ದಾವಣಗೆರೆ: ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ತಿರುಕನ ಕನಸು ಕಾಣುತ್ತಿದ್ದಾರೆ. ಅದು ತಿರುಕನ ಕನಸಾಗಿಯೇ ಉಳಿಯುತ್ತದೆಯೇ ಹೊರತು ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ ಎಂದು ಮಾಜಿ ಸಿಎಂ ಯಡಿಯೂರಪ್ಪ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದರು.
ಬನಾರಸ್ ಹಿರೋ ಝೈದ್ ಖಾನ್ ಬಾಲಿವುಡ್ನಿಂದ ಬಂದ ಆಫರ್ ಬೇಡ ಅಂದಿದ್ದೇಕೆ ಗೊತ್ತಾ?
ದಾವಣಗೆರೆಯಲ್ಲಿ ನಡೆದ ಜನಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು,ನನ್ನ ಹುಟ್ಟೂರು ಬೂಕನಕೆರೆಯಲ್ಲಿ ಪೂಜೆ ಇದೆ. ಅದ್ದರಿಂದ ಹೋಗಬೇಕಿದೆ ಅದಕ್ಕಾಗಿ ಬೇಗ ಮಾತನಾಡುತ್ತಿದ್ದೇನೆ. ನನ್ನ ಆತ್ಮೀಯ ರಾಮಚಂದ್ರನ ಮೇಲಿನ ಪ್ರೀತಿಯಿಂದ ಇಲ್ಲಿದೆ ಬಂದಿದ್ದೇನೆ ಅವರು ಕೂಡ ಮನವಿ ಮಾಡಿಕೊಂಡಿದ್ದರು. ರಾಮಚಂದ್ರ 3500 ಕೋಟಿಗೂ ಹೆಚ್ಚು ಅನುದಾನ ತಂದು ಅಭಿವೃದ್ಧಿ ಮಾಡಿದ್ದಾರೆ ಎಂದರು.
ಬನಾರಸ್ ಹಿರೋ ಝೈದ್ ಖಾನ್ ಬಾಲಿವುಡ್ನಿಂದ ಬಂದ ಆಫರ್ ಬೇಡ ಅಂದಿದ್ದೇಕೆ ಗೊತ್ತಾ?
ನನ್ನ ಶಿಕಾರಿಪುರದಲ್ಲಿ ಕೂಡ ಇಷ್ಟು ದೊಡ್ಡ ಕೆಲಸ ಮಾಡಿಲ್ಲ. ಯಾವ ಶಾಸಕರು ಕೂಡ ಇಷ್ಟು ಅನುದಾನ ತಂದು ಅಭಿವೃದ್ಧಿ ಮಾಡಿಲ್ಲ. ಅದಕ್ಕೆ ಇವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ 145ಕ್ಕೂ ಹೆಚ್ಚು ಸೀಟ್ ಗೆದ್ದು ಅಧಿಕಾರ ಹಿಡಿಯುವುದು ಖಚಿತ. ಸೂರ್ಯ ಚಂದ್ರರು ಇರುವುದು ಎಷ್ಟು ಸತ್ಯವೋ ಅಷ್ಟೇ ಸತ್ಯ ನಾವು ಅಧಿಕಾರಕ್ಕೆ ಬರುವುದು. ಆದರೆ ಈ ಕಾಂಗ್ರೆಸ್ ನವರು ತಿರುಕನ ಕನಸನ್ನು ಕಾಣುತ್ತಿದ್ದಾರೆ. ಅವರು ಯಾವಾಗಲೂ ಅಧಿಕಾರಕ್ಕೆ ಬರೋದಿಲ್ಲ ಎಂದು ಹೇಳಿದರು.