ಬೆಂಗಳೂರು : ವರದಕ್ಷಿಣೆಗಾಗಿ ನಿತ್ಯವೂ ಕಿರುಕುಳ ಆರೋಪ ಹಿನ್ನೆಲೆಯಲ್ಲಿ, ಇದರಿಂದ ಬೇಸತ್ತು ಉಪನ್ಯಾಸಕಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಘಾಟಿ ಬಳಿಯಿರುವ ವಿಶ್ವೇಶ್ವರಯ್ಯ ಪಿಕ್ ಅಪ್ ಡ್ಯಾಂನಲ್ಲಿ ನಡೆದಿದೆ. ಪತಿಯ ಮನೆಯವರ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಉಪನ್ಯಾಸಕಿ ಪುಷ್ಪಾವತಿ (30) ದೊಡ್ಡಬಳ್ಳಾಪುರದ ವಿಶ್ವೇಶ್ವರಯ್ಯ ಡ್ಯಾಮ್ ಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ದೊಡ್ಡಬಳ್ಳಾಪುರದ ಘಾಟಿಯ ವಿಶ್ವೇಶ್ವರಯ್ಯ ಡ್ಯಾಮ್ ನಲ್ಲಿ ಬಿದ್ದು ಉಪನ್ಯಾಸಕಿ ಪುಷ್ಪಾವತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅತ್ತೆ ಮಾವ ಗಂಡನ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಮಾಡಿದ್ದಾರೆ. ವಿಡಿಯೋ ಮಾಡಿ ಉಪನ್ಯಾಸಕಿ ಪುಷ್ಪಾವತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪತಿ ಮನೆಯವರು ನನ್ನ ಸಾಯಿಸೋಕೆ ಪ್ಲಾನ್ ಮಾಡಿದ್ದರು. ನನಗೆ ತುಂಬಾ ಹಿಂಸೆ ಕೊಟ್ಟಿದ್ದಾರೆ. ಊಟಕ್ಕೆ ವಿಷ ಹಾಕಿ ನನ್ನನ್ನು ಸಾಯಿಸೋಕೆ ಪ್ಲಾನ್ ಮಾಡಿದ್ದರು. ಹಾಗಾಗಿ ಊಟ ಸಹ ಮಾಡುತ್ತಿರಲಿಲ್ಲ.
ನಾನು ಅಡಿಗೆ ಮಾಡಿದರೆ ಮಾತ್ರ ಊಟ ಮಾಡುತ್ತಿದ್ದೆ. ಇಷ್ಟೆಲ್ಲ ಆದ್ಮೇಲೆ ಸಮಾಜದಲ್ಲಿ ಸಂಬಂಧಿಕರೆಲ್ಲರೂ ನಗೋ ತರ ಆಗೋಯ್ತು. ನನ್ನ ಜೀವನ ನಾನು ಮಾಡಿರುವ ತಪ್ಪಾದರೂ ಏನು? ವರದಕ್ಷಿಣೆಗಾಗಿ ಮೋಸ ಮಾಡಿ ಬ್ಲಾಕ್ ಮಾಡಿ ಮದುವೆ ಮಾಡಿಕೊಂಡು ಈಗ ನನ್ನ ಗಂಡ ಎರಡನೇ ಮದುವೆ ಮಾಡಿಕೊಳ್ಳುವ ಪ್ಲಾನ್ ಮಾಡಿಕೊಂಡಿದ್ದಾನೆ. ಹಾಗಾಗಿ ನಾನು ತವರು ಮನೆಗೂ ಸಹ ಬರುತ್ತಿರಲಿಲ್ಲ ತವರು ಮನೆ ಅವರ ಹತ್ತಿರ ಕೂಡ ಮಾತನಾಡುತ್ತಿರಲಿಲ್ಲ ಎಂದು ವಿಡಿಯೋದಲ್ಲಿ ಉಪನ್ಯಾಸಕಿ ಅಳುತ್ತ ವಿಡಿಯೋ ಮಾಡಿದ್ದಾರೆ.
ಮೃತ ಪುಪ್ಪಾಳನ್ನು ತಪಸೀಹಳ್ಳಿ ಗ್ರಾಮದ ವೇಣು ಎಂಬುವವರ ಜೊತೆ ಕಳೆದ ಒಂದೂವರೆ ವರ್ಷದ ಹಿಂದೆ ವಿವಾಹ ಮಾಡಿಕೊಡಲಾಗಿತ್ತು. ಆದ್ರೆ ವಿವಾಹವಾದ ನಂತರ ಹೆಚ್ಚಿನ ವರದಕ್ಷಿಣೆ ಹಾಗೂ ನಿವೇಶನಕ್ಕಾಗಿ ಗಂಡನ ಮನೆಯವರು ಪೀಡಿಸಿ ಕಿರಕುಳ ಕೊಡ್ತಿದ್ದರಂತೆ. ಇದರ ನಡುವೆ ಮೈದುನನ ಜೊತೆ ಮಲಗುವಂತೆಯೂ ಬಲವಂತ ಮಾಡಿದ್ದಾರೆ ಎಂದು ಆರೋಪ ಮಾಡಿ ಗೃಹಿಣಿ ಪುಷ್ಪ 8 ನಿಮಿಷಗಳ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಪುಷ್ಪ ಸೋಮವಾರ (ಅ.20) ವಿಶ್ವೇಶ್ವರಯ್ಯ ಪಿಕ್ ಅಪ್ ಡ್ಯಾಂನಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.
ಪುಷ್ಪಾವತಿ ಮನೆಗೆ ಬಾರದಿದ್ದರಿಂದ ಪೋಷಕರು ಹುಡುಕಾಟ ನಡೆಸಿದ್ದಾರೆ. ದೊಡ್ಡಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಕೇಸ ಸಹ ದಾಖಲಿಸಿದ್ದರು. ಇದೀಗ ಘಾಟಿಯ ಪಿಕಪ್ ಡ್ಯಾಮ್ ನಲ್ಲಿ ಪುಷ್ಪಾವತಿ ಮೃತದೇಹ ಪತ್ತೆಯಾಗಿದೆ. ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಡಿಯೋ ಕೊನೆಯಲ್ಲಿ ನನ್ನ ಶವವನ್ನು ಗಂಡನ ಮನೆಯ ಎದುರೇ ಸಂಸ್ಕಾರ ಮಾಡಿ ಎಂದು ಪುಷ್ಪವತಿ ಹೇಳಿಕೊಂಡಿದ್ದಾರೆ.