ಕೆಎನ್ಎನ್ ಡಿಜಿಟಲ್ ಡೆಸ್ಕ್ : ಸಾಮಾಜಿಕ ಜಾಲತಾಣಗಳಲ್ಲಿ ಊಹೆಗೂ ಮೀರಿದ ಫೋಸ್ಟ್ ಗಳು ವೈರಲ್ ಆಗುತ್ತಿವೆ. ಅಂರಹದ್ದೆ ಘಟನೆಯ ಕುರಿತಂತೆ ಪೋಸ್ಟ್ ವೈರಲ್ ಆಗಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಕಳ್ಳನೊಬ್ಬ ಕಳ್ಳತನ ಮಾಡಿದ ಬಳಿಕ ತಾನು ಮಾಡಿದ ಅಪರಾಧಕ್ಕೆ ಕಾರಣ ಹಾಗೂ ಕ್ಷಮೆಯಾಚಿಸಿದ್ದಾನೆ.
BREAKING NEWS : ಭಯೋತ್ಪಾದಕರ ಗಡಿ ನುಸುಳುವಿಕೆ ವಿಫಲ, ಒರ್ವ ಉಗ್ರ ಉಡೀಸ್
ಟ್ವಟರ್ ನಲ್ಲಿ ಜ್ವೇಲಿ ಥಿಕ್ಸೋ ಎಂಬ ವ್ಯಕ್ತಿ ತಮ್ಮ ಲ್ಯಾಪ್ ಟಾಪ್ ಕದ್ದ ಖದೀಮನಿಂದ ಸ್ವೀಕರಿಸಿದ ಇ-ಮೇಲ್ ಸ್ಕ್ರೀನ್ ಶಾಟ್ ವೊಂದನ್ನು ಹಂಚಿಕೊಂಡಿದ್ದಾರೆ.
ಕಳ್ಳ ಮಾಡಿರುವ ಮೇಲ್ ನಲ್ಲಿ, ಲ್ಯಾಪ್ ಕಳ್ಳತನ ಮಾಡಿದ್ದಕ್ಕೆ ಕ್ಷಮೆ ಇರಲಿ, ನನಗೆ ತುರ್ತು ಹಣದ ಅವಶ್ಯಕತೆ ಇತ್ತು. ಹಾಗಾಗಿ ನಿಮ್ಮ ಲ್ಯಾಪ್ ಟಾಪ್ ಕಳ್ಳತನ ಮಾಡಿದ್ದೇನೆ. ಲ್ಯಾಪ್ ನಲ್ಲಿ ನಿಮಗೆ ಬೇಕಾದ ಮುಖ್ಯವಾದ ಫೈಲ್ ಗಳು ಇದ್ದರೆ ಅದನ್ನು ನನಗೆ ಸೋಮವಾರ ಮಧ್ಯಾಹ್ನ 12 ಗಂಟೆ ಒಳಗೆ ತಿಳಿಸಿ. ಏಕೆಂದರೆ ನನಗೆ ಲ್ಯಾಪ್ ಟಾಪ್ ಖರೀದಿಸಲು ಗ್ರಾಹಕರೋರ್ವರು ಸಿಕ್ಕಿದ್ದಾರೆ. ಅವರಿಗೆ ಮಾರಾಟ ಮಾಡುತ್ತಿದ್ದೇನೆ. ಹಾಗಾಗಿ ಅಗತ್ಯವಾದ ಪೈಲ್ ಬೇಕಿದ್ದರೆ ನಗೆ ಮೇಲ್ ಮಾಡಿ, ಕೂಡಲೇ ಕಳುಹಿಸುವೆ ಎಂದಿದ್ದಾನೆ.
They stole my laptop last night and they sent me an email using my email, I have mixed emotions now.😩 pic.twitter.com/pYt6TVbV1J
— GOD GULUVA (@Zweli_Thixo) October 30, 2022
ಕಳ್ಳನ ಮೇಲ್ ನೋಡಿ ಲ್ಯಾಪ್ ಮಾಲೀಕ ಗೊಂದಕ್ಕೆ ಒಳಗಾಗಿದ್ದು, ಆತನ ಆರ್ಥಿಕ ಪರಿಸ್ಥಿತಿ ಆತನನ್ನು ಈ ಸ್ಥಿತಿಗೆ ತಂದಿದೆ ಎಂದು ಬರೆದುಕೊಂಡಿದ್ದಾರೆ.
ಇಮೇಲ್ ವೈರಲ್ ಆಗಿರುವುದರಿಂದ, ಕಳ್ಳನಿಂದ ಕ್ಷಮೆಯಾಚಿಸುವ ಮೇಲ್ ಕೆಲವು ಬಳಕೆದಾರರಿಗೆ ಸಹಾನುಭೂತಿ ಗಳಿಸುವಲ್ಲಿ ಯಶಸ್ವಿಯಾಗಿದೆ. ಪೋಸ್ಟ್ ಮಾಡಿದ ಟ್ವೀಟ್ 30,000 ಕ್ಕೂ ಹೆಚ್ಚು ರೀಟ್ವೀಟ್ಗಳನ್ನು ಮತ್ತು 2.5 ಲಕ್ಷಕ್ಕೂ ಹೆಚ್ಚು ‘ಲೈಕ್ಗಳನ್ನು‘ ಸ್ವೀಕರಿಸಿದೆ.