ಬೆಂಗಳೂರು: ಪ್ರಸ್ತುತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 198 ವಾರ್ಡ್‌ಗಳ ಆಧಾರದಲ್ಲಿಯೇ ಕಾರ್ಯನಿರ್ವಹಿಸುತ್ತಿವೆ. ಮುಂದಿನ ದಿನಗಳಲ್ಲಿ ಗ್ರೇಟರ್ ಬೆಂಗಳೂರು ಪ್ರದೇಶದಲ್ಲಿ ಹೊಸ 5 ನಗರ ಪಾಲಿಕೆಗಳನ್ನು ಸರ್ಕಾರ ಅಧಿಸೂಚಿಸಿದರೂ, ಹಾಲಿ ಇರುವ ವಾರ್ಡ್‌ಗಳೇ ಮುಂದುವರೆಯಲಿವೆ. ಪ್ರಸ್ತುತ, ಬಿಬಿಎಂಪಿ ಹೊಸ ನಗರ ಪಾಲಿಕೆಗಳ ಕಾರ್ಯಾಚರಣೆಗೆ ಅಗತ್ಯವಿರುವ ಸಿಬ್ಬಂದಿ ಹಾಗೂ ಆಡಳಿತ ವೆಚ್ಚವನ್ನು ಗುರುತಿಸುವ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ ಎಂಬುದಾಗಿ ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ ರಾವ್ ಸ್ಪಷ್ಟ ಪಡಿಸಿದ್ದಾರೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕಾಯ್ದೆಯಡಿಯಲ್ಲಿ, 5 ನಗರ ಪಾಲಿಕೆಗಳ ಅಧಿಸೂಚನೆಯ ನಂತರ ಸರ್ಕಾರವು ವಾರ್ಡ್ ಮರುವಿಂಗಡನಾ ಆಯೋಗವನ್ನು (Delimitation Commission) ನೇಮಕ ಮಾಡಲಿದೆ. ಆ ಆಯೋಗವು ಪ್ರತಿ ನಗರ ಪಾಲಿಕೆಯ ವಾರ್ಡ್‌ಗಳ ಸಂಖ್ಯೆ, ಗಡಿಗಳು ಹಾಗೂ ಇತರೆ ವಿವರಗಳನ್ನು ನಿರ್ಧರಿಸಲಿದೆ ಎಂದಿದ್ದಾರೆ.
ಹೀಗಾಗಿ ಯಾವುದೇ ರೀತಿಯ ಊಹಾಪೋಹಗಳಿಗೆ ಕಿವಿಗೊಡಬೇಡಿ ಮತ್ತು ಈ ಕುರಿತು ಪ್ರಕಟವಾದ ಯಾವ ಮಾಹಿತಿಯೂ ನಿಜಾಂಶದಿಂದ ಕೂಡಿರುವುದಿಲ್ಲ ಎಂಬುದಾಗಿ ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ ರಾವ್ ತಿಳಿಸಿದ್ದಾರೆ.
ಕೇವಲ 15 ಸೆಕೆಂಡುಗಳಲ್ಲಿ ‘AI-ಚಾಲಿತ ಸ್ಟೆತೊಸ್ಕೋಪ್’ ಹೃದಯದ ಸ್ಥಿತಿ ಪತ್ತೆ | AI-Powered Stethoscope








