ಸಪೋಟಾ ಹಣ್ಣು ಇಷ್ಟವಿಲ್ಲ ಅನ್ನೋರು ತೀರಾ ವಿರಳ. ಈ ಹಣ್ಣಿನಲ್ಲಿ ಪ್ರಕ್ಟೋಸ್ ಮತ್ತು ಸುಕ್ರೋಸ್ ಎಂಬ ಎರಡು ಸಿಹಿ ಅಂಶಗಳು ಅಡಕವಾಗಿದೆ. ಈ ಹಣ್ಣನ್ನು ನಿಯಮಿತವಾಗಿ ಸೇವಿಸಿದರೆ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿವೆ. ಇದರ ಸೇವನೆ ಕೂದಲಿನ ಹಾಗು ಚರ್ಮದ ಆರೋಗ್ಯವನ್ನೂ ಕಾಪಾಡುತ್ತದೆ.
ಸಪೋಟಾ ಹಣ್ಣಿನಲ್ಲಿ ಅಧಿಕ ಪೋಷಕಾಂಶಗಳಿದ್ದು, ಗ್ಲುಕೋಸ್ ಕೂಡ ಹೆಚ್ಚಿದೆ. ಇದರ ಸೇವನೆ ದೇಹಕ್ಕೆ ದುಪ್ಪಟ್ಟು ಶಕ್ತಿ ನೀಡುತ್ತದೆ. ಮಧುಮೇಹಿಗಳು ಇದನ್ನು ಹೆಚ್ಚು ಸೇವಿಸಬೇಡಿ.
ಈ ಹಣ್ಣಿಲ್ಲಿ ವಿಟಮಿನ್ ಎ ಅಂಶವಿದ್ದು, ಕಣ್ಣಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಇದು ಸ್ಕಿನ್ ಟ್ಯಾನ್ ತೆಗೆದು ಹಾಕುತ್ತದೆ. ಇದು ಉರಿಯೂತಕ್ಕೆ ಪ್ರತಿರೋಧಕವಾಗಿ ಕೆಲಸ ಮಾಡುತ್ತದೆ. ಅಂದರೆ ಅನ್ನನಾಳ, ಜಠರ ಉರಿತ ಹಾಗು ಜೀರ್ಣಕ್ರಿಯೆಗೆ ಸಂಬಂಧಿಸಿದ ಎಲ್ಲಾ ಕಾಯಿಲೆಗಳಿಗೆ ಶಮನ ನೀಡುತ್ತದೆ.
ಸಪೋಟಾ ಕ್ಯಾನ್ಸರ್ ಅಪಾಯವನ್ನು ದೂರ ಮಾಡುತ್ತದೆ. ಇದರಲ್ಲಿ ಉತ್ಕೃಷ್ಟ ಪ್ರಮಾಣದ ನಿರೋಧಕ ಪೋಷಕಾಂಶಗಳಿವೆ.
ಇದರಲ್ಲಿ ಕ್ಯಾಲ್ಸಿಯಮ್ ಹೇರಳವಾಗಿದ್ದು ಮೂಳೆಗಳಿಗೆ ಶಕ್ತಿ ನೀಡಿ. ದೀರ್ಘ ಕಾಲದವರೆಗೂ ಅವುಗಳು ಕುಂಠಿತವಾಗದಂತೆ ನೋಡಿಕೊಳ್ಳುತ್ತದೆ.
ಜೀರ್ಣಕ್ರಿಯೆ ಹಾಗು ಮಲಬದ್ಧತೆ ಸಮಸ್ಯೆ ಇದ್ದವರು ನಿತ್ಯವೂ ಚಿಕ್ಕು ಹಣ್ಣನ್ನು ಸೇವಿಸಿ ಆ ಸಮಸ್ಯೆಯಿಂದ ಬೇಗನೆ ಆರಾಮಾಗಿರಬಹುದು. ಇನ್ನು ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿದ್ದರೆ ಚಿಕ್ಕು ಹಣ್ಣಿನ ಸೇವನೆ ಮಾಡಲು ಯಾವುದೇ ತೊಂದರೆ ಇಲ್ಲ.
ಈ ಹಣ್ಣನ್ನು ಆಗಾಗ ಸೇವಿಸಿದರೆ ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಬರುವುದಿಲ್ಲ ಹಾಗು ಇದು ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಸಪೋಟಾ ಹಣ್ಣು ದೇಹಕ್ಕೆ ಅಗತ್ಯವಿರುವ ಕಬ್ಬಿಣ ಅಂಶವನ್ನು ಒದಗಿಸುತ್ತವೆ. ಹಾಗಂತ ಇದನ್ನು ಹೆಚ್ಚಾಗಿ ತಿಂದರೆ ಕೆಲ ಅಲರ್ಜಿಯಾಗುವ ಸಾಧ್ಯತೆ ಇದೆ. ನಿಯಮಿತವಾಗಿ ಚಿಕ್ಕು ಸೇವಿಸಿದರೆ ಆರೋಗ್ಯ ಎಲ್ಲಾ ರೀತಿಯಿಂಲೂ ಸಮತೋಲನದಲ್ಲಿ ಇರುತ್ತದೆ. ಇದನ್ನು ಚಿಕ್ಕ ಮಕ್ಕಳು ಸೇರಿದಂತೆ ವೃದ್ಧರೂ ನಿಯಮಿತವಾಗಿ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಬಹುದು.