ಬೆಳಗಾವಿ: ಬೆಳಗಾವಿ ರೈಲು ನಿಲ್ದಾಣದಲ್ಲಿ ನಡೆಯುತ್ತಿರುವ ಯಾರ್ಡ್ ಮಾರ್ಪಾಡು ಕಾಮಗಾರಿ ಹಿನ್ನಲೆಯಲ್ಲಿ, ಈ ಕೆಳಗಿನ ರೈಲುಗಳ ಸಂಚಾರದಲ್ಲಿ ಭಾಗಶಃ ರದ್ದು, ನಿಯಂತ್ರಣ ಹಾಗೂ ತಡವಾಗಿ ಸಂಚರಿಸಲಿದೆ.
ಭಾಗಶಃ ರದ್ದು:
1. ರೈಲು ಸಂಖ್ಯೆ 07302 ಮೀರಜ್– ಬೆಳಗಾವಿ ವಿಶೇಷ ರೈಲು ಸೆ. 7ರಿಂದ 10ರವರೆಗೆ ಘಟಪ್ರಭಾದಲ್ಲಿ ತನ್ನ ಪ್ರಯಾಣ ಕೊನೆಗೊಳಿಸಲಿದೆ. ಈ ರೈಲಿನ ಸಂಚಾರ ಘಟಪ್ರಭಾ ಮತ್ತು ಬೆಳಗಾವಿ ನಡುವೆ ರದ್ದುಗೊಳಿಸಲಾಗಿದೆ.
2. ರೈಲು ಸಂಖ್ಯೆ 07303 ಬೆಳಗಾವಿ – ಮೀರಜ್ ವಿಶೇಷ ರೈಲು ಸೆ. 7ರಿಂದ 10ರವರೆಗೆ ಬೆಳಗಾವಿಯಿಂದ ಹೊರಡುವ ಬದಲು ಘಟಪ್ರಭಾದಿಂದ ಹೊರಡಲಿದೆ. ಈ ರೈಲಿನ ಸಂಚಾರ ಬೆಳಗಾವಿ ಮತ್ತು ಘಟಪ್ರಭಾ ನಡುವೆ ರದ್ದಾಗಿದೆ.
ನಿಯಂತ್ರಣ ಮತ್ತು ಮರುನಿಗದಿ:
1. ಸೆ. 7ರಂದು ಹೊರಡುವ ರೈಲು ಸಂಖ್ಯೆ 16534 ಕೆಎಸ್ಆರ್ ಬೆಂಗಳೂರು – ಭಗತ್ ಕಿ ಕೋಠಿ ಎಕ್ಸ್‌ಪ್ರೆಸ್ ರೈಲು ಮಾರ್ಗದಲ್ಲಿ 30 ನಿಮಿಷಗಳ ಕಾಲ ನಿಯಂತ್ರಿಸಲ್ಪಡಲಿದೆ.
2. ಸೆ. 8ರಂದು ಹೊರಡುವ ಮೂರು ರೈಲುಗಳಾದ ಸಂಖ್ಯೆ 06529 ಎಸ್ಎಂವಿಟಿ ಬೆಂಗಳೂರು – ಗೋಮತಿನಗರ ಎಕ್ಸ್‌ಪ್ರೆಸ್ ವಿಶೇಷ, ಸಂಖ್ಯೆ 16508 ಕೆಎಸ್ಆರ್ ಬೆಂಗಳೂರು – ಜೋಧಪುರ ಎಕ್ಸ್‌ಪ್ರೆಸ್ ಮತ್ತು ಸಂಖ್ಯೆ 07315 ಎಸ್ಎಸ್ಎಸ್ ಹುಬ್ಬಳ್ಳಿ – ಮುಜಫ್ಫರ್‌ಪುರ ಎಕ್ಸ್‌ಪ್ರೆಸ್ ವಿಶೇಷ ರೈಲುಗಳು ಮಾರ್ಗದಲ್ಲಿ ತಲಾ 30 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
3. ಸೆ. 8ರಂದು ಹೊರಡುವ ರೈಲು ಸಂಖ್ಯೆ 07363 ಎಸ್ಎಸ್ಎಸ್ ಹುಬ್ಬಳ್ಳಿ – ಯೋಗ ನಗರಿ ರಿಷಿಕೇಶ್ ಎಕ್ಸ್‌ಪ್ರೆಸ್ ವಿಶೇಷ ರೈಲು ಮಾರ್ಗ ಮಧ್ಯದಲ್ಲಿ 20 ನಿಮಿಷಗಳ ಕಾಲ ನಿಯಂತ್ರಣಕ್ಕೆ ಒಳಪಡುತ್ತದೆ.
