ಶಿವಮೊಗ್ಗ: ಜಿಲ್ಲೆಯ ಸಾಗರ ನಗರದ ಬಿ.ಹೆಚ್ ರಸ್ತೆಯ ಹೊಸ ಖಾಸಗಿ ಬಸ್ ನಿಲ್ದಾಣದ ಬಳಿಯಲ್ಲಿ ಹೊಸದಾಗಿ “ಹೋಟೆಲ್ ಮಲ್ನಾಡ್ ಭರಣಿ” ಎಂಬುದೊಂದು ಇದೆ. ನಾಟಿ ಸ್ಟೈಲ್ ಊಟವೆಂದೇ ಟ್ಯಾಗ್ ಲೈನ್ ನಿಜಕ್ಕೂ ರುಚಿಯಲ್ಲಿ ಒಪ್ಪುವಂತೆ ಇದೆ. ಅದು ಅಕ್ಷರಶಃ ಸತ್ಯವಾದಂತಿದೆ. ಕಾರಣ ಈ ಹೋಟೆಲ್ ನಾನ್ ವೆಜ್ ಊಟವಂತೂ ಯಾವುದೇ ಸ್ಟಾರ್ ಹೋಟೆಲ್ ಗಿಂತ ಕಡಿಮೆಯಿಲ್ಲ.
ಹೌದು.. ಸಾಗರಕ್ಕೆ ಆಗಮಿಸೋ ಪ್ರವಾಸಿಗರೊಮ್ಮೆ ಈ ಹೋಟೆಲ್ ಗೆ ಹೋಗೋದು ಮರೆಯಬೇಡಿ. ಈ ಮೇಲಿನ ಮಾತು ನಿಜವೋ ಸುಳ್ಳೋ ಅನ್ನೋದು ಖಚಿತವಾಗಲಿದೆ. ಒಮ್ಮೆ ಊಟ ಮಾಡಿದ್ರೇ, ಮತ್ತೊಮ್ಮೆ ಊಟ ಮಾಡಬೇಕು ಎನ್ನುವಷ್ಟು ರುಚಿಕರ. ಎಷ್ಟೇ ಬಾರಿ ಊಟ ಮಾಡಿದರೂ ರುಚಿಯಲ್ಲಿ ವ್ಯತ್ಯಾಸವೇ ಇಲ್ಲ. ಮಟನ್ ಹಾಗೂ ಚಿಕನ್ ಎರಡು ಇಲ್ಲಿ ಸಿಗುತ್ತದೆ. ಮುದ್ದೆ, ಚಪಾತಿ ಊಟ ಸವಿದು ನೋಡಿದಾಗಲೇ ಆ ರುಚಿ ಮತ್ತೆ ಮತ್ತೆ ಸವಿಬೇಕು ಅನ್ನುವಷ್ಟು ಇಷ್ಟ ಆಗುತ್ತದೆ.
ಮಾಲೀಕೇ ನಾನ್ ವೆಜ್ ಊಟ ತುಂಬಾ ಚೆನ್ನಾಗಿದೆ. ಏನಾದರೂ ಟೆಸ್ಟಿಂಗ್ ಪೌಡರ್ ಮಹಿಮೆ ನಾ ಅಂತ ಕೇಳಿದೇ.. ನಾವು ಬಳಸೋದೆ ಇಲ್ಲ. ಯಾರೂ ಬಳಸಲೂ ಬಾರದು. ಅದು ಆರೋಗ್ಯಕ್ಕೆ ಹಾನಿಕಾರಕ. ನಮ್ಮ ಹೋಟೆಲ್ ರುಚಿಯ ಹಿಂದಿನ ಮಹಿಮೆ ಮಸಾಲೆಯದ್ದು. ನಾವೇ ತಯಾರಿಸಿದ ಮಸಾಲೆ ಬಳಕೆ ಮಾಡ್ತೀವಿ ಅಂತಾರೆ ಚರಣ್.
ಇಲ್ಲಿ ಚಾಪ್ಸ್, ಬೋಡಿ ಇನ್ನೂ ರುಚಿಕರವಾಗಿ ಇರುತ್ತದೆ. ತಿಂದು ನೋಡಿ ಎಂಬುದು ಮಾಲೀಕರ ಸಲಹೆ. ಕೈಮಾ ಉಂಡೆ, ಮಟನ್ ಊಟದ ರುಚಿ ಸವಿಯಲಾಗಿದೆ. ಎರಡು ಅದ್ಬುತ ರುಚಿಯನ್ನ ನೀಡಿದ್ದವು.
ಪ್ರವಾಸಿಗರು ಯಾರಾದರೂ ಶಿವಮೊಗ್ಗದ ಸಾಗರಕ್ಕೆ ಪ್ರವಾಸಕ್ಕೆ ಬಂದರೇ, ನೀವು ನಾನ್ ವೆಜ್ ಪ್ರಿಯರು ಆಗಿದ್ದರೇ ತಪ್ಪದೇ ಒಂದು ವಿಸಿಟ್ ಹಾಕಿ. ನಿಮಗೆ ಯಾವುದೇ 5 ಸ್ಟಾರ್, 4 ಸ್ಟಾರ್, 3 ಸ್ಟಾರ್ ಹೋಟೆಲ್ ನಲ್ಲಿ ಸಿಗದ ನಾನ್ ವೆಜ್ ರುಚಿಯನ್ನು ಸವಿಯಬಹುದು.
