ’ ಕೇಳಿದ ಪಾಕಿಸ್ತಾನ | India-Pak war

09/05/2025 11:09 AM

ಮಹಾಲಕ್ಷ್ಮಿಯನ್ನು ಈ ಮಂತ್ರಗಳನ್ನು ದಿನಕ್ಕೆ 108 ಬಾರಿ ಪಠಿಸಿದರೆ ಹಣ, ಸಂಪತ್ತು, ಸಮೃದ್ಧಿಯು ಹೆಚ್ಚಾಗುತ್ತದೆ. ಧನಾಗಮನ ಖಂಡಿತ..

09/05/2025 11:00 AM

BIG NEWS : ಇಂದು ನಡೆಯುವ ಸಂಪುಟ ಸಭೆಯಲ್ಲಿ ‘ಜಾತಿ ಗಣತಿ’ ವರದಿ ಭವಿಷ್ಯ ನಿರ್ಧಾರ

09/05/2025 10:50 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಇದು ದೇಶಕ್ಕೆ ಮಾದರಿ: ರಾಜ್ಯದ ಜಿಲ್ಲಾಸ್ಪತ್ರೆಗಳಲ್ಲಿ ‘ಮೆದುಳು ಆರೋಗ್ಯ ಸೇವೆ’ಗೆ ಸಚಿವ ಗುಂಡೂರಾವ್ ಚಾಲನೆ
INDIA

ಇದು ದೇಶಕ್ಕೆ ಮಾದರಿ: ರಾಜ್ಯದ ಜಿಲ್ಲಾಸ್ಪತ್ರೆಗಳಲ್ಲಿ ‘ಮೆದುಳು ಆರೋಗ್ಯ ಸೇವೆ’ಗೆ ಸಚಿವ ಗುಂಡೂರಾವ್ ಚಾಲನೆ

By kannadanewsnow0911/03/2024 8:58 PM

ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ ಜಿಲ್ಲಾಸ್ಪತ್ರೆಗಳಲ್ಲಿ ಮೆದುಳು ಆರೋಗ್ಯ ಸೇವೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇಂದು ಚಾಲನೆ ನೀಡಿದರು.

ನಿಮ್ಹಾನ್ಸ್ ಸಂಸ್ಥೆಯ ಸಹಯೋಗದಲ್ಲಿ ರಾಜ್ಯದ 33 ಸರ್ಕಾರಿ ಆಸ್ಪತ್ರೆಗಳಲ್ಲಿ ಮೆದುಳು ಆರೋಗ್ಯ ಕೇಂದ್ರಗಳನ್ನ ತೆರೆಯಲಾಗಿದೆ.‌ ಈ ಮೂಲಕ ನಿಮ್ಹಾನ್ಸ್ ಮೇಲಿನ ಒತ್ತಡ ಕಡಿಮೆ ಮಾಡುವುದರೊಂದಿಗೆ, ಜಿಲ್ಲಾ ಮಟ್ಟದ ಆಸ್ಪತ್ರೆಗಳಲ್ಲಿಯೇ ಮೆದುಳು ಹಾಗೂ ನರ ಸಮಸ್ಯೆಗಳನ್ನ ಹೊಂದಿರುವ ರೋಗಿಗಳಿಗೆ ಆರೋಗ್ಯ ಸೇವೆ ಒದಗಿಸುವತ್ತ ಆರೋಗ್ಯ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ.

ಬೆಂಗಳೂರಿನ ನಿಮ್ಹಾನ್ಸ್ ನಲ್ಲಿ ಇಂದು ನೂತನ ಮೆದುಳು ಆರೋಗ್ಯ ಕೇಂದ್ರಗಳಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ದೇಶದಲ್ಲಿ ಇದೊಂದು ಮಾದರಿ ಕಾರ್ಯಕ್ರಮವಾಗಲಿದೆ ಎಂದರು. ಮೆದುಳು ಆರೋಗ್ಯದ ವಿಚಾರದಲ್ಲಿ ಹೆಚ್ಚು ಒತ್ತು ನೀಡಬೇಕಾಗಿದೆ. ಕರ್ನಾಟಕ ಸರ್ಕಾರ ಹಾಗೂ ಆರೋಗ್ಯ ಇಲಾಖೆ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ.

