ಗರ್ಭಿಣಿಯರ ಆರೋಗ್ಯ ತೀರಾ ಸೂಕ್ಷ್ಮವಾಗಿರುತ್ತದೆ. ಇದೇ ಸಮಯದಲ್ಲಿ ಇವರಿಗೆ ಹೆಚ್ಚು ರೋಗ ನಿರೋಧಕ ಶಕ್ತಿ ಕೂಡ ಬೇಕಾಗುತ್ತದೆ. ಹೀಗೆ ಈ ಕೆಳಗಿನ ಆಹಾರ ಪದಾರ್ಥಗಳು ಗರ್ಭಿಣಿಯರಿಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಮುಖ್ಯಪಾತ್ರ ನಿರ್ವಹಿಸುತ್ತವೆ.
ಅರಿಶಿನ: ಅರಿಶಿನ ಇದು ಆಂಟಿ ಸೆಫ್ಟಿಕ್ ರೀತಿಯಲ್ಲಿ ಕೆಲಸ ಮಾಡುತ್ತದೆ. ರಾತ್ರಿ ಮಲಗುವ ಮುನ್ನ ಹಾಲಿನೊಂದಿಗೆ ಅರಿಶಿನ ಬೆರಸಿ ಸೇವಿಸಿದರೆ ದೇಹಕ್ಕೆ ಆಗುವ ಸಣ್ಣ ಪುಟ್ಟ ವೈರಲ್ ಸೋಂಕಿನಿಂದ ರಕ್ಷಣೆ ನೀಡುತ್ತದೆ. ಚಳಿಗಾಲದಲ್ಲಿ ಕಾಡುವ ಶೀತ ಕೆಮ್ಮಿಗೆ ಇದು ತಡಯೊಡ್ಡುತ್ತದೆ.
ಶುಂಠಿ: ಇದನ್ನು ಗರ್ಭಿಣಿಯರ ಅಡುಗೆ ತಯಾರಿಸುವಲ್ಲಿ ಬಳಸಬಹುದು. ಇದು ಉರಿಯೂತ ಗುಣಲಕ್ಷಣಗಳನ್ನು ಹೊಂದಿದ್ದು, ವಾಕರಿಗೆ, ತಲೆ ಸುತ್ತುವುದು ಹಾಗು ಮೈಕೈ ನೋವನ್ನು ಹೋಗಲಾಡಿಸುತ್ತದೆ. ಇದು ಜೀರ್ಣಕ್ರಿಯೆಗೆ ಉತ್ತಮವಾದ ಮನೆಮದ್ದು. ಇದರ ಸೇವನೆ ಗರ್ಭಿಣಿಯರ ದೇಹವನ್ನು ಬೆಚ್ಚಗಿಡುತ್ತದೆ.
ಬೆಳ್ಳುಳ್ಳಿ: ಚಳಿಗಾಲದಲ್ಲಿ ಗರ್ಭಿಣಿಯರು ಬೆಳ್ಳುಳ್ಳಿಯ ಸೇವನೆಯನ್ನು ನಿರಾಕರಿಸಬಾರದು. ಇದರ ಸೇವನೆಯಿಂದ ಚಳಿಗಾಲದಲ್ಲಿ ಆಗುವ ವೈರಲ್ ಸೋಂಕಿನಿಂದ ರಕ್ಷಣೆ ನೀಡುತ್ತದೆ. ಬೆಳ್ಳುಳ್ಳಿಯನ್ನು ನಿತ್ಯದ ಅಡುಗೆಯಲ್ಲಿ ಸೇರಿಸಿ ಊಟ ಮಾಡಿದರೆ ಹೊಟ್ಟೆ ಉಬ್ಬರ, ಗ್ಯಾಸ್‌ನಂತಹ ಆಸಿಡಿಟಿ ಸಮಸ್ಯೆಯನ್ನು ಸಹ ನಿವಾರಣೆ ಮಾಡಿ. ದೇಹಕ್ಕೆ ರೋಗ ನಿರೋಧಕ ಶಕ್ತಿ ನೀಡುತ್ತದೆ.
ಹಾಲು: ಗರ್ಭಿಣಿಯರಿಗೆ ನಿತ್ಯವೂ ಒಂದು ಲೋಟ ಹಾಲು ಕುಡಿಯಲು ವೈದ್ಯರು ಸಲಹೆ ನೀಡುತ್ತಾರೆ. ಇದರಲ್ಲಿ ಕ್ಯಾಲ್ಸಿಯಂ ಅಂಶ ತಾಯಿ ಹಾಗು ಹೊಟ್ಟೆಯಲ್ಲಿನ ಮಗುವಿ ಆರೋಗ್ಯಕ್ಕೆ ತುಂಬಾ ಸಹಕಾರಿ ಹಾಗು ಇದು ರೋಗ ನಿರೋಧಕ ಶಕ್ತಿಯನ್ನು ದೇಹಕ್ಕೆ ನೀಡುತ್ತದೆ.
ನೆಲ್ಲಿಕಾಯಿ: ಇದರಲ್ಲಿ ವಿಟಮಿನ್ ಸಿ ಹೇರಳವಾಗಿದ್ದು, ಅನೇಕ ನೈಸರ್ಗಿಕ ಪೋಷಕಾಂಶಗಳನ್ನು ನೀಡುತ್ತದೆ.ಇದರಲ್ಲಿ ಕಬ್ಬಿಣಾಂಶವಿದ್ದು ಗರ್ಭಿಣಿಯರು ಆಗಾಗ ಇದನ್ನು ಸೇವಿಸಿ ಆರೋಗ್ಯ ಸಮತೋಲನದಲ್ಲಿ ಇರುತ್ತದೆ ಹಾಗಿ ಇದು ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನೂ ನೀಡುತ್ತದೆ.