ಹಾಸನ : ಅಶ್ಲೀಲ ವಿಡಿಯೋ ಪ್ರಕಾಣಕ್ಕೆ ಸಂಬಂಧಿಸಿದಂತೆ ಎ1 ಆರೋಪಿಯಾಗಿರುವ ಜೆಡಿಎಸ್ ಶಾಸಕ ಎಚ್ ಡಿ ರೇವಣ್ಣರನ್ನು ದೈಹಿಕ ಹಗು ಮಾನಸಿಕವಾಗಿ ವೀಕ್ ಮಾಡಬೇಕೆಂದು ಷಡ್ಯಂತರ ಮಾಡುತ್ತಿದ್ದಾರೆ ಎಂದು ಎಚ್ ಡಿ ರೇವಣ್ಣರ ಇನ್ನೊಬ್ಬ ಪುತ್ರ ಶಿವರಾಜ್ ರೇವಣ್ಣ ಆರೋಪಿಸಿದರು.
ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ದುರುದ್ದೇಶದಿಂದ ಏನು ಬೇಕಾದರೂ ಮಾಡುತ್ತಾರೆ. ಎಚ್ ಡಿ ರೇವಣ್ಣ ವಿರುದ್ಧ 1000 ಕೆಎಸ್ ಬೇಕಾದರೂ ದಾಖಲಾಗಲಿ ಏನು ಸಾಬೀತಾಗಬೇಕು ಅದು ಸಾಬೀತಾಗಲಿದೆ ಎಂದು ಅವರು ತಿಳಿಸಿದರು.
ಎಚ್ ಡಿ ರೇವಣ್ಣ ಏನೆಂದು ನಮ್ಮ ಜಿಲ್ಲೆಯ ಜನರಿಗೆ ಗೊತ್ತಿದೆ. ಪ್ರಜ್ವಲ್ ವಿದೇಶದಿಂದ ಬರುವುದರ ಕುರಿತು ನನಗೆ ಯಾವುದೇ ರೀತಿಯಾದಂತಹ ಮಾಹಿತಿ ಇಲ್ಲ ಎಚ್ ಡಿ ರೇವಣ್ಣರನ್ನು ವೀಕ್ ಮಾಡಬೇಕೆಂದು ಷಡ್ಯಂತ್ರ ಮಾಡುತ್ತಿದ್ದಾರೆ.ಹಾಸನ ಜಿಲ್ಲಾ ರಾಜಕಾರಣದಲ್ಲಿ ಎಚ್ ಡಿ ರೇವಣ್ಣಗೆ ಪ್ರತಿ ಸ್ಪರ್ಧಿ ಇಲ್ಲ ಎಂದು ಸೂರಜ್ ರೇವಣ್ಣ ತಿಳಿಸಿದರು.
ಸಂಸದ ಪ್ರಜ್ವಲ್ ಯಾವಾಗ ಬರುತ್ತಾರೋ ನನಗೆ ಗೊತ್ತಿಲ್ಲ. ಕಾರ್ಯಕರ್ತರು ಗೊಂದಲದಲ್ಲಿ ಇಲ್ಲ. ಯಾರು ಏನು ಬೇಕಾದರೂ ಹೇಳಲಿ ತನಿಖೆಯ ಬಳಿಕ ಎಲ್ಲವೂ ಗೊತ್ತಾಗುತ್ತದೆ ಎಂದು ಅವರು ಹೇಳಿದರು.