ನವದೆಹಲಿ : ದೆಹಲಿ ವಕ್ಫ್ ಬೋರ್ಡ್ ನೇಮಕಾತಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ ಶಾಸಕ ಅಮಾನತುಲ್ಲಾ ಖಾನ್ ಬಂಧನಕ್ಕೊಳಗಾಗಿದ್ದಾರೆ. ಈ ಕುರಿತಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರತಿಕ್ರಿಯಿಸಿದ್ದು, ಆಡಳಿತರೂಢ ಬಿಜಿಪಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
पहले इन्होंने सत्येंद्र जैन को गिरफ़्तार किया। कोर्ट के बार बार पूछने पर भी ये कोई सबूत पेश नहीं कर पा रहे
फिर मनीष के घर रेड की, कुछ नहीं मिला
अब अमानतुल्लाह को गिरफ़्तार किया है, अभी और भी कई MLAs को गिरफ़्तार करेंगे
गुजरात में लगता है इन्हें तकलीफ़ बहुत ज़्यादा हो रही है https://t.co/oYYu8eMIAw
— Arvind Kejriwal (@ArvindKejriwal) September 17, 2022
ಈ ಕುರಿತಂತೆ ಟ್ವೀಟಿ ಮಾಡಿರುವ ಅವರು, ಗುಜರಾತ್ನಲ್ಲಿ ಅವರು ತುಂಬಾ ಬಳಲುತ್ತಿರುವಂತೆ ತೋರುತ್ತಿದೆ. ಮೊದಲು ಸತ್ಯೇಂದ್ರ ಜೈನ್ ಅವರನ್ನು ಬಂಧಿಸಿದರು. ಪದೇ ಪದೇ ನ್ಯಾಯಾಲಯಕ್ಕೆ ಮನವಿ ಮಾಡಿದರೂ ಯಾವುದೇ ಸಾಕ್ಷ್ಯವನ್ನು ಮಂಡಿಸಲು ಸಾಧ್ಯವಾಗುತ್ತಿಲ್ಲ.. ನಂತರ ಮನೀಶ್ ಮನೆ ಮೇಲೆ ದಾಳಿ ನಡೆಸಿದರೂ ಏನೂ ಪತ್ತೆಯಾಗಿಲ್ಲ. ಈಗ ಅಮಾನತುಲ್ಲಾ ಅವರನ್ನು ಬಂಧಿಸಲಾಗಿದೆ. ಗುಜರಾತ್ನಲ್ಲಿ ಅವರು ತುಂಬಾ ಬಳಲುತ್ತಿರುವಂತೆ ತೋರುತ್ತಿದೆ ಎಂದು ಬರೆದಿದ್ದಾರೆ.
ಬೀದರ್-ಬಳ್ಳಾರಿ ಚತುಷ್ಪಥ ಎಕ್ಸ್ ಪ್ರೆಸ್ ಹೆದ್ದಾರಿ ನಿರ್ಮಾಣ – ಸಿಎಂ ಬೊಮ್ಮಾಯಿ ಘೋಷಣೆ
ಅಮಾನತುಲ್ಲಾ ಬಂಧನದ ಬಗ್ಗೆ ಎಎಪಿ ಕೂಡ ಪ್ರತಿಕ್ರಿಯಿಸಿದ್ದು, ಶಾಸಕರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸುವ ಮತ್ತು ಪಕ್ಷಕ್ಕೆ ಮಾನಹಾನಿ ಮಾಡುವ ಸಂಚು ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಮಾನತುಲ್ಲಾ ಖಾನ್ ಅವರ ಆಪ್ತ ಸಹಾಯಕ ಮತ್ತು ವ್ಯಾಪಾರ ಪಾಲುದಾರ ಹಮೀದ್ ಅಲಿಯನ್ನು ದೆಹಲಿ ಪೊಲೀಸರು ಇಂದು ಶಸ್ತ್ರಾಸ್ತ್ರ ಕಾಯ್ದೆಯಡಿ ಬಂಧಿಸಿದ್ದಾರೆ. ಅವರ ನಿವಾಸದಿಂದ ಪೊಲೀಸರು ಪಿಸ್ತೂಲ್, ಕೆಲವು ಗುಂಡುಗಳು ಮತ್ತು 12 ಲಕ್ಷ ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ.
‘ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ’ದಂದೇ ಜನತೆಗೆ ಭರ್ಜಸಿ ಸಿಹಿಸುದ್ದಿ ನೀಡಿದ ‘ಸಿಎಂ ಬೊಮ್ಮಾಯಿ’