ಮೆದುಳು ಹಾಗೂ ನರ ಸಮಸ್ಯೆಗಳಿಗೆ ರಾಜ್ಯದ ಜನರು ಬೆಂಗಳೂರಿನ ನಿಮ್ಹಾನ್ಸ್ ಗೆ ಆಗಮಿಸಬೇಕಾಗಿತ್ತು. ನಿಮ್ಹಾನ್ಸ್ ಮೇಲೆ ಹೆಚ್ಚಿನ ಒತ್ತಡ ಇತ್ತು‌. ಈ ಒತ್ತಡವನ್ನ ಕಡಿಮೆ ಮಾಡುವುದರ ಜೊತೆಗೆ, ಜಿಲ್ಲಾ ಮಟ್ಟದಲ್ಲಿಯೇ ರೋಗಿಗಳಿಗೆ ಚಿಕಿತ್ಸೆ ನೀಡಲು 33 ಮೆದುಳು ಆರೋಗ್ಯ ಕೇಂದ್ರಗಳನ್ನ ತೆರೆಯಲಾಗಿದೆ. ನಿಮ್ಹಾನ್ಸ್ ಸಹಯೋಗ ಹಾಗೂ ಸಲಹೆಗಳೊಂದಿಗೆ ಈ ಕೇಂದ್ರಗಳಲ್ಲಿ ಇನ್ಮುಂದೆ ಚಿಕಿತ್ಸೆ ದೊರೆಯಲಿದೆ ಎಂದರು. ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದರೆ ನಿಮ್ಹಾನ್ಸ್ ತಜ್ಞ ವೈದ್ಯರ ಸಲಹೆ ಪಡೆದುಕೊಂಡು ಜಿಲ್ಲಾ ಕೇಂದ್ರಗಳಲ್ಲಿಯೇ ಚಿಕಿತ್ಸೆ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಪಾರ್ಶ್ವವಾಯು, ಅಪಸ್ಮಾರ, ಮರೆವಿನ ಕಾಯಿಲೆ ಮತ್ತು ತಲೆನೋವು ಸೇರಿದಂತೆ ನರವೈಜ್ಞಾನಿಕ ಕಾಯಿಲೆಗಳ ಹೊರ ಭಾರತದಲ್ಲಿ ಹೆಚ್ಚಾಗುತ್ತಿದೆ. ಇವು ಮರಣ ಮತ್ತು ಅಂಗವೈಕಲ್ಯಕ್ಕೆ ಪ್ರಮುಖ ಕಾರಣವಾಗಿವೆ. ಇದನ್ನು ಸಮರ್ಥವಾಗಿ ನಿರ್ವಹಿಸುವ ನಿಟ್ಟಿನಲ್ಲಿ ಆರೋಗ್ಯ ಕೇಂದ್ರಗಳು ಸಹಕಾರಿಯಾಗಲಿವೆ. ಪ್ರತಿ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು, ಪಿಸಿಯೋಥೆರಪಿಸ್ಟ್, ಸ್ಪೀಚ್ ಥೆರಪಿಸ್ಟ್, ಮನಶ್ಯಾಸ್ತ್ರಜ್ಞರು, ನರ್ಸ್ ಮತ್ತು ಜಿಲ್ಲಾ ಸಂಯೋಜಕರನ್ನು ಒಳಗೊಂಡಿರುತ್ತದೆ.

ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮದ ಪ್ರಮುಖ ಅಂಶಗಳು

1. ಮೆದುಳು ಆರೋಗ್ಯ ಚಿಕಿತ್ಸಾಲಯಗಳ ಸ್ಥಾಪನೆ: ಕರ್ನಾಟಕದ 31 ಜಿಲ್ಲೆ ಮತ್ತು ಬಿಬಿಎಂಪಿಯ ಜಿಲ್ಲಾಮಟ್ಟದ ಆಸ್ಪತ್ರೆಗಳಲ್ಲಿ ಮೆದುಳು ಆರೋಗ್ಯ ಚಿಕಿತ್ಸಾಲಯಗಳನ್ನು ಸ್ಥಾಪಿಸಲಾಗಿದೆ. ನರರೋಗಿಗಳಿಗೆ ಸಕಾಲಿಕ ಚಿಕಿತ್ಸೆಯನ್ನು ಖಾತ್ರಿಪಡಿಸುವ ಮತ್ತು ಆರೈಕೆಗಾಗಿ ನೋಡಲ್ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತಿವೆ.

2. ಸಾಮರ್ಥ್ಯ ವೃದ್ಧಿ: ನರವೈಜ್ಞಾನಿಕ ಅಸ್ವಸ್ಥತೆಗಳ ನಿರ್ವಹಣೆಯನ್ನು ಹೆಚ್ಚಿಸಲು ರಾಜ್ಯಾದ್ಯಂತ ಆಶಾ ಕಾರ್ಯಕರ್ತರು, ಸಮುದಾಯ ಆರೋಗ್ಯ ಅಧಿಕಾರಿಗಳು, ಪ್ರಾಥಮಿಕ ಆರೈಕೆ ವೈದ್ಯರು ಮತ್ತು ಫಿಜಿಷಿಯನ್ಸ್ ಗಳಿಗೆ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

3. ನರರೋಗತಜ್ಞರ ರಾಜ್ಯವ್ಯಾಪಿ ನೆಟ್ವರ್ಕ್: ಪ್ರಾಥಮಿಕ ಹಂತದಲ್ಲಿ ವಿಶೇಷ ಆರೈಕೆಯನ್ನು ಖಚಿತಪಡಿಸಿಕೊಳ್ಳಲು ತಜ್ಞರ ಸಮಾಲೋಚನೆ, ಟೆಲಿನ್ಯೂರಾಲಜಿ ಮತ್ತು ಟೆಲಿಮೆಂಟರಿಂಗ್ ಸೇವೆಗಳನ್ನು ಒದಗಿಸುವ ನರರೋಗತಜ್ಞರುಗಳನ್ನು ಸಂಯೋಜಿಸಲಾಗಿದೆ.

