ಮೈಸೂರು : ಸಿಎಂ ಬದಲಾವಣೆ ವಿಚಾರವಾಗಿ ಮಾತನಾಡಿ ” ಬಿಜೆಪಿಯಲ್ಲಿ ಮೂರನೇ ಮುಖ್ಯಮಂತ್ರಿ ಪ್ರಸ್ತಾಪವೇ ಇಲ್ಲ” ಇದು ಕಾಂಗ್ರೆಸ್ ಕೃಪಾಘೋಷಿತ ನಾಟಕ ಮಂಡಳಿ ಸೃಷ್ಠಿಸಿದ ಸುಳ್ಳು ಎಂದು ಕಾಂಗ್ರೆಸ್ ವಿರುದ್ಧ ಸಚಿವ ಎಸ್.ಟಿ ಸೋಮಶೇಖರ್ ಕಿಡಿಕಾರಿದ್ದಾರೆ.
Video: ಬೈಕ್ಅನ್ನು ಹಿಂತೆಗೆಯುತ್ತಿದ್ದಾಗ ಆಕಸ್ಮಿಕವಾಗಿ ಆಳದ ಗುಂಡಿಗೆ ಬಿದ್ದ ವ್ಯಕ್ತಿ!
ಸಿದ್ದರಾಮಯ್ಯು ಡಿಕೆಶಿಗೆ ಟೋಪಿ ಹಾಕ್ತಿದ್ದಾರೆ, ಡಿಕೆಶಿ ಸಿದ್ದರಾಮಯ್ಯಗೆ ಟೋಪಿ ಹಾಕ್ತಿದ್ದಾರೆ ಅಲ್ಲಲ್ಲೇ ಟೋಪಿ ಹಾಕಿಕೊಳ್ತಿರೋ ವಿಚಾರವನ್ನು ಈ ಕರ್ನಾಟಕದ ಜನತೆ ನೋಡ್ತಿದ್ದಾರೆ.
ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಒಂದು ವರ್ಷ ಆಡಳಿತವನ್ನು ಕರ್ನಾಟಕ ಜನ ಮೆಚ್ಚುವಂತ ಜನಪರ ಆಡಳಿತವನ್ನು ಕೊಟ್ಟಿದ್ದಾರೆ. ಒಂದೇ ಒಂದು ಸಣ್ಣ ಅಪಾನೆ ಇಲ್ಲದ ಮುಖ್ಯಮಂತ್ರಿ ಮೇಲೆ ಕಾಂಗ್ರೆಸ್ ಸುಳ್ಳು ಸುದ್ದಿ ಹರಡುತ್ತಿದೆ.
Video: ಬೈಕ್ಅನ್ನು ಹಿಂತೆಗೆಯುತ್ತಿದ್ದಾಗ ಆಕಸ್ಮಿಕವಾಗಿ ಆಳದ ಗುಂಡಿಗೆ ಬಿದ್ದ ವ್ಯಕ್ತಿ!
ಯಾವಾಗ ಸಿದ್ದರಾಮೋತ್ಸವ ಆಯಿತೋ ಆಗ ಸಣ್ಣ ಕಿಡಿ ಬೃಹದಾಕಾರವಾಗಿ ಬೆಳೆದಿದೆ. ಅದನ್ನು ಮುಚ್ಚಿಕೊಳ್ಳಲು ಬಸವರಾಜ ಬೊಮ್ಮಾಯಿ ಬೆನ್ನಿಗೆ ಮೂರನೇ ಮುಖ್ಯಮಂತ್ರಿ ಬರ್ತಾರೆ ಎಂದು ಹೇಳುತ್ತಿರುವುದು ನೂರಕ್ಕೆ ನೂರು ” ಕಾಂಗ್ರೆಸ್ ಕೃಪಾಘೋಷಿತ ನಾಟಕ ಮಂಡಳಿ ಸೃಷ್ಠಿಸಿದ ಸುಳ್ಳು” ಎಂದು ಕಿಡಿಕಾರಿದ್ದಾರೆ.