ಬೆಂಗಳೂರು: ಕೆಪಿಟಿಸಿಎಲ್ ಪರೀಕ್ಷಾ ಅಕ್ರಮ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 41ಕ್ಕೆ ಏರಿದೆ. PSI ಅಕ್ರಮದಷ್ಟೇ ವಿಸ್ತಾರವಾಗಿರುವ ಈ ನೇಮಕಾತಿ ಹಗರಣದಲ್ಲಿ ಪ್ರಭಾವಿ ತಿಮಿಂಗಿಲಗಳನ್ನು ರಕ್ಷಿಸಿ ಕೇವಲ ಸಣ್ಣ ಮೀನುಗಳನ್ನು ಹಿಡಿಯಲಾಗುತ್ತಿದೆ ಅಷ್ಟೇ. ಎಲ್ಲಾ ಹುದ್ದೆ ಮಾರಾಟದ ಅಕ್ರಮಗಳನ್ನು ಉನ್ನತ ತನಿಖೆಗೆ ವಹಿಸದೆ ಪ್ರಭಾವಿಗಳನ್ನು ರಕ್ಷಿಸುತ್ತಿದೆ ಸರ್ಕಾರ ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ( Karnataka Congress ) ಕಿಡಿಕಾರಿದೆ.
ಕೆಪಿಟಿಸಿಎಲ್ ಪರೀಕ್ಷಾ ಅಕ್ರಮ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 41ಕ್ಕೆ ಏರಿದೆ.
PSI ಅಕ್ರಮದಷ್ಟೇ ವಿಸ್ತಾರವಾಗಿರುವ ಈ ನೇಮಕಾತಿ ಹಗರಣದಲ್ಲಿ ಪ್ರಭಾವಿ ತಿಮಿಂಗಿಲಗಳನ್ನು ರಕ್ಷಿಸಿ ಕೇವಲ ಸಣ್ಣ ಮೀನುಗಳನ್ನು ಹಿಡಿಯಲಾಗುತ್ತಿದೆ ಅಷ್ಟೇ.ಎಲ್ಲಾ ಹುದ್ದೆ ಮಾರಾಟದ ಅಕ್ರಮಗಳನ್ನು ಉನ್ನತ ತನಿಖೆಗೆ ವಹಿಸದೆ ಪ್ರಭಾವಿಗಳನ್ನು ರಕ್ಷಿಸುತ್ತಿದೆ ಸರ್ಕಾರ. pic.twitter.com/fPJpOp1qsO
— Karnataka Congress (@INCKarnataka) January 3, 2023
ಈ ಬಗ್ಗೆ ಟ್ವಿಟ್ ಮಾಡಿದ್ದು, ಪ್ರದೀಪ್ ಆತ್ಮಹತ್ಯೆಯಲ್ಲಿ ಅರವಿಂದ್ ಲಿಂಬಾವಳಿ ಅವರ ಪಾತ್ರವೇನು ಎಂಬುದರ ಕುರಿತ ತನಿಖೆಗೆ ಮುಂದಾಗುತ್ತಿಲ್ಲವೇಕೆ? ಶಾಸಕರೂ ಪ್ರದೀಪ್ಗೆ ವಂಚಿಸಿದವರ ಜೊತೆ ಸೇರಿ ದ್ರೋಹವೆಸಗಿದ ಗುಮಾನಿಗಳಿವೆ, ಅರವಿಂದ್ ಲಿಂಬಾವಳಿ ಪ್ರಭಾವ ಬಳಸಿ ಸಾಕ್ಷ್ಯ ನಾಶಪಡಿಸುವ ಸಾಧ್ಯತೆಗಳಿದ್ದರೂ ಬಂಧನಕ್ಕೆ ಹಿಂದೇಟು ಹಾಕುತ್ತಿರುವುದೇಕೆ? ಎಂದು ಪ್ರಶ್ನಿಸಿದೆ.
ಪ್ರದೀಪ್ ಆತ್ಮಹತ್ಯೆಯಲ್ಲಿ ಅರವಿಂದ್ ಲಿಂಬಾವಳಿ ಅವರ ಪಾತ್ರವೇನು ಎಂಬುದರ ಕುರಿತ ತನಿಖೆಗೆ ಮುಂದಾಗುತ್ತಿಲ್ಲವೇಕೆ?
ಶಾಸಕರೂ ಪ್ರದೀಪ್ಗೆ ವಂಚಿಸಿದವರ ಜೊತೆ ಸೇರಿ ದ್ರೋಹವೆಸಗಿದ ಗುಮಾನಿಗಳಿವೆ,
ಅರವಿಂದ್ ಲಿಂಬಾವಳಿ ಪ್ರಭಾವ ಬಳಸಿ ಸಾಕ್ಷ್ಯ ನಾಶಪಡಿಸುವ ಸಾಧ್ಯತೆಗಳಿದ್ದರೂ ಬಂಧನಕ್ಕೆ ಹಿಂದೇಟು ಹಾಕುತ್ತಿರುವುದೇಕೆ?#ArrestLimbavali pic.twitter.com/kwVp2wQrnP
— Karnataka Congress (@INCKarnataka) January 3, 2023
ಆತ್ಮಹತ್ಯೆ ಮಾಡಿಕೊಂಡ ಪ್ರದೀಪ್ ಬಿಜೆಪಿ ಕಾರ್ಯಕರ್ತನೇ ಆಗಿದ್ದು, ಸಾಮಾಜಿಕ ಜಾಲತಾಣದ ಗುತ್ತಿಗೆ ವ್ಯವಹಾರದಲ್ಲಿ ಅರವಿಂದ ಲಿಂಬಾವಳಿ ಅವರಿಂದ ವಂಚನೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ಪ್ರಕರಣ ಇಷ್ಟಕ್ಕೇ ಸೀಮಿತವಾಗಿರದೆ ಹೆಚ್ಚಿನ ಅವ್ಯವಹಾರಗಳು ನಡೆದಿರುವ ಸಂಭವವಿದೆ. ಆದರೆ ಲಿಂಬಾವಳಿಯವರ ತನಿಖೆ ಇನ್ನೂ ಆರಂಭವಾಗಿಲ್ಲವೇಕೆ? ಎಂದು ಕೇಳಿದೆ.
ಆತ್ಮಹತ್ಯೆ ಮಾಡಿಕೊಂಡ ಪ್ರದೀಪ್ ಬಿಜೆಪಿ ಕಾರ್ಯಕರ್ತನೇ ಆಗಿದ್ದು, ಸಾಮಾಜಿಕ ಜಾಲತಾಣದ ಗುತ್ತಿಗೆ ವ್ಯವಹಾರದಲ್ಲಿ @ArvindLBJP ಅವರಿಂದ ವಂಚನೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ.
ಪ್ರಕರಣ ಇಷ್ಟಕ್ಕೇ ಸೀಮಿತವಾಗಿರದೆ ಹೆಚ್ಚಿನ ಅವ್ಯವಹಾರಗಳು ನಡೆದಿರುವ ಸಂಭವವಿದೆ.
ಆದರೆ ಲಿಂಬಾವಳಿಯವರ ತನಿಖೆ ಇನ್ನೂ ಆರಂಭವಾಗಿಲ್ಲವೇಕೆ?#ArrestLimbavali pic.twitter.com/cjFWaFPRC8— Karnataka Congress (@INCKarnataka) January 3, 2023