ಉತ್ತರಪ್ರದೇಶ : ಅಯೋಧ್ಯೆ ಶ್ರೀ ರಾಮ ಮಂದಿರದಲ್ಲಿ ರಾಮಲಲ್ಲ ಪ್ರಾಣ ಪ್ರತಿಷ್ಟಪನ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಅದ್ದೂರಿಯಾಗಿ ನರವೇರಿದ್ದು, ರಾಮನ ಮೂರ್ತಿಯು ಕರ್ನಾಟಕದ ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆಯ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ್ದೂ ಇದೀಗ ರಾಮ ಗರ್ಭಗುಡಿಯಲ್ಲಿ ವಿರಾಜಮಾನವಗಿದ್ದಾನೆ.
ಇನ್ನೂ ಅಯೋಧ್ಯೆಯಲ್ಲಿರುವ ಅರುಣ್ ಯೋಗಿರಾಜ್ ಅವರು ಭಾವುಕರಗಿ ಮಾತನಾಡಿದ್ಧು, ನಾನು ಈ ಭೂಮಿ ಮೇಲಿನ ಅದೃಷ್ಟಶಾಲಿ ವ್ಯಕ್ತಿ. ನನ್ನ ಪೂರ್ವಜರು, ಕುಟುಂಬ ಸದಸ್ಯರು, ಭಗವಾನ್ ರಾಮಲಲ್ಲಾನ ಆಶೀರ್ವಾದ ಎಂದಿಗೂ ನನ್ನ ಮೇಲಿದೆ ಎಂದು ರಾಮಲಲ್ಲಾನ ವಿಗ್ರಹ ಕೆತ್ತಿದ ಅರುಣ್ ಯೋಗಿರಾಜ್ ಭಾವುಕರಾಗಿ ನುಡಿದಿದ್ದಾರೆ.
ಕೆಲವೊಮ್ಮೆ ನಾನು ಕನಸಿನ ಲೋಕದಲ್ಲಿದ್ದೇನೆ ಎಂದು ನನಗೆ ಅನಿಸುತ್ತದೆ. ಇದು ನನ್ನ ಬದುಕಿನಲ್ಲಿ ಸ್ಮರಣೀಯ ದಿನ ಎಂದು ಅಯೋಧ್ಯೆ ರಾಮಮಂದಿರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ್ದಾರೆ.ರಾಮಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಯಾಗಿರುವ ರಾಮಲಲ್ಲಾ ವಿಗ್ರಹವನ್ನು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆ ಮಾಡಿದ್ದಾರೆ. ವಿಗ್ರಹ ಕೆತ್ತನೆಗಾಗಿ ಅವರು 6 ತಿಂಗಳು ತೆಗೆದುಕೊಂಡಿದ್ದರು