ಬೆಂಗಳೂರು : ಈ ಸರ್ಕಾರ ಬೆಳಗ್ಗೆ ಎದ್ದಕೂಡಲೇ ಲೂಟಿ ಹೊಡೆಯಲು ನಿಲ್ಲುತ್ತದೆ.ಈ ಸರ್ಕಾರ ಬಂದ ಮೇಲೆ ಬರೀ ಡೆತ್ನೋಟ್ಗಳೇ ಬರುತ್ತವೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಶಾಸಕ ಡಾ.ಅಶ್ವತ್ಥ್ ನಾರಾಯಣ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, KRIDL ನಿಂದ ಬಾಕಿ ಬಿಲ್ ಬರದಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಧಿಕಾರಿಗಳಿಗೆ ಈ ಸರ್ಕಾರ ಕಿರುಕುಳ ಕೊಡುತ್ತಿದೆ.ಸಿಎಂ ಸಿದ್ದರಾಮಯ್ಯ ಅವರಿಗೆ 50 ವರ್ಷದ ರಾಜಕೀಯ ಅನುಭವ ಇದೆ ಅಂತಾರೆ, ಘಟನೆ ನಡೆದು 4 ದಿನವಾದ್ರೂ ಗೊತ್ತಿಲ್ಲ ಎಂದು ಸಿಎಂ ಹೇಳುತ್ತಿದ್ದಾರೆ.
ಇವರಿಗೆ ಗೊತ್ತಾಗಿಲ್ಲ ಅಂತಾದರೆ ಇವರೇನು ಮುಖ್ಯಮಂತ್ರಿನಾ ಎಂದು ಪ್ರಶ್ನಿಸಿದ್ದಾರೆ.ಎಲ್ಲರೂ ಮಹಾಪುರುಷರು, ಗೃಹ ಮಂತ್ರಿಗೆ ಕೈ ಮುಗಿಯಬೇಕು. ಡಿಸಿಎಂಗೆ ದೊಡ್ಡ ನಮಸ್ಕಾರ, ಸಿಎಂಗೆ ಅಡ್ಡ ಬೀಳಬೇಕು. ಈ ಸರ್ಕಾರದಲ್ಲಿ ಎಲ್ಲರೂ ದರೋಡೆಕೋರರೇ ಇದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಶಾಸಕ ಅಶ್ವತ್ಥ್ ನಾರಾಯಣ ಕೆಂಡಾ ಮಂಡಲವಾಗಿದ್ದಾರೆ.