ಪುತ್ತೂರು : ಬಿಜೆಪಿ ಕಾರ್ಯಕರ್ತ ಪ್ರವೀಣ್ ಹತ್ಯೆ ಪ್ರಕರಣ ಸಂಬಂಧಿಸಿದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಕುರಿತು ಮಾತನಾಡಿ ʻಅನಗತ್ಯವಾಗಿ ನಮ್ಮವರ ಮೇಲೆ ಕೊಲೆ ಆರೋಪಿಸ್ತಿದ್ದಾರೆ ʼ ಶಫೀಕ್ ಕುಟುಂಬಸ್ಥರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಶಫೀಕ್ ಪಿಎಫ್ಐ ಸಂಘಟನೆಗೆ ಸೇರಿದ್ದಾರೆ. ಸಂಘಟನೆಯಲ್ಲಿ ಯಾರು ಇರಲ್ಲ ಎಲ್ಲರು ಸೇರಿರುತ್ತಾರೆ. ಆದರೆ ನನ್ನ ಮಗ ಕೊಲೆ ಮಾಡಲು ಸಾಧ್ಯವಿಲ್ಲ. ಮರ್ಡರ್ ಮಾಡಿದವರಿಗೆ ಶಿಕ್ಷೆ ಆಗಬೇಕು. ನನ್ನ ಮಗನನ್ನು ಈ ಕೇಸ್ನಲ್ಲಿ ತಳುಕಿ ಹಾಕಿದ್ದಾರೆ. ಶಫೀಕ್ ತಂದೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಅಸಲಿ ಆರೋಪಿಗಳನ್ನು ಹಿಡಿದು ನಮ್ಮವರನ್ನು ಬಿಡಿ. ʻ ಅನಗತ್ಯವಾಗಿ ನಮ್ಮವರ ಮೇಲೆ ಆರೋಪಿಸ್ತಿದ್ದಾರೆ . ಕೊಲೆ ಬಗ್ಗೆ ತಿಳಿದು ಶಫೀಕ್ ಪತ್ನಿ ಕಣ್ಣಿರು ಹಾಕುವ ಮೂಲಕ ಮಾಧ್ಯಮಗಳಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.