ರಾಯಚೂರು: ಜಿಲ್ಲೆಯಲ್ಲಿ ಕಸ ವಿಲೇವಾರಿ ವಾಹನಗಳನ್ನು ಬಿಡದೇ ಕಳ್ಳರು ಕದ್ದೊಯ್ದಿರುವಂತ ಅಚ್ಚರಿಯ ಘಟನೆ ನಡೆದಿದೆ.
ರಾಯಚೂರಿನ ಸಿರಿವಾರ ತಾಲ್ಲೂಕಿನ ಕವಿತಾಳದಲ್ಲಿ ಗೇಟ್ ಬೀಗ ಮುರಿದು ಕಸ ವಿಲೇವಾರಿ ವಾಹನಗಳನ್ನು ಕಳ್ಳರು ಕದ್ದುಕೊಂಡು ಹೋಗಿದ್ದಾರೆ.
ಡೀಸೆಲ್ ಸಮಸ್ಯೆಯಿಂದಾಗಿ ಕವಿತಾಳ ಪಟ್ಟಣ ಪಂಚಾಯ್ತಿ ಕಚೇರಿ ಆವರಣದಲ್ಲಿ ಕಸವಿಲೇವಾರಿ ವಾಹನಗಳನ್ನು ನಿಲ್ಲಿಸಲಾಗಿತ್ತು. ಇತ್ತೀಚಿಗಷ್ಟೇ ಅದಕ್ಕೆ ಹಣ ಬಿಡುಗಡೆಯಾಗಿತ್ತು. ಇನ್ಸೂರೆನ್ಸ್ ಕೂಡ ರಿನೀವಲ್ ಮಾಡಿಸಲಾಗಿತ್ತು.
ನಾಲ್ಕು ಕಸ ವಿಲೇವಾರಿ ವಾಹನಗಳಲ್ಲಿ ಒಂದು ಗಾಡಿಯನ್ನು ಕಳ್ಳರು ಕದ್ದೊಯ್ದಿದ್ದಾರೆ. ಈ ವಾಹನದ ಬೆಲೆ ಸುಮಾರು 8 ಲಕ್ಷ ಎನ್ನಲಾಗುತ್ತಿದೆ. ನಿನ್ನೆ ಎರಡನೇ ಶನಿವಾರದಂದು ರಜೆ ಇದ್ದ ಸಂದರ್ಭದಲ್ಲೇ ಈ ಕಳ್ಳತನ ನಡೆದಿದೆ. ಈ ಸಂಬಂಧ ಕವಿತಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೇವನಹಳ್ಳಿ ಭೂ ಸ್ವಾಧೀನ ಬಿಕ್ಕಟ್ಟಿನ ಬಗ್ಗೆ ಮಂಗಳವಾರ ಸಿಎಂ ಅಂತಿಮ ತೀರ್ಮಾನ: ಸಚಿವ ಎಂ.ಬಿ ಪಾಟೀಲ್
Watch Video: ಇಂಗ್ಲೀಷ್ ಮೇಷ್ಟ್ರಾದ ಸಚಿವ ಡಾ.ಶರಣಪ್ರಕಾಶ ಪಾಟೀಲ: ವೀಡಿಯೋ ವೈರಲ್