ಹರಿಯಾಣ: ಹರ್ಯಾಣದಲ್ಲಿ ಬಸ್ ಚಾಲಕನೊಬ್ಬ ಸರಗಳ್ಳನ ಬೈಕ್ ಗೆ ಬಸ್ ಡಿಕ್ಕಿ ಹೊಡೆದು ಪರಾರಿಯಾಗುವ ಪ್ರಯತ್ನವನ್ನು ವಿಫಲಗೊಳಿಸಿದ್ದಾನೆ. ಇಡೀ ಘಟನೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ. ಆ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಪಾದಚಾರಿಯೊಬ್ಬರಿಂದ ಕಳ್ಳತನ ಮಾಡಿದ ನಂತರ ಸರಗಳ್ಳರು ಬೈಕ್ ನಲ್ಲಿ ಪರಾರಿಯಾಗುತ್ತಿರುವುದನ್ನು ಬಸ್ ಚಾಲಕ ಗಮನಿಸಿದ್ದಾನೆ. ಯಾವುದೇ ಹಿಂಜರಿಕೆಯಿಲ್ಲದೆ, ಬಸ್ ಚಾಲಕ ಸಮಯ ಪ್ರಜ್ಞೆ ಎಂಬಂತೆ ಬೈಕಿಗೆ ಬಸ್ ಡಿಕ್ಕಿ ಹೊಡೆದನು. ಇದರಿಂದಾಗಿ ಕಳ್ಳರು ಸಮತೋಲನ ಕಳೆದುಕೊಂಡು ಕೆಳಗೆ ಬಿದ್ದರು.
ಆದಾಗ್ಯೂ ಕಳ್ಳರು ಘಟನಾ ಸ್ಥಳದಿಂದ ಕಾಲ್ನಡಿಗೆಯಲ್ಲಿ ಓಡಿಹೋದರು. ಅವರು ಸಿಕ್ಕಿಬಿದ್ದಿದ್ದಾರೆಯೇ ಎಂಬುದು ಇನ್ನೂ ತಿಳಿದುಬಂದಿಲ್ಲ. ನಾಟಕೀಯ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ.
ಈಗ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೀಡಿಯೋ ವೈರಲ್ ಆಗಿದೆ. ವೀಡಿಯೋ ನೋಡಿದಂತ ನೆಟ್ಟಿಗರು, ಬಸ್ ಚಾಲಕನ ಸಮಯ ಪ್ರಜ್ಞೆ ಮತ್ತು ಧೈರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ.
हरियाणा में चैन स्नैचिंग कर रहे दो बदमाशों को रोडवेज़ बस के ड्राइवर ने सबक सिखाया। #Haryana pic.twitter.com/wr6fQ7OhFY
— TRUE STORY (@TrueStoryUP) May 29, 2024
BREAKING: ಜೂ.3ರಂದು ರಾಜ್ಯ ಸರ್ಕಾರದಿಂದ ಶಿಕ್ಷಕರಿಗೆ ‘ವಿಶೇಷ ಸಾಂದರ್ಭಿಕ ರಜೆ’ ಮಂಜೂರು ಮಾಡಿ ಆದೇಶ
ಮೇ 31ರೊಳಗೆ ಪ್ಯಾನ್ ಅನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಿ: ತೆರಿಗೆದಾರರಿಗೆ ಆದಾಯ ತೆರಿಗೆ ಇಲಾಖೆ ಸೂಚನೆ