4. ಸೆ. 8, 9 ಮತ್ತು 10 ರಂದು ಹೊರಡುವ ರೈಲು ಸಂಖ್ಯೆ 56931 ಮೀರಜ್ – ಲೊಂಡಾ ಪ್ಯಾಸೆಂಜರ್ ಹಾಗೂ ರೈಲು ಸಂಖ್ಯೆ 17334 ಕ್ಯಾಸಲ್ ರಾಕ್ – ಮೀರಜ್ ಎಕ್ಸ್‌ಪ್ರೆಸ್ ರೈಲುಗಳು ಕ್ರಮವಾಗಿ 20 ನಿಮಿಷ ಮತ್ತು 30 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
5. ಸೆ. 9ರಂದು ಹೊರಡುವ ರೈಲು ಸಂಖ್ಯೆ 16210 ಮೈಸೂರು – ಅಜ್ಮೀರ್ ಎಕ್ಸ್‌ಪ್ರೆಸ್ ಮತ್ತು ಸೆ. 10ರಂದು ಹೊರಡುವ ರೈಲು ಸಂಖ್ಯೆ 17416 ಕೊಲ್ಹಾಪುರ – ತಿರುಪತಿ ಹರಿಪ್ರಿಯಾ ಎಕ್ಸ್‌ಪ್ರೆಸ್ ರೈಲುಗಳು 30 ನಿಮಿಷಗಳ ಕಾಲ ಮಾರ್ಗದಲ್ಲಿ ನಿಯಂತ್ರಣಕ್ಕೆ ಒಳಪಡುತ್ತವೆ.
6. ಸೆ. 10ರಂದು ಹೊರಡುವ ರೈಲು ಸಂಖ್ಯೆ 17333 ಮೀರಜ್ – ಕ್ಯಾಸಲ್ ರಾಕ್ ಎಕ್ಸ್‌ಪ್ರೆಸ್ ಮತ್ತು ರೈಲು ಸಂಖ್ಯೆ 17332 ಎಸ್ಎಸ್ಎಸ್ ಹುಬ್ಬಳ್ಳಿ – ಮೀರಜ್ ಎಕ್ಸ್‌ಪ್ರೆಸ್ ರೈಲುಗಳ ಸಂಚಾರವನ್ನು ತಲಾ 90 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
7. ಸೆ. 8 ಮತ್ತು 9ರಂದು ಹೊರಡುವ ರೈಲು ಸಂಖ್ಯೆ 17325 ಬೆಳಗಾವಿ – ಮೈಸೂರು ವಿಶ್ವಮಾನವ ಎಕ್ಸ್‌ಪ್ರೆಸ್ ರೈಲು ಬೆಳಗಾವಿಯಿಂದ 120 ನಿಮಿಷಗಳ ಕಾಲ ತಡವಾಗಿ ಸಂಚರಿಸಲಿದೆ.
BREAKING: ಧರ್ಮಸ್ಥಳ ಕೇಸಿಗೆ ಬಿಗ್ ಟ್ವಿಸ್ಟ್: ಮಾಸ್ಕ್ ಮ್ಯಾನ್ ಚಿನ್ನಯ್ಯಗೆ ಬುರುಡೆ ತಂದುಕೊಟ್ಟಿದ್ದೇ ಸೌಜನ್ಯ ಮಾವ
ಸಾಗರ ತಾಲ್ಲೂಕನ್ನು ನೂತನ ಜಿಲ್ಲೆಯಾಗಿ ಮಾಡಿ: ಸಿಎಂ ಸಿದ್ಧರಾಮಯ್ಯಗೆ ಶಾಸಕ ಗೋಪಾಲಕೃಷ್ಣ ಬೇಳೂರು ಪತ್ರ