ಓ ಇಷ್ಟು ರುಚಿಯಾಗಿರೋ ಹೋಟೆಲ್ ನಲ್ಲಿ ಅಷ್ಟೇ ದುಬಾರಿ ಬೆಲೆ ಕೂಡ ಇರಬೇಕು ಅಂತ ಭಾವಿಸಬೇಡಿ. ಅಷ್ಟೇನೂ ದುಬಾರಿ ಅಲ್ಲದ, ತುಂಬಾ ರುಚಿ-ಶುಚಿಯಾದ ಹೋಟೆಲ್..
ಹೋಟೆಲ್ ಮಲ್ನಾಡ್ ಭರಣಿಯಲ್ಲಿ ಏನೆಲ್ಲಾ ಊಟ ಲಭ್ಯ? ಇಲ್ಲಿದೆ ಮೆನು
ಸಾಗರದ ಖಾಸಗಿ ಹೊಸ ಬಸ್ ನಿಲ್ದಾಣದ ಸಮೀಪದಲ್ಲಿ ಇರುವಂತ ಹೋಟೆಲ್ ಮಲ್ನಾಡ್ ಭರಣಿಯಲ್ಲಿ ಮಟನ್ ಮಸಾಲ, ಡ್ರೈ, ಕೀಮಾ ಡ್ರೈ, ಬಿರಿಯಾನಿ, ಚಾಪ್ಸ್, ಬೋಡಿ ಡ್ರೈ, ಬೋಡಿ ಮಸಾಲ, ಮಟನ್ ಹೈದರಾಬಾದಿ, ಕೊಲ್ಲಾಪುರಿ ಸೇರಿದಂತೆ ಇತರೆ ಐಟಂಮ್ಸ್ ಗಳು ಲಭ್ಯವಿದೆ.
ಇನ್ನೂ ಚಿಕನ್ ನಲ್ಲಿ ಚಿಕನ್ ಮಸಾಲ, ಡ್ರೈ, ಕಬಾಬ್, ಪೆಪ್ಪರ್ ಡ್ರೈ, ಬಿರಿಯಾನಿ, ಬಟರ್ ಚಿಕನ್, ಲೆಮನ್ ಚಿಕನ್, ಚಿಲ್ಲಿ ಚಿಕನ್, ಚಿಕನ್ ಮಂಚೂರಿ ಸೇರಿದಂತೆ ಇತರೆ ಐಟಂಗಳು ದೊರೆಯಲಿವೆ. ಇದಲ್ಲದೇ ಎಗ್ ಐಟಮ್ಸ್, ಫಿಶ್ ಐಟಮ್ಸ್ ಗಳಲ್ಲಿ ತರಾವರಿ ಮೀನುಗಳು ಸಿಕ್ಕರೇ, ರೋಟಿ, ರಾಗಿ ಮುದ್ದೆ, ಜೋಳದ ರೊಟ್ಟಿ, ಚಪಾತಿ ಊಟ ಸಿಗಲಿದೆ. ಕುಷ್ಕಾ, ಎಗ್ ಫ್ರೈಡ್ ರೈಸ್, ಚಿಕನ್ ಫ್ರೈಡ್ ರೈಸ್, ವೈಟ್ ರೈಸ್ ಕೂಡ ಲಭ್ಯವಿದೆ.
ನೀವು ಸಾಗರಕ್ಕೆ ಪ್ರವಾಸಕ್ಕೆ ಅಂತ ಬಂದ್ರೆ, ನಾನ್ ವೆಜ್ ಪ್ರಿಯರಾಗಿದ್ದರೇ ಹೋಟೆಲ್ ಮಲ್ನಾಡ್ ಭರಣಿಗೆ ಭೇಟಿ ಕೊಡೋದು ಮರೆಯಬೇಡಿ. ಮುಂಚೆಯೇ ಊಟ ಬುಕ್ ಮಾಡಿಕೊಂಡು ಹೋಗೋದಕ್ಕೆ ಸಂಪರ್ಕಿಸಿ -9481293332
ವರದಿ; ವಸಂತ ಬಿ ಈಶ್ವರಗೆರೆ… ಸಂಪಾದಕರು..
5 ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ಪೋಲಿಯೋ ಹನಿ ಹಾಕಿಸಿ: ಶಾಸಕ ಗೋಪಾಲಕೃಷ್ಣ ಬೇಳೂರು
ಹಾಲಿ ಶಿಕ್ಷಕರು ‘TET ಪರೀಕ್ಷೆ’ ಬರೆಯಬೇಕೆಂಬ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ: ಸಚಿವ ಮಧು ಬಂಗಾರಪ್ಪ