4. ಆರೋಗ್ಯ ಕೇಂದ್ರಗಳು ಮತ್ತು ಆಸ್ಪತ್ರೆಗಳ ನಡುವೆ ಸಂಬಂಧವನ್ನು ಬಲಪಡಿಸುವ ಮತ್ತು ಪ್ರಾಥಮಿಕ ಹಂತದಲ್ಲಿ ರೋಗನಿರ್ಣಯ, ಸಕಾಲಿಕ ಚಿಕಿತ್ಸೆಯನ್ನು ಸುಲಭಗೊಳಿಸಲು ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಸಂಯೋಜಕರ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ.

5. ಅಂತರ್ವಿಭಾಗಿಯ ಸಮನ್ವಯ: ಅಸಾಂಕ್ರಾಮಿಕ ರೋಗಗಳು, ಮಾನಸಿಕ ಆರೋಗ್ಯ, ತಾಯಿ ಮತ್ತು ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಚಾಲ್ತಿಯಲ್ಲಿರುವ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳೊಂದಿಗೆ ನಿಬಂಧನೆಗಳ ಏಕೀಕರಣಗೊಳಿಸಿದೆ.

6. ಮೆದುಳಿನ ಆರೋಗ್ಯ ಜಾಗೃತಿ ಅಭಿಯಾನಗಳು: ಮೆದುಳಿನ ಆರೋಗ್ಯವನ್ನು ಉತ್ತೇಜಿಸಲು ವ್ಯಾಪಕವಾದ ಅಭಿಯಾನಗಳು, ತಡೆಗಟ್ಟುವಿಕೆ ಮತ್ತು ನರವೈಜ್ಞಾನಿಕ ಅಸ್ವಸ್ಥತೆಗಳ ಆರಂಭಿಕ ಗುರುತಿಸುವಿಕೆಯ ಬಗ್ಗೆ ಸಮುದಾಯಕ್ಕೆ ಅರಿವು ಮೂಡಿಸುವುದು.

7. ಡಿಜಿಟಲ್ ಡೇಟಾ ಮತ್ತು ಮಾಹಿತಿ ವ್ಯವಸ್ಥೆ : ಸಂವಹನ, ಕೆಲಸದ ಹರಿವು ಮತ್ತು ಪ್ರಭಾವದ ಮೌಲ್ಯಮಾಪನವನ್ನು ಸುಗಮಗೊಳಿಸುವ ಅತ್ಯಾಧುನಿಕ ವ್ಯವಸ್ಥೆ.

8. ಅನುಷ್ಠಾನ ಸಂಶೋಧನೆ: ರಾಜ್ಯಾದ್ಯಂತ ನರರೋಗ ಉತ್ತಮಗೊಳಿಸಲು ಸಂಶೋಧನೆಯನ್ನು ಕೂಡ ಅಡವಳಿಸಲಾಗುತ್ತಿದೆ.

ನಾಳೆಯಿಂದ ರಾಜ್ಯದಲ್ಲಿ ‘ರಂಜಾನ್ ಉಪವಾಸ ವ್ರತ’ ಆರಂಭ | Ramadan 2024

ಸಾರ್ವಜನಿಕರೇ ಗಮನಿಸಿ: ‘ರೈಲು’ಗಳ ಮೇಲೆ ‘ಕಲ್ಲು ತೂರಾಟ’ವಾದ್ರೇ ‘ಈ ಸಹಾಯವಾಣಿ’ಗೆ ಕರೆ ಮಾಡಿ

breaking news kannada latest news kannada news kannada news live kannada news now kannada online news kannadanews kannadanewsnow dot com kannadanewsnow.com kannadanewsnowdotcom karnataka latest news karnataka news latest news
Share. Facebook Twitter LinkedIn WhatsApp Email

Related Posts

ಭಾರತ-ಪಾಕ್ ಯುದ್ಧ: ಅಂತರರಾಷ್ಟ್ರೀಯ ಪಾಲುದಾರರಲ್ಲಿ ‘ಹೆಚ್ಚಿನ ಸಾಲ’ ಕೇಳಿದ ಪಾಕಿಸ್ತಾನ | India-Pak war

09/05/2025 11:09 AM1 Min Read

BREAKING: ಚಂಡೀಗಢದಲ್ಲಿ ಮೊಳಗಿದ ಏರ್ ರೈಡ್ ಸೈರನ್ , ಜನರು ಮನೆಯೊಳಗೆ ಇರಲು ಸೂಚನೆ

09/05/2025 10:38 AM1 Min Read

‘ಆಪರೇಷನ್ ಸಿಂಧೂರ್’ ಟ್ರೇಡ್ಮಾರ್ಕ್ ಬಿಡ್ ಹಿಂಪಡೆದ ರಿಲಯನ್ಸ್ | Operation Sindoor

09/05/2025 10:25 AM1 Min Read
Recent News

ಭಾರತ-ಪಾಕ್ ಯುದ್ಧ: ಅಂತರರಾಷ್ಟ್ರೀಯ ಪಾಲುದಾರರಲ್ಲಿ ‘ಹೆಚ್ಚಿನ ಸಾಲ’ ಕೇಳಿದ ಪಾಕಿಸ್ತಾನ | India-Pak war

09/05/2025 11:09 AM

ಮಹಾಲಕ್ಷ್ಮಿಯನ್ನು ಈ ಮಂತ್ರಗಳನ್ನು ದಿನಕ್ಕೆ 108 ಬಾರಿ ಪಠಿಸಿದರೆ ಹಣ, ಸಂಪತ್ತು, ಸಮೃದ್ಧಿಯು ಹೆಚ್ಚಾಗುತ್ತದೆ. ಧನಾಗಮನ ಖಂಡಿತ..

09/05/2025 11:00 AM

BIG NEWS : ಇಂದು ನಡೆಯುವ ಸಂಪುಟ ಸಭೆಯಲ್ಲಿ ‘ಜಾತಿ ಗಣತಿ’ ವರದಿ ಭವಿಷ್ಯ ನಿರ್ಧಾರ

09/05/2025 10:50 AM

BREAKING : ಸಚಿವ ಸಂಪುಟದಲ್ಲಿ ಹೆಚ್ಚಿನ ಭದ್ರತೆ ಕುರಿತು ಚರ್ಚಿಸಲಾಗುತ್ತೆ : ಗೃಹ ಸಚಿವ ಜಿ.ಪರಮೇಶ್ವರ್

09/05/2025 10:45 AM
State News
KARNATAKA

ಮಹಾಲಕ್ಷ್ಮಿಯನ್ನು ಈ ಮಂತ್ರಗಳನ್ನು ದಿನಕ್ಕೆ 108 ಬಾರಿ ಪಠಿಸಿದರೆ ಹಣ, ಸಂಪತ್ತು, ಸಮೃದ್ಧಿಯು ಹೆಚ್ಚಾಗುತ್ತದೆ. ಧನಾಗಮನ ಖಂಡಿತ..

By kannadanewsnow0509/05/2025 11:00 AM KARNATAKA 4 Mins Read

ಲಕ್ಷ್ಮಿಯನ್ನು ಯಾವೆಲ್ಲಾ ಮಂತ್ರಗಳ ಪಠಣೆಯಿಂದ ಆರಾಧಿಸಬೇಕು ಗೊತ್ತಾ..? ಲಕ್ಷ್ಮಿ ಮಂತ್ರಗಳೊಂದಿಗೆ ಲಕ್ಷ್ಮಿಯನ್ನು ಆರಾಧಿಸಿದರೆ ಸಿರಿ, ಸಂಪತ್ತು, ಅಷ್ಟೈಶ್ವರ್ಯ ನಿಮ್ಮದಾಗುತ್ತದೆ. ಯಾವುದೇ…

BIG NEWS : ಇಂದು ನಡೆಯುವ ಸಂಪುಟ ಸಭೆಯಲ್ಲಿ ‘ಜಾತಿ ಗಣತಿ’ ವರದಿ ಭವಿಷ್ಯ ನಿರ್ಧಾರ

09/05/2025 10:50 AM

BREAKING : ಸಚಿವ ಸಂಪುಟದಲ್ಲಿ ಹೆಚ್ಚಿನ ಭದ್ರತೆ ಕುರಿತು ಚರ್ಚಿಸಲಾಗುತ್ತೆ : ಗೃಹ ಸಚಿವ ಜಿ.ಪರಮೇಶ್ವರ್

09/05/2025 10:45 AM

BREAKING : ಯುದ್ಧ ಯಾರಿಗೂ ಬೇಡ, ಯುದ್ಧ ಆಗಬೇಕು ಅಂತ ಬಯಸೋದು ಸರಿಯಲ್ಲ : ಸಚಿವ ದಿನೇಶ್ ಗುಂಡೂರಾವ್

09/05/2025 10:13